ಕುಂಬಳೆ: ಶ್ರೀರಾಮಾಯಣ ಮಾಸಾಚರಣೆಯ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದ ಸಂಸ್ಕøತ ಸಂಘದ ವತಿಯಿಂದ ರಾಮಾಯಣ ಪ್ರಶ್ನೋತ್ತರಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿದ್ಯಾಲಯದ ಮುಖ್ಯ ಶಿಕ್ಷಕ ಗೋವಿಂದ ಭಟ್ ಆಶೀರ್ವಾದ ಪೂರ್ವಕ ಶುಭಾಶಂಸನೆಗೈದು ಚಾಲನೆ ನೀಡಿದರು. ಸಂಸ್ಕೃತ ಶಿಕ್ಷಕ ಶಿವನಾರಾಯಣ ಭಟ್ ನೇತೃತ್ವದಲ್ಲಿ ಇತರ ಶಿಕ್ಷಕರ ನೆರವಿನೊಂದಿಗೆ ಸ್ಪರ್ಧೆ ಸಂಪನ್ನಗೊಂಡಿತು. ಸ್ಪರ್ಧೆಯಲ್ಲಿ ವಿನ್ಯಾಸ್ ಡಿ (ಹತ್ತನೇ ತರಗತಿ) ಪ್ರಥಮ, ತನುಶ್ ಕುಮಾರ್ (ಒಂಭತ್ತನೇ ತರಗತಿ) ದ್ವಿತೀಯ ಹಾಗೂ ಪ್ರತೀಕ್ಷಾ (ಎಂಟನೇ ತರಗತಿ) ತೃತೀಯ ಸ್ಥಾನ ಪಡೆದರು. ಇವರಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದ ವಿನ್ಯಾಸ್ ಮತ್ತು ತನುಶ್ ಕುಮಾರ್ ಉಪಜಿಲ್ಲಾ ಮಟ್ಟಕ್ಕೆ ಅರ್ಹತೆಗಳಿಸಿರುತ್ತಾರೆ.
ಧರ್ಮತ್ತಡ್ಕ ಶಾಲೆಯಲ್ಲಿ ರಾಮಾಯಣ ಪ್ರಶ್ನೋತ್ತರಿ ಸ್ಪರ್ಧೆ
0
ಜುಲೈ 31, 2022




.jpg)
