HEALTH TIPS

ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆ ಕುಸಿತ; ಷೇರುಪೇಟೆಯಲ್ಲಿ ಏರಿಳಿತ, ಜೂನ್​ನಲ್ಲಿ ವಾಹನ ಮಾರಾಟ ಅಧಿಕ

           ಮುಂಬೈ: ಮಂಗಳವಾರ ರೂಪಾಯಿ ಮೌಲ್ಯದಲ್ಲಿ 38 ಪೈಸೆ ಇಳಿಕೆಯಾಗಿದ್ದು, ಅಮೆರಿಕದ ಪ್ರತಿ ಡಾಲರ್​ಗೆ 79.33 ರೂಪಾಯಿಗೆ ವಿನಿಮಯವಾಗಿದೆ. ಈ ಮೂಲಕ ಸಾರ್ವಕಾಲಿಕ ಪತನ ಕಂಡಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಬಲಿಷ್ಠವಾಗಿರುವುದು ಹಾಗೂ ವಿದೇಶಿ ಬಂಡವಾಳದ ನಿರಂತರ ಹೊರಹರಿವಿನ ಪರಿಣಾಮವಾಗಿ ರೂಪಾಯಿ ಮೌಲ್ಯ ಕುಸಿಯುತ್ತಿದೆ.

               ಅಂತರ್​ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದಿನದ ಆರಂಭದಲ್ಲಿ ಡಾಲರ್ ಎದುರು 79.04 ರೂಪಾಯಿ ಇದ್ದು, ಮಧ್ಯಂತರದ ವ್ಯವಹಾರದಲ್ಲಿ 79.02 ರೂ. ಹಾಗೂ 79.38 ರೂ. 79.36 ರೂಪಾಯಿಗೆ ನಿಂತಿತು. ಸೋಮವಾರ ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ 78.95 ರೂ. ಆಗಿತ್ತು.

              11 ವರ್ಷಗಳಲ್ಲೇ ಅಧಿಕ: ಭಾರತದಲ್ಲಿ ಜೂನ್ ತಿಂಗಳ ಸೇವೆಗಳಲ್ಲಿನ ಬೆಳವಣಿಗೆ ಕಳೆದ 11 ವರ್ಷಗಳಲ್ಲೇ ಅಧಿಕವಾಗಿದೆ. ಎಸ್ ಆಂಡ್ ಪಿ ಗ್ಲೋಬಲ್ ಇಂಡಿಯಾ ಸರ್ವಿಸಸ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ಮೇ ತಿಂಗಳಲ್ಲಿ 58.9 ಇದ್ದದ್ದು ಜೂನ್​ನಲ್ಲಿ 59.2 ಆಗಿದೆ. ಜೂನ್​ನಲ್ಲಿ ನಿರುದ್ಯೋಗ ಪ್ರಮಾಣ ಶೇ. 7.8 %ಕ್ಕೆ ಏರಿಕೆ ಆಗಿದೆ ಎಂದು ವರದಿಯೊಂದು ತಿಳಿಸಿದೆ.

