HEALTH TIPS

ಹಣ ಅಕ್ರಮ ವರ್ಗಾವಣೆ: ಮಧುಕಾನ್‌ ಪ್ರಾಜೆಕ್ಟ್ಸ್‌ನ ₹96 ಕೋಟಿ ಜಪ್ತಿ ಮಾಡಿದ ಇ.ಡಿ

          ನವದೆಹಲಿ: 'ಹಣ ಅಕ್ರಮ ವರ್ಗಾವಣೆ ಮಾಡಿರುವುದು ದೃಢಪಟ್ಟಿರುವುದರಿಂದ ಹೈದರಾಬಾದ್‌ ಮೂಲದ ಮಧುಕಾನ್‌ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ಕಂಪನಿಗೆ ಸೇರಿದ ₹96.21 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ' ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.

            'ಮಧುಕಾನ್‌ ಸಮೂಹಕ್ಕೆ ಸೇರಿದ ರಾಂಚಿ ಎಕ್ಸ್‌ಪ್ರೆಸ್‌ವೇ ಲಿಮಿಟೆಡ್‌, ರಾಂಚಿ-ರಾರ್‌ಗಾಂವ್-ಜೆಮ್‌ಶೆಡ್‌ಪುರ ವಿಭಾಗದಲ್ಲಿ ಒಟ್ಟು 163.50 ಕಿ.ಮೀ.ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 2011ರಲ್ಲಿ ಟೆಂಡರ್‌ ಪಡೆದಿತ್ತು. ಇದಕ್ಕಾಗಿ ಈ ಕಂಪನಿಯು ವಿವಿಧ ಬ್ಯಾಂಕ್‌ಗಳಿಂದ ₹1,030 ಕೋಟಿ ಸಾಲ ಪಡೆದಿತ್ತು. ಈ ಮೊತ್ತವನ್ನು ನಿಗದಿತ ಕಾರ್ಯಕ್ಕೆ ವಿನಿಯೋಗಿಸದೆ ತನ್ನ ಅಂಗ ಸಂಸ್ಥೆಗಳಿಗೆ ವರ್ಗಾಯಿಸಿತ್ತು' ಎಂದು ಇ.ಡಿ ಹೇಳಿದೆ.

                'ಕಂಪನಿಯು ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸ್ಥಿರಾಸ್ತಿ ಹೊಂದಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿ ಅವುಗಳನ್ನು ಜಪ್ತಿ ಮಾಡಲಾಗಿದೆ. ₹7.36 ಕೋಟಿ ಮೌಲ್ಯದ ಚರಾಸ್ಥಿಯನ್ನೂ ಮುಟ್ಟುಗೋಲು ಹಾಕಲಾಗಿದೆ. ಇವುಗಳ ಒಟ್ಟು ಮೌಲ್ಯ ₹96.21 ಕೋಟಿ' ಎಂದೂ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries