ಅಮೃತಸರ: ಇಲ್ಲಿನ ವಾಘಾ ಗಡಿಯಲ್ಲಿ ಗಡಿಯಲ್ಲಿ, ಸ್ವದೇಶಕ್ಕೆ ಮರಳುತ್ತಿದ್ದ ಮೂವರು ಭಾರತೀಯರನ್ನು ತಪಾಸಣೆ ನಡೆಸುವ ವೇಳೆ ಪಿಸ್ತೂಲುಗಳು ದೊರಕಿದ್ದು, ಅವರನ್ನು ಬಂಧಿಸಲಾಗಿದೆ' ಎಂದು ಪಾಕಿಸ್ತಾನದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
0
samarasasudhi
ಜುಲೈ 21, 2022
ಅಮೃತಸರ: ಇಲ್ಲಿನ ವಾಘಾ ಗಡಿಯಲ್ಲಿ ಗಡಿಯಲ್ಲಿ, ಸ್ವದೇಶಕ್ಕೆ ಮರಳುತ್ತಿದ್ದ ಮೂವರು ಭಾರತೀಯರನ್ನು ತಪಾಸಣೆ ನಡೆಸುವ ವೇಳೆ ಪಿಸ್ತೂಲುಗಳು ದೊರಕಿದ್ದು, ಅವರನ್ನು ಬಂಧಿಸಲಾಗಿದೆ' ಎಂದು ಪಾಕಿಸ್ತಾನದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
'ಬಂಧಿತರು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಗೆ ಸೇರಿದವರಾಗಿದ್ದು, ಒಂದೇ ಕುಟುಂಬದ ಪತಿ, ಪತ್ನಿ ಹಾಗೂ ಮಗನನ್ನು ಬಂಧಿಸಲಾಗಿದೆ' ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ಒಂದು ತಿಂಗಳ ಹಿಂದೆ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಾಗ ಅವರ ಸಾಮಾನು ಸರಂಜಾಮುಗಳಿಂದ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡ ನಂತರ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ಬುಧವಾರ ಬಂಧಿಸಿದ್ದಾರೆ.