ಆಮದು ಖಾದ್ಯತೈಲಗಳ ಗರಿಷ್ಠ ಮಾರಾಟ (ಎಂಆರ್‌ಪಿ) ಬೆಲೆಯನ್ನು ಒಂದು ವಾರದೊಳಗೆ ಪ್ರತಿ ಲೀ.ಗೆ 10 ರೂ.ವರೆಗೆ ಕಡಿತಗೊಳಿಸುವಂತೆ ಕೇಂದ್ರ ಸರಕಾರವು ಬುಧವಾರ ಖಾದ್ಯ ತೈಲ ತಯಾರಕರಿಗೆ ಸೂಚಿಸಿದೆ.
0
samarasasudhi
ಜುಲೈ 07, 2022
ಆಮದು ಖಾದ್ಯತೈಲಗಳ ಗರಿಷ್ಠ ಮಾರಾಟ (ಎಂಆರ್‌ಪಿ) ಬೆಲೆಯನ್ನು ಒಂದು ವಾರದೊಳಗೆ ಪ್ರತಿ ಲೀ.ಗೆ 10 ರೂ.ವರೆಗೆ ಕಡಿತಗೊಳಿಸುವಂತೆ ಕೇಂದ್ರ ಸರಕಾರವು ಬುಧವಾರ ಖಾದ್ಯ ತೈಲ ತಯಾರಕರಿಗೆ ಸೂಚಿಸಿದೆ.
ಖಾದ್ಯತೈಲಗಳ ಜಾಗತಿಕ ಬೆಲೆಗಳ ಕುಸಿತದ ಬಗ್ಗೆ ಚರ್ಚಿಸಲು ಖಾದ್ಯತೈಲಗಳ ತಯಾರಕರ ಸಂಘಗಳೊಂದಿಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು 'ಕಳೆದೊಂದು ವಾರದಲ್ಲಿಯೇ ಜಾಗತಿಕ ಬೆಲೆಗಳು ಶೇ.10ರಷ್ಟು ಇಳಿಕೆಯಾಗಿವೆ.
ತಾಳೆ ಮತ್ತು ಸೂರ್ಯಕಾಂತಿ ಎಣ್ಣೆಗಳಂತಹ ಖಾದ್ಯತೈಲಗಳ ಬೆಲೆಗಳನ್ನು ಪ್ರತಿ ಲೀ.ಗೆ 10ರೂ.ವರೆಗೆ ಇಳಿಸಲು ತಯಾರಕರು ಒಪ್ಪಿಕೊಂಡಿದ್ದಾರೆ. ಇವುಗಳ ದರ ಇಳಿದ ಬಳಿಕ ಇತರ ಖಾದ್ಯತೈಲಗಳ ಬೆಲೆಗಳೂ ಕಡಿಮೆಯಾಗುತ್ತವೆ ಎಂದರು.
ಒಂದೇ ಬ್ರಾಂಡಿನ ಖಾದ್ಯತೈಲಕ್ಕೆ ದೇಶಾದ್ಯಂತ ಒಂದೇ ಎಂಆರ್‌ಪಿಯನ್ನು ನಿಗದಿಗೊಳಿಸುವಂತೆಯೂ ಪಾಂಡೆ ತಯಾರಕರಿಗೆ ಸೂಚಿಸಿದ್ದಾರೆ.
ಭಾರತವು ತನ್ನ ಒಟ್ಟೂ ಅಗತ್ಯದ ಮೂರನೇ ಎರಡು ಭಾಗಕ್ಕಿಂತ ಹೆಚ್ಚಿನ ಖಾದ್ಯತೈಲಗಳನ್ನು ಆಮದು ಮಾಡಿಕೊಳ್ಳುತ್ತಿದೆ.