HEALTH TIPS

ರಸ್ತೆಗಳನ್ನು ದುರಸ್ತಿ ಮಾಡಲು ಕೆ-ರೋಡ್ ಎಂದು ಹೆಸರು ಬದಲಿಸಬೇಕೇ?; ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಕೇರಳ ಹೈಕೋರ್ಟ್

                                         

                   ಎರ್ನಾಕುಳಂ: ರಸ್ತೆಗಳ ಶೋಚನೀಯ ಸ್ಥಿತಿಯನ್ನು ಸರಿಪಡಿಸದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ಟೀಕಿಸಿದೆ. ರಸ್ತೆಗಳನ್ನು ದುರಸ್ತಿ ಮಾಡಬೇಕಾದರೆ ಕೆ-ರೋಡ್ ಎಂದು ಹೆಸರನ್ನು ಬದಲಾಯಿಸಬೇಕೇ ಎಂದು ನ್ಯಾಯಾಲಯ ಕೇಳಿದೆ. ರಸ್ತೆಗಳ ದುರವಸ್ಥೆಯನ್ನು ಬಗೆಹರಿಸಬೇಕು ಎಂಬ ಬೇಡಿಕೆಯ ಅರ್ಜಿಯನ್ನು ಪರಿಗಣಿಸುವಾಗ ನ್ಯಾಯಾಲಯವು ತೀವ್ರ ಟೀಕೆ ವ್ಯಕ್ತತಪಡಿಸಿದೆ. 

                   ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇನ್ನಿದನ್ನು ಸಹಿಸಲಾಗದು.  ಉತ್ತಮ ರಸ್ತೆಗಳು ಸಾರ್ವಜನಿಕ ಹಕ್ಕು ಎಂದು ನ್ಯಾಯಾಲಯ ತಿಳಿಸಿದೆ.

              ಹದಗೆಟ್ಟ ರಸ್ತೆಗಳ ದುರಸ್ತಿಗೆ ಬದಲಾಗಿ ಸರ್ಕಾರ ಆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುತ್ತದೆ. ಕಾಮಗಾರಿ ಪೂರ್ಣಗೊಂಡ ಆರು ತಿಂಗಳೊಳಗೆ ರಸ್ತೆ ಕುಸಿದರೆ ವಿಜಿಲೆನ್ಸ್ ಪ್ರಕರಣ ದಾಖಲಿಸಬೇಕು. ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ಎಂಜಿನಿಯರ್‍ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಘಟನೆಯ ತನಿಖೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

             ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ರಸ್ತೆಗಳ ದುಸ್ಥಿತಿಗೆ ಸಂಬಂಧಿಸಿದ ಅರ್ಜಿಯನ್ನು ಪರಿಗಣಿಸಿದರು. ಆಗಸ್ಟ್ 1 ರಂದು ನ್ಯಾಯಾಲಯ ಮತ್ತೆ ಅರ್ಜಿಯ ವಿಚಾರಣೆ ನಡೆಸಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries