HEALTH TIPS

ಉತ್ತರ ಪ್ರದೇಶ: ವಿಧಾನ ಪರಿಷತ್ ಇತಿಹಾಸದಲ್ಲಿ ಇದೇ ಮೊದಲಿಗೆ ಕಾಂಗ್ರೆಸ್ ಸದಸ್ಯರ ಸಂಖ್ಯೆ ಶೂನ್ಯ!

             ಲಖನೌ: ಕಳೆದ 135 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಪ್ರತಿನಿಧಿಗಳು ಇಲ್ಲದಂತಾಗಿದೆ.  ಏಕೈಕ ಕಾಂಗ್ರೆಸ್ ಸದಸ್ಯರಾಗಿದ್ದ ದೀಪಕ್ ಸಿಂಗ್ ಅವರ ಅಧಿಕಾರ ಅವಧಿ ಮುಗಿದ ನಂತರ ಇಂದು ನಿವೃತ್ತರಾದರು.

                ಒಕ್ಕೂಟ ಪ್ರಾಂತ್ಯದಲ್ಲಿ ಜನವರಿ 5, 1887ರಲ್ಲಿ ವಿಧಾನಪರಿಷತ್ ರಚನೆಯಾಗಿತ್ತು. ಜನವರಿ 8, 1887 ರಲ್ಲಿ ಅಲಹಾಬಾದ್ ನ ತೊರ್ನ್ ಹಿಲ್ ಸ್ಮಾರಕ ಹಾಲ್ ನಲ್ಲಿ ಅದರ ಮೊದಲ ಸಭೆ ನಡೆದಿತ್ತು. ಅಲ್ಲಿಂದ ಯಾವಾಗಲೂ ಪರಿಷತ್ ನಲ್ಲಿ ಕಾಂಗ್ರೆಸ್ ಪ್ರತಿನಿಧಿಗಳು ಇರುತ್ತಿದ್ದರು.

                  ಸಮಾಜವಾದಿ ಪಕ್ಷದ ಆರು, ಬಿಜೆಪಿಯ ಮೂವರು ಹಾಗೂ ಕಾಂಗ್ರೆಸ್ ಪಕ್ಷದ ಒಬ್ಬರು ಸದಸ್ಯರು ಉತ್ತರ ಪ್ರದೇಶ ವಿಧಾನ ಪರಿಷತ್ ನಿಂದ ಇಂದು ನಿವೃತ್ತರಾದರು. ಬಿಜೆಪಿಯ ಕೇಶವ್ ಮೌರ್ಯ ಮತ್ತು ಚೌಧರಿ ಭೂಪೇಂದ್ರ ಸಿಂಗ್ ಅವರ ಅಧಿಕಾರವಧಿ ಕೂಡಾ ಇದೇ ಮುಗಿದಿತ್ತು. ಆದರೆ, ಇವರಿಬ್ಬರೂ ಜೂನ್ ಮಧ್ಯದಲ್ಲಿ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತ್ತೆ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು.

                      ಈ ಸದಸ್ಯರ ನಿವೃತ್ತಿಯೊಂದಿಗೆ ಬಿಜೆಪಿಯ 9, ಎಸ್ ಪಿಯ ನಾಲ್ವರು ಸೇರಿದಂತೆ ಜೂನ್ 20 ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ 13 ನೂತನ ವಿಧಾನ ಪರಿಷತ್ ಸದಸ್ಯರ ಅಧಿಕಾರಿವಧಿ ಇಂದಿನಿಂದ ಆರಂಭವಾಯಿತು. ಪ್ರಸ್ತುತ ಬಿಜೆಪಿ ಮತ್ತು ಅದರ ಮೈತ್ರಿಕೂಟ 75 ಸದಸ್ಯರು, ಸಮಾಜವಾದಿ ಪಕ್ಷ 9, ಬಿಎಸ್ ಪಿ 1, ರಾಜ ಭಯ್ಯಾ ನೇತೃತ್ವದ ಜನ ಸಾತ್ತ ದಳದ 1 ಹಾಗೂ 6 ಪಕ್ಷೇತರ ಸದಸ್ಯರು ಉತ್ತರ ಪ್ರದೇಶ ವಿಧಾನಪರಿಷತ್ತಿನಲ್ಲಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries