ಕೊಚ್ಚಿ: ನಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಾಜಿ ಡಿಜಿಪಿ ಶ್ರೀಲೇಖಾ ಗಂಭೀರ ಆರೋಪ ಮಾಡಿ ಪ್ರಕರಣದ ಗತಿಯನ್ನು ಮತ್ತೊಂದೆಡೆಗೆ ತಿರುಗಿಸಿ ಅಚ್ಚರಿಮೂಡಿಸಿದ್ದಾರೆ. ನಟ ದಿಲೀಪ್ ವಿರುದ್ಧ ಪೋಲೀಸರು ಕಪೆÇೀಲಕಲ್ಪಿತ ಸಾಕ್ಷ್ಯವನ್ನು ಸೃಷ್ಟಿಸಿದ್ದಾರೆ ಮತ್ತು ಪಲ್ಸರ್ ಸುನಿ ಜೊತೆ ದಿಲೀಪ್ ಇರುವ ಚಿತ್ರ ನಕಲಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇಬ್ಬರೂ ಒಟ್ಟಿಗೆ ಇರುವ ಪೋಟೋ ಎಡಿಟ್ ಮಾಡಿರುವುದನ್ನು ಸ್ವತಃ ಪೋಲೀಸರೇ ಒಪ್ಪಿಕೊಂಡಿದ್ದಾರೆ ಎನ್ನುತ್ತಾರೆ ಶ್ರೀಲೇಖಾ. ಜೈಲು ಇಲಾಖೆಯ ಮಾಜಿ ಡಿಜಿಪಿ ಶ್ರೀಲೇಖಾ ತಮ್ಮದೇ ಯೂಟ್ಯೂಬ್ ಚಾನೆಲ್ ಮೂಲಕ ದಿಲೀಪ್ ಬೆಂಬಲಕ್ಕೆ ನಿಂತು ಅಚ್ಚರಿ ಮೂಡಿಸಿದರು.
ಪಲ್ಸರ್ ಸುನಿ ಮತ್ತು ದಿಲೀಪ್ ಭೇಟಿಯಾಗಿರುವುದಕ್ಕೆ ಯಾವುದೇ ಪುರಾವೆ ಅಥವಾ ದಾಖಲೆ ಇಲ್ಲ ಎಂದು ಆರೋಪಿಸಿರುವ ಶ್ರೀಲೇಖಾ ಅವರು ಯಾವುದೇ ಆಧಾರವಿಲ್ಲದೆ ಕೇವಲ ಊಹಾಪೆÇೀಹಗಳೊಂದಿಗೆ ಬಂದಿದ್ದ ಬಾಲಚಂದ್ರಕುಮಾರ್ ಅವರಂತಹ ಸಾಕ್ಷಿಗಳನ್ನು ಬಳಸಿಕೊಂಡು ಮಾಧ್ಯಮಗಳ ಸಹಾಯದಿಂದ ಪ್ರಕರಣವನ್ನು ಬುಡಮೇಲು ಮಾಡಲು ಪ್ರಯತ್ನಿಸಲಾಯಿತು ಎಂದಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಬರೆದದ್ದೆಂದು ಹೇಳಲಾಗುವ ಜೈಲಿನಿಂದ ದಿಲೀಪ್ ಗೆ ಕಳುಹಿಸಿದ ಪತ್ರ ಸುನಿ ಬರೆದದ್ದಲ್ಲ. ಈ ಪತ್ರವನ್ನು ಸಹ ಕೈದಿಯೋರ್ವ ಜೈಲಿನಿಂದ ಕಳ್ಳಸಾಗಣೆ ಮಾಡಿದ ಕಾಗದವನ್ನು ಬಳಸಿ ಬರೆದಿದ್ದಾರೆ. ಪೋಲೀಸರು ತಿಳಿಸಿದ ನಂತರ ಪತ್ರ ಬರೆದಿದ್ದೇನೆ ಎಂದು ಪತ್ರಬರೆದ ಖೈದಿ ವಿಪಿನ್ ಸ್ವತಃ ಬಹಿರಂಗಪಡಿಸಿದ್ದಾರೆ ಎಂದು ಶ್ರೀಲೇಖಾ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತಿಳಿಸಿದ್ದಾರೆ.
ಪಲ್ಸರ್ ಸುನಿ ಈ ಹಿಂದೆಯೂ ನಟಿಯರನ್ನು ಅಪಹರಿಸಿ ಮೊಬೈಲ್‍ನಲ್ಲಿ ಚಿತ್ರ ತೆಗೆದು ಬ್ಲಾಕ್‍ಮೇಲ್ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ. ಆ ವೇಳೆ ಒಬ್ಬಿಬ್ಬರು ಪೋಲೀಸರಿಗೆ ಈ ಬಗ್ಗೆ ಏಕೆ ದೂರು ನೀಡಿಲ್ಲ ಎಂದು ಪ್ರಶ್ನಿಸಿದರು. ಈ ಪ್ರಕರಣದ ಹಿಂದೆ ಸರಿಯಬೇಕು ಎಂಬ ಕಾರಣಕ್ಕೆ ಹಣ ಕೊಟ್ಟು ಪ್ರಕರಣವನ್ನು ಇತ್ಯರ್ಥಗೊಳಿಸಬೇಕೆಂದು ಅವರು ಹೇಳಿದ್ದರು ಎಂದು ಶ್ರೀಲೇಖಾ ಹೇಳುತ್ತಾರೆ.





