ಕಾಸರಗೋಡು: ಹರಿಯಾಣದಲ್ಲಿ ನಡೆಯುತ್ತಿರುವ 69ನೇ ಸೀನಿಯರ್ ಮೆನ್ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‍ಶಿಪ್ ಮತ್ತು ಬಿಹಾರದಲ್ಲಿ ನಡೆಯುತ್ತಿರುವ 48ನೇ ಜೂನಿಯರ್ ಮಹಿಳೆಯರ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸುವ ಕೇರಳ ತಂಡದ ಸೆಲೆಕ್ಷನ್ ಟ್ರಯಲ್ಸ್ ಜುಲೈ 14ರಂದು ಬೆಳಗ್ಗೆ 8ರಿಂದ ಆಟ್ಟಿಂಗಲ್ ಶ್ರೀಪಾದಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೆಲೆಕ್ಷನ್ ಟ್ರಯಲ್ಸ್‍ನಲ್ಲಿ ಭಾಗವಹಿಸುವ ಜಿಲ್ಲಾ ಕಬಡ್ಡಿ ಆಟಗಾರರು ತಮ್ಮ ವಯಸ್ಸಿನ ಪುರಾವೆ ಪ್ರಮಾಣಪತ್ರ (2022 ಸೆಪ್ಟೆಂಬರ್ 4ರಂದು 20 ವರ್ಷ ಅಥವಾ ಅದಕ್ಕಿಂತ ಕಡಿಮೆ), ಆಧಾರ್ ಕಾರ್ಡ್ ಮತ್ತು ಮೂರು ಪಾಸ್‍ಪೆÇೀರ್ಟ್ ಸೈಜ್ ಫೆÇೀಟೋದೊಂದಿಗೆ ಬರಬೇಕು. ದೂರವಾಣಿ 04994 255521.




