HEALTH TIPS

ಭಾರತ-ಚೀನಾ ಸಂಬಂಧ ಮೂರು ಪರಸ್ಪರ ವಿಷಯಗಳನ್ನು ಆಧರಿಸಿರಬೇಕು: ಚೀನಾ ವಿದೇಶಾಂಗ ಸಚಿವರಿಗೆ ಜೈಶಂಕರ್ ಖಡಕ್ ಮಾತು

            ನವದೆಹಲಿ: ಪೂರ್ವ ಲಡಾಕ್ ನಲ್ಲಿ ಗಡಿ ವಾಸ್ತವ ರೇಖೆಯ ಸಮಸ್ಯೆಗಳು ಸೇರಿದಂತೆ ಎಲ್ಲಾ ಪ್ರಮುಖ ಸಮಸ್ಯೆಗಳಿಗೆ ಆದಷ್ಟು ಶೀಘ್ರವೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ವಿದೇಶಾಂಗ ಇಲಾಖೆ ಸಚಿವ ಎಸ್ ಜೈಶಂಕರ್ ಗುರುವಾರ ತನ್ನ ಸಹವರ್ತಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರಿಗೆ ಮನವರಿಕೆ ಮಾಡಿದ್ದಾರೆ.

                ಪರಸ್ಪರ ಗೌರವ, ಪರಸ್ಪರ ಸಂವೇದನೆ ಮತ್ತು ಪರಸ್ಪರ ಆಸಕ್ತಿ ಈ ಮೂರು ವಿಷಯಗಳಿಂದ ಮಾತ್ರ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಸಾಧ್ಯ ಮತ್ತು ಈ ಮೂರು ವಿಷಯಗಳನ್ನು ಆಧರಿಸಿಕೊಂಡಿದೆ ಎಂಬುದನ್ನು ಕೂಡ ವಿದೇಶಾಂಗ ಸಚಿವರು ಪ್ರತಿಪಾದಿಸಿದ್ದಾರೆ ಎಂದು ತಿಳಿದುಬಂದಿದೆ.

               ಜಿ20 ರಾಷ್ಟ್ರಗಳ ವಿದೇಶಾಂಗ ಇಲಾಖೆ ಸಚಿವರುಗಳ ಸಭೆಯ ಹೊರಗೆ ಬಾಲಿಯಲ್ಲಿ ನಡೆದ ಸಭೆಯ ಹೊರಗೆ ಮಾತುಕತೆಯಲ್ಲಿ ಭಾರತ-ಚೀನಾ ಗಡಿಭಾಗದ ಸಮಸ್ಯೆಯನ್ನು ಬಗೆಹರಿಸಲು ಮುಂದಿನ ಸುತ್ತಿನ ಮಿಲಿಟರಿ ಹಂತದ ಮಾತುಕತೆಯನ್ನು ನಡೆಸಲು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

                   ಜೈಶಂಕರ್ ಅವರು ಚೀನಾಕ್ಕೆ ಭಾರತೀಯ ವಿದ್ಯಾರ್ಥಿಗಳ ಮರಳುವಿಕೆ ಮತ್ತು ಉಭಯ ದೇಶಗಳ ನಡುವೆ ನೇರ ವಿಮಾನಯಾನ ಪುನರಾರಂಭದ ವಿಷಯದ ಬಗ್ಗೆ ವಾಂಗ್ ಅವರೊಂದಿಗೆ ಚರ್ಚಿಸಿದರು. ಗಡಿ ಸಮಸ್ಯೆಗಳ ಮೇಲಿನ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಒಇಂ) ಜೈಶಂಕರ್ ಅವರು ದ್ವಿಪಕ್ಷೀಯ ಒಪ್ಪಂದಗಳು ಮತ್ತು ಉಭಯ ದೇಶಗಳು ದ್ವಿಪಕ್ಷೀಯ ಶಿಷ್ಠಾಚಾರಗಳನ್ನು ಪಾಲಿಸುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ್ದಾರೆ. ಹಿಂದೆ ತಾವಿಬ್ಬರು ನಡೆಸಿದ್ದ ಮಾತುಕತೆಯನ್ನು ಈ ಬಾರಿ ಕೂಡ ನೆನಪು ಮಾಡಿಕೊಂಡಿದ್ದಾರೆ ಎಂದು ಸಹ ತಿಳಿದುಬಂದಿದೆ. 

                  ಪೂರ್ವ ಲಡಾಖ್‌ನ ಗಡಿ ವಾಸ್ತವ ರೇಖೆಯುದ್ದಕ್ಕೂ ಬಾಕಿ ಉಳಿದಿರುವ ಎಲ್ಲಾ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವರು (ಇಂಒ) ಕರೆ ನೀಡಿದ್ದಾರೆ ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.

                    ಈಗಾಗಲೇ ಭಾರತ ಮತ್ತು ಚೀನಾ ನಡುವೆ ಹಲವು ಸುತ್ತುಗಳ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಪರಿಣಾಮವಾಗಿ, ಎರಡು ಕಡೆಯವರು ಕಳೆದ ವರ್ಷ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳಲ್ಲಿ ಮತ್ತು ಗೋಗ್ರಾ ಪ್ರದೇಶದಲ್ಲಿ ಸೇನಾಪಡೆಗಳನ್ನು ಹಿಂಪಡೆಯುವ ಕಾರ್ಯವನ್ನು ಮಾಡಿದ್ದವು. 

               ಪ್ರತಿಯೊಂದು ಕಡೆಯು ಪ್ರಸ್ತುತ ಸೂಕ್ಷ್ಮ ವಲಯದಲ್ಲಿ ಐಂಅ ಉದ್ದಕ್ಕೂ ಸುಮಾರು 50,000 ರಿಂದ 60,000 ಸೈನಿಕರನ್ನು ಹೊಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries