HEALTH TIPS

ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ, ಬುಮ್ರಾ ಮಾರಕ ಬೌಲಿಂಗ್ ಗೆ ಇಂಗ್ಲೆಂಡ್ ತತ್ತರ, 5 ವಿಕೆಟ್ ಪತನ

          ಲಂಡನ್‌: ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಭಾರತ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದು, ಇಂಗ್ಲೆಂಡ್ ಗೆ ಆರಂಭಿಕ ಆಘಾತ ನೀಡಿ ಐದು ಪ್ರಮುಖ ವಿಕೆಟ್ ಗಳಿಸಿದೆ.

                 ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡ ರೋಹಿತ್‌ ಶರ್ಮ ಬಳಗ ಟಿ20 ಸರಣಿಯನ್ನು 2–1 ರಲ್ಲಿ ಗೆದ್ದಿತ್ತು. ಆದೇ ರೀತಿ ಈ ಏಕದಿನ ಸರಣಿಯನ್ನೂ ಗೆಲ್ಲುವ ಉತ್ಸಾಹದಲ್ಲಿದೆ. ಟಿ20 ವಿಶ್ವಕಪ್‌ಗೆ ಮುನ್ನ ಭಾರತ ಆಡಲಿರುವ ಕೊನೆಯ ಏಕದಿನ ಸರಣಿ ಇದಾಗಿದ್ದು. ‘ಮೂರು ಪಂದ್ಯಗಳ ಸರಣಿ  ನಮಗೆ ಮಹತ್ವದ್ದಾಗಿದೆ’ ಎಂದು ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಕೆನ್ನಿಂಗ್ಟನ್‌ನ ಓವಲ್‌ನಲ್ಲಿ ನಡೆಯುತ್ತಿದೆ. ಗಾಯದ ಸಮಸ್ಯೆಗೆ ಸಿಲುಕಿರುವ ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. 


                             ಇಂಗ್ಲೆಂಡ್ ಗೆ ಆರಂಭಿಕ ಆಘಾತ, 5 ವಿಕೆಟ್ ಪತನ

              ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತಂಡ ಅಕ್ಷರಶಃ ಭಾರತೀಯ ಬೌಲರ್ ಗಳ ಎದುರು ಮಂಕಾಗಿದ್ದು, ಕೇವಲ 26 ರನ್ ಗಳಿಗೆ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪ್ರಮುಖವಾಗಿ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ದಾಳಿಗೆ ಇಂಗ್ಲಂಡ್ ತತ್ತರಿಸಿದ್ದು, ತಂಡ ಪಡೆದ 5 ವಿಕೆಟ್ ಗಳಲ್ಲಿ ಬುಮ್ರಾ ಅವರ ಪಾಲೇ 4 ವಿಕೆಟ್ ಗಳಾಗಿವೆ. ಇದು ಬುಮ್ರಾ ಮಾರಕ ಬೌಲಿಂಗ್ ಹಿಡಿದ ಕನ್ನಡಿಯಾಗಿದೆ.


    Stay up to date on all the latest ಕ್ರಿಕೆಟ್ news
    Poll
    Kohli

    T20 ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿಯನ್ನು ಕೈಬಿಡಬೇಕೆ?


    Comments

    ADVERTISEMENT
    ADVERTISEMENT
    ADVERTISEMENT
    ADVERTISEMENT
    ADVERTISEMENT
    ADVERTISEMENT
    ADVERTISEMENT
    ADVERTISEMENT
    ADVERTISEMENT

                      ಆರಂಭಿಕ ಆಟಗಾರ ಜೇಸನ್ ರಾಯ್ ಶೂನ್ಯ ಸುತ್ತಿದರೆ, ಜಾನಿ ಬೇರ್ ಸ್ಟೋ 7 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ಔಟಾದರು. ಜೋ ರೂಟ್ ಕೂಡ ಬುಮ್ರಾ ಬೌಲಿಂಗ್ ನಲ್ಲೇ ಶೂನ್ಯಕ್ಕೆ ನಿರ್ಗಮಿಸಿದ್ದು ತಂಡಕ್ಕೆ ಮಾರಕವಾಗಿ ಪರಿಣಮಿಸಿತು. ಬಳಿಕ ನಾಯಕ ಬೆನ್ ಸ್ಟೋಕ್ ರನ್ನು ಶಮಿ ಮೊದಲ ಎಸೆತದಲ್ಲೇ ಔಟ್ ಮಾಡಿದರು. ಬಳಿಕ ಕ್ರೀಸ್ ಗೆ ಆಗಮಿಸಿದ ಲಿಯಾಮ್ ಲಿವಿಂಗ್ ಸ್ಟೋನ್ ರನ್ನು ಬುಮ್ರಾ 8ನೇ ಓವರ್ ನ ಐದನೇ ಎಸೆತದಲ್ಲಿ ಕ್ಲೀನ್ ಬೋಲ್ಡ್ ಮಾಡಿದರು.

                     ಪ್ರಸ್ತುತ ಇಂಗ್ಲೆಂಡ್ 11.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿದ್ದು, 23 ರನ್ ಗಳಿಸಿರುವ ಜಾಸ್ ಬಟ್ಲರ್ ಮತ್ತು 8ರನ್ ಗಳಿಸಿರು ಮೊಯಿನ್ ಅಲಿ ಕ್ರೀಸ್ ಕಾಯ್ದುಕೊಂಡಿದ್ದಾರೆ.


    Post a Comment

    0 Comments
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
    Qries