            ಪ್ರಯಾಣಿಕ ವಾಹನ ಮಾರಾಟ ವೃದ್ಧಿ: ಭಾರತದಲ್ಲಿ ಜೂನ್ ಮಾಹೆಯಲ್ಲಿ ಪ್ರಯಾಣಿಕ ವಾಹನಗಳ ಚಿಲ್ಲರೆ ಮಾರಾಟದಲ್ಲಿ ಶೇಕಡ 40 ಏರಿಕೆ ದಾಖಲಾಗಿದೆ ಎಂದು ಭಾರತೀಯ ಆಟೊಮೊಬೈಲ್ ವರ್ತಕರ ಸಂಘ (ಎಫ್​ಎಡಿಎ) ತಿಳಿಸಿದೆ. ಸೆಮಿಕಂಡಕ್ಟರ್​ಗಳ ಸರಬರಾಜಿನಲ್ಲಿ ಸುಧಾರಣೆ ಆಗಿರುವುದನ್ನು ಇದು ಸೂಚಿಸುತ್ತದೆ ಎಂದು ಎಫ್​ಎಡಿಎ ಅಭಿಪ್ರಾಯ ಪಟ್ಟಿದೆ. ಜೂನ್ ಅಂತ್ಯದ ವರೆಗೆ 2,60,683 ಪ್ರಯಾಣಿಕ ವಾಹನಗಳ ನೋಂದಣಿ ಆಗಿದೆ. 2021ರ ಜೂನ್​ನಲ್ಲಿ ಈ ಸಂಖ್ಯೆ 1,85,998 ಆಗಿತ್ತು. ಒಟ್ಟಾರೆಯಾಗಿ ಶೇಕಡ 40 ಹೆಚ್ಚಳವಾಗಿದೆ ಎಂದು ವಾಹನೋದ್ಯಮ ಪ್ರಮುಖರು ತಿಳಿಸಿದ್ದಾರೆ.

          ಚಿನ್ನ 65 ರೂಪಾಯಿ ಏರಿಕೆ: ದೆಹಲಿ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನದ ಬೆಲೆಯಲ್ಲಿ 65 ರೂಪಾಯಿ ಏರಿಕೆಯಾಗಿ 10 ಗ್ರಾಂಗೆ 52,050 ರೂಪಾಯಿ ಆಗಿತ್ತು.ಬೆಳ್ಳಿ ಬೆಲೆಯಲ್ಲಿ 307 ರೂಪಾಯಿ ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ದರ 58,358 ರೂಪಾಯಿಗೆ ಹಿಗ್ಗಿದೆ.

                ಸೆನ್ಸೆಕ್ಸ್​ನಲ್ಲಿ 100 ಅಂಕ ಕುಸಿತ: ಬಾಂಬೆ ಷೇರು ಮಾರುಕಟ್ಟೆಯಲ್ಲಿ 30 ಷೇರುಗಳ ಬಿಎಸ್​ಇ ಸೂಚ್ಯಂಕ 100.42 ಅಂಶದಷ್ಟು (ಶೇಕಡ 0.19) ಇಳಿಕೆಯಾಗಿ 53,134.35 ಪಾಯಿಂಟ್​ನಲ್ಲಿ ಕೊನೆಗೊಂಡಿದೆ.ಮಂಧ್ಯತರ ವಹಿವಾಟಿನಲ್ಲಿ 631.16 ಅಂಶ (ಶೇ. 1.18) ಜಿಗಿತ ಕಂಡು 53,865.93 ಅಂಕಕ್ಕೆ ತಲುಪಿತ್ತು. ನಿಫ್ಟಿ ಕೂಡ ದಿನದ ಅವಧಿಯಲ್ಲಿ ಲಾಭಗಳಿಸಿ ಅಂತಿಮವಾಗಿ 24.50 ಅಂಶ (ಶೇ. 0.15) ಕುಸಿದು 15,810.85 ಆಗಿತ್ತು. ವಿಪ್ರೊ, ಆಕ್ಸಿಸ್ ಬ್ಯಾಂಕ್, ಮಹೀಂದ್ರಾ ಆಂಡ್ ಮಹೀಂದ್ರಾ, ಲಾರ್ಸನ್ ಆಂಡ್ ಟೂಬ್ರೊ, ಮಾರುತಿ ಸುಜುಕಿ, ಇಂಡಸ್​ಇಂಡ್ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ನಷ್ಟ ಅನುಭವಿಸಿವೆ. ಪವರ್ ಗ್ರಿಡ್, ಬಜಾಜ್ ಫಿನ್​ಸರ್ವ್, ಹಿಂದುಸ್ತಾನ್ ಯುನಿಲಿವರ್, ಸನ್ ಫಾರ್ವ, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್ ಮೊದಲಾದವು ಲಾಭ ಗಳಿಸಿದವು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries