ನವದೆಹಲಿ :ದೇಶಾದ್ಯಂತ ಚೀನಾದ ಮೊಬೈಲ್ ತಯಾರಕ ವಿವೋ ಹಾಗೂ ಅದಕ್ಕೆ ನೇರ ಹಾಗೂ ಪರೋಕ್ಷವಾಗಿ ಸಂಬಂಧಪಟ್ಟ ಹಲವಾರು ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ(ಈಡಿ) ಮಂಗಳವಾರ ದಾಳಿ ನಡೆಸಿದ್ದು 44 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ ಎಂದು NDTV ವರದಿ ಮಾಡಿದೆ.
0
samarasasudhi
ಜುಲೈ 05, 2022
ನವದೆಹಲಿ :ದೇಶಾದ್ಯಂತ ಚೀನಾದ ಮೊಬೈಲ್ ತಯಾರಕ ವಿವೋ ಹಾಗೂ ಅದಕ್ಕೆ ನೇರ ಹಾಗೂ ಪರೋಕ್ಷವಾಗಿ ಸಂಬಂಧಪಟ್ಟ ಹಲವಾರು ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ(ಈಡಿ) ಮಂಗಳವಾರ ದಾಳಿ ನಡೆಸಿದ್ದು 44 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ ಎಂದು NDTV ವರದಿ ಮಾಡಿದೆ.
ಈ ಹಿಂದೆ ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಅಡಿಯಲ್ಲಿ ಕ್ಸಿಯೊಮಿ ಆಸ್ತಿಯನ್ನು ವಶಪಡಿಸಿಕೊಂಡಿತ್ತು. ಆ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿತ್ತು. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ), 1999 ರ ನಿಬಂಧನೆಗಳ ಅಡಿಯಲ್ಲಿ ಸ್ಮಾರ್ಟ್‌ಫೋನ್ ದೈತ್ಯ ಕ್ಸಿಯೊಮಿ ಇಂಡಿಯಾದ 5,551.27 ಕೋಟಿ ರೂ.ಗಳನ್ನು ಈಡಿ ವಶಪಡಿಸಿಕೊಂಡಿದೆ. ಕ್ಸಿಯೊಮಿ ಇಂಡಿಯಾ ಚೀನಾ ಮೂಲದ ಕ್ಸಿಯೊಮಿ ಗುಂಪಿನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ.
ಆದಾಯ ತೆರಿಗೆ ಇಲಾಖೆ(ಐಟಿ) ಕೂಡ ಕಳೆದ ವರ್ಷ ತೆರಿಗೆ ವಂಚನೆ ಆರೋಪದ ಮೇಲೆ ವಿವೋ ಕಂಪೆನಿಗೆ ಸಂಬಂಧಿಸಿದ ಕಟ್ಟಡದಲ್ಲಿ ಶೋಧ ನಡೆಸಿತ್ತು.