ಜಮ್ಮು: ಪ್ರತಿಕೂಲ ಹವಾಮಾನದಿಂದಾಗಿ ಒಂದು ದಿನದ ಮಟ್ಟಿಗೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆಯನ್ನು ಸೋಮವಾರದಿಂದ ಪುನಃ ಪ್ರಾರಂಭಿಸಲಾಗಿದೆ. 4 ಸಾವಿರ ಯಾತ್ರಿಗಳು ಯಾತ್ರೆ ಹೊರಟಿದ್ದಾರೆ.
0
samarasasudhi
ಜುಲೈ 11, 2022
ಜಮ್ಮು: ಪ್ರತಿಕೂಲ ಹವಾಮಾನದಿಂದಾಗಿ ಒಂದು ದಿನದ ಮಟ್ಟಿಗೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆಯನ್ನು ಸೋಮವಾರದಿಂದ ಪುನಃ ಪ್ರಾರಂಭಿಸಲಾಗಿದೆ. 4 ಸಾವಿರ ಯಾತ್ರಿಗಳು ಯಾತ್ರೆ ಹೊರಟಿದ್ದಾರೆ.
ಸಿಆರ್‌ಪಿಎಫ್ ಭದ್ರತಾ ಪಡೆಗಳ 110 ವಾಹನಗಳೊಂದಿಗೆ 4,026 ಯಾತ್ರಿಗಳಿರುವ 12ನೇ ಗುಂಪು ಭಗವತಿ ನಗರ ಯಾತ್ರಿ ನಿವಾಸದಿಂದ ಯಾತ್ರೆ ಹೊರಟಿದ್ದಾರೆ.
1,016 ಮಂದಿ ಯಾತ್ರಿಗಳ ಮೊದಲ ಗುಂಪು ಬೆಳಿಗ್ಗೆ 3.30ಕ್ಕೆ ಭಗವತಿ ನಗರ ಯಾತ್ರಿ ನಿವಾಸದಿಂದ ಬಾಲ್‌ಟಾಲ್‌ಗೆ ಹೊರಟಿತು. ಈ ಗುಂಪಿನೊಂದಿಗೆ 35 ವಾಹನಗಳಿದ್ದವು. 75 ವಾಹನಗಳನ್ನು ಒಳಗೊಂಡ 2,425 ಯಾತ್ರಿಗಳ ಎರಡನೇ ಗುಂಪು ಪಹಲ್‌ಗಾಮ್‌ಗೆ ಹೊರಟಿತು ಎಂದು ಮಾಹಿತಿ ನೀಡಿದರು.
ನುನ್‌ವಾನ್ ಬೇಸ್ ಕ್ಯಾಂಪ್‌ನಿಂದ ಪಹಲ್‌ಗಾಮ್ ಮಾರ್ಗವಾಗಿ ಹೊರಟ ಯಾತ್ರಿಗಳ ಒಂದು ಗುಂಪು ಮಂಗಳವಾರ ಬೆಳಿಗ್ಗೆ ವೇಳೆಗೆ ಅಮರನಾಥದ ಪವಿತ್ರ ಗುಹೆಯನ್ನು ತಲುಪಲಿದೆ ಎಂದು ಅವರು ತಿಳಿಸಿದರು.
ಈ ಮಧ್ಯೆ, ಸೇನಾ ಪಡೆಗಳು ಯಾತ್ರಿಗಳ ಅನುಕೂಲಕ್ಕಾಗಿ ಗುಹೆಯ ಬಳಿ ತಾತ್ಕಾಲಿಕ ಮೆಟ್ಟಿಲುಗಳನ್ನು ನಿರ್ಮಿಸಿದೆ. ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಿಂದಾಗಿ ಗುಹೆಗೆ ತೆರಳುವ ದಾರಿಯು ಮುಚ್ಚಿಹೋಗಿತ್ತು.
ಈ ವರ್ಷದ ಯಾತ್ರೆ ಪ್ರಾರಂಭವಾದಾಗಿನಿಂದ ಈ ವರೆಗೂ 1.13 ಲಕ್ಷ ಯಾತ್ರಿಗಳು ಅಮರನಾಥಕ್ಕೆ ಭೇಟಿ ನೀಡಿದ್ದಾರೆ.