HEALTH TIPS

ಬಾನಂ ಜಿಎಚ್‍ಎಸ್‍ನಲ್ಲಿ ಜಿಲ್ಲಾ ಮಟ್ಟದ ಸಬ್ ಜೂನಿಯರ್ ಹಗ್ಗಜಗ್ಗಾಟ ಸ್ಪರ್ಧೆ

           ಮುಳ್ಳೇರಿಯ: ಜಿಲ್ಲಾ ಮಟ್ಟದ ಸಬ್ ಜೂನಿಯರ್ ಹಗ್ಗಜಗ್ಗಾಟ ಸ್ಪರ್ಧೆ ಜು.23ರಂದು ಬಾನಂ ಜಿಎಚ್ ಎಸ್ ನಲ್ಲಿ ನಡೆಯಲಿದೆ. ಜಿಲ್ಲಾ ಹಗ್ಗಜಗ್ಗಾಟ  ಅಸೋಸಿಯೇಷನ್, ಸ್ಪೋಟ್ರ್ಸ್ ಸೆಂಟರ್ ಬಾನಂ  ಮತ್ತು ಬಾನಂ ಜಿಎಚ್‍ಎಸ್ ಈ ಸ್ಪರ್ಧೆಯನ್ನು ಆಯೋಜಿಸಿದೆ. ಜಿಲ್ಲೆಯ ವಿವಿಧ ಶಾಲೆಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ಸ್ಪರ್ಧೆಯ ಯಶಸ್ವಿಗಾಗಿ ಸಂಘಟನಾ ಸಮಿತಿಯನ್ನು ರಚಿಸಲಾಗಿದೆ.ಈ ