ಕುಂಬಳೆ: ಶಿರಿಯಾ ಕಡಲ ತೀರದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಕುಂಬಳೆ ಕರಾವಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಾನ್ ನಗರ ಕಡಲತೀರದಲ್ಲಿ ಅರವತ್ತರ ಹರೆಯದ ವ್ಯಕ್ತಿಯ ಶವ ಪತ್ತೆಯಾಗಿದೆ. ಬುಧವಾರ ಸಂಜೆ ಶವ ಕಂಡುಬಂದಿದೆ.
ಕರಾವಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮಂಜೇಶ್ವರಂ ತಾಲೂಕಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ವ್ಯಕ್ತಿಯ ಗುರುತು ಪತ್ತೆಯಾಗದ ಕಾರಣ ಮುಂದಿನ ಕ್ರಮ ಕೈಗೊಂಡಿಲ್ಲ.
ವ್ಯಕ್ತಿಯನ್ನು ಗುರುತಿಸಿದವರು ಕರಾವಳಿ ಪೊಲೀಸರನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಪರ್ಕ ಸಂಖ್ಯೆ: 9497970226; 8848622140
ಕುಂಬಳೆ ಶಿರಿಯ ಕಡಲ ತೀರದಲ್ಲಿ ಅಪರಿಚಿತ ಶವ ಪತ್ತೆ
0
ಜುಲೈ 07, 2022
Tags




