HEALTH TIPS

ಅಶೋಕ ಸ್ತಂಭದ ಮೇಲೆ ಮೂರು ಸಿಂಹಗಳಿವೆ ಎಂದು ಬರೆದ ಎಂ.ಎ.ಬೇಬಿ!: ಕನಿಷ್ಠ ತಿಳಿದು ಡೈಲಾಗ್ ಹೊಡೆಯಿರಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ

               ತಿರುವನಂತಪುರ: ರಾಷ್ಟ್ರೀಯ ಚಿಹ್ನೆ ಅಶೋಕ ಸ್ತಂಭದಲ್ಲಿ ಮೂರು ಸಿಂಹಗಳಿವೆ ಎಂದು ತಪ್ಪಾಗಿ ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಎಂ.ಎ.ಬೇಬಿ ಹೇಳಿದ್ದಾರೆ. ಮಾಜಿ ಶಿಕ್ಷಣ ಸಚಿವರೂ ಆಗಿರುವ ಎಂಎ ಬೇಬಿ ಅವರು ಕೇಂದ್ರ ಸರ್ಕಾರದ ವಿರುದ್ಧ ಬರೆದ ಫೇಸ್ ಬುಕ್ ಪೋಸ್ಟ್ ನಲ್ಲಿ ಅಶೋಕ ಸ್ತಂಭದಲ್ಲಿರುವ ಸಿಂಹಗಳ ಸಂಖ್ಯೆಯನ್ನು ತಪ್ಪಾಗಿ ಬರೆದಿದ್ದಾರೆ. ಅಶೋಕ ಸ್ತಂಭದ ಮೇಲೆ ನಾಲ್ಕು ಸಿಂಹಗಳಿವೆಯಾದರೂ ಸಾಮಾನ್ಯ ಜ್ಞಾನವಾದರೂ ಎಂಎ ಬೇಬಿಗೆ ಬೇಕು ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಹರಿದಾಡುತ್ತಿದೆ.

                   ನೂತನ ಸಂಸತ್ ಭವನದ ಮೇಲಿರುವ ಅಶೋಕ ಸ್ತಂಭವನ್ನು ಪ್ರಧಾನಿ ಅನಾವರಣಗೊಳಿಸಿದ ಬಳಿಕ ಎಂಎ ಬೇಬಿ ಟೀಕೆ ಮಾಡಿದ್ದಾರೆ. ಹೊಸ ಸಂಸತ್ ಭವನದ ಮೇಲೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅಶೋಕ ಸ್ತಂಭದ ವಿರೂಪಗೊಳಿಸಿದ ಪ್ರತಿಕೃತಿಯನ್ನು ಅನಾವರಣಗೊಳಿಸಿದ್ದಾರೆ ಎಂದು ಎಂಎ ಬೇಬಿ ಆರೋಪಿಸಿದ್ದಾರೆ. ಹೊಸ ಅಶೋಕ ಸ್ತಂಭ ಮೋದಿಯವರ ಭಾರತವನ್ನು ಪ್ರತಿನಿಧಿಸುತ್ತದೆ. ಇದು ಪ್ರಜಾಸತ್ತಾತ್ಮಕ ಮತ್ತು ಪ್ರತಿಭಾವಂತ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಂದ ನಿರ್ಧರಿಸಲ್ಪಟ್ಟ ಭಾರತದ ಸಂಕೇತವಲ್ಲ. ಈ ಅತ್ಯಾಧುನಿಕ ಶಿಲ್ಪವು ಮೂರು ಸಿಂಹಗಳನ್ನು ಬದಲಾಯಿಸಿದೆ.  ಅವು ಶಾಂತವಾಗಿದ್ದರೂ ಶಕ್ತಿಯುತವಾಗಿವೆ ಮತ್ತು ದುಷ್ಟತನ ಮತ್ತು ಉಗ್ರತೆಯನ್ನು ಬಹಿರಂಗಪಡಿಸುವ ಹಲ್ಲುಗಳನ್ನು ಹೊಂದಿರುವ ಕೆಟ್ಟ ಮೃಗಗಳೊಂದಿಗೆ ನಿಂತಿವೆ. ಅರ್ಥಪೂರ್ಣ ಅಶೋಕ ಸ್ತಂಭ ಮತ್ತು ಭಾರತದ ಸಂಕೇತವನ್ನು ಮೋದಿ ಅವಮಾನಿಸಿದ್ದಾರೆ ಎಂದು ಸಿಪಿಎಂ ನಾಯಕ ಆರೋಪಿಸಿದ್ದಾರೆ.

                  ದೌರ್ಜನ್ಯ ಮತ್ತು ಹಿಂಸೆ ಕಲೆಯಾಗಬಾರದು. ಮಾನವ ಪ್ರತಿಭೆಯ ಸ್ವಾಭಾವಿಕತೆ ಕಲೆಯ ಹುಟ್ಟು ಎಂಬುದು ಆರ್‍ಎಸ್‍ಎಸ್‍ಗೆ ಅರ್ಥವಾಗುತ್ತಿಲ್ಲ. ಭಾರತೀಯ ಸಂಸತ್ತಿನ ಮೇಲೆ ಇರಿಸಲಾಗಿರುವ ಈ ಶಿಲ್ಪವು ಮೋದಿಯವರ ಆಡಳಿತವನ್ನು ಪ್ರತಿನಿಧಿಸುತ್ತದೆ ಮತ್ತು ಭಾರತದ ಸಾರ್ವಜನಿಕ ಅಭಿಪ್ರಾಯವನ್ನು ಪ್ರಶ್ನಿಸುತ್ತದೆ. ಆದ್ದರಿಂದ ಆದಷ್ಟು ಬೇಗ ಈ ವಿಕೃತಿಯನ್ನು ನಮ್ಮ ಸಂಸತ್ತಿನಲ್ಲಿ ತೊಲಗಿಸಬೇಕು ಎಂದು ಎಂಎ ಬೇಬಿ ಅವರ ಫೇಸ್ ಬುಕ್ ಪೋಸ್ಟ್ ಆಗ್ರಹಿಸಿದೆ. ಆದರೆ ಎಷ್ಟು ಸಿಂಹಗಳಿವೆ ಎಂಬ ಬಾಲಪಾಠವೂ ಇಲ್ಲದ ಬೇಬಿಯವರ ಹೇಳಿಕೆ ಹಾಸ್ಯಾಸ್ಪದ ಮತ್ತು ಕನಿಷ್ಠ ಜ್ಞಾವೂ ಇಲ್ಲದ ಹರಟುವಿಕೆ ಎಂಬ ಟೀಕೆ ಕೇಳಿಬಂದಿದೆ.

               ಬೇಬಿಯವರ ಪೋಸ್ಟ್ ಹೊರಬಂದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ತಪ್ಪನ್ನು ಎತ್ತಿ ತೋರಿಸಲು ಮುಂದಾದರು. ಸ್ಕ್ರೀನ್ ಶಾಟ್‍ಗಳನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಯಿತು. ಈ ಅಜ್ಞಾನವು ಸಿಪಿಎಂ ನಾಯಕರ ರಾಷ್ಟ್ರದ ಬಗೆಗಿನ ದೂರದೃಷ್ಟಿ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ. ಅಶೋಕ ಸ್ತಂಭದ ಮೇಲೆ ಮೂರು ಸಿಂಹಗಳಿವೆ ಎಂಬ ಎಂಎ ಬೇಬಿ ಅವರ ಪೋಸ್ಟ್ ಅಡಿಯಲ್ಲಿ ಕಾಮೆಂಟ್‍ಗಳ ಮಹಾಪೂರವೇ ಹರಿದುಬಂದಿದೆ. ಚಿತ್ರದಲ್ಲಿ ಕೇವಲ ಮೂರು ಸಿಂಹಗಳು ಕಾಣಸಿಗುತ್ತವೆ ಮತ್ತು ನಾಲ್ಕನೇ ಸಂಖ್ಯೆ ಹಿಂಭಾಗದಲ್ಲಿದೆ ಎಂದು ಕೆಲವರು ಎಂಎ ಬೇಬಿಗೆ ಮನವರಿಕೆ ಮಾಡಿದ್ದಾರೆ. ಎಂಎ ಬೇಬಿಗೆ ಅಶೋಕ ಸ್ತಂಭದ ಸಂಪೂರ್ಣ ಮಾಹಿತಿಯನ್ನು ಕೆಲವರು ಫೇಸ್ ಬುಕ್ ನಲ್ಲಿ ಕಮೆಂಟ್ ಮಾಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries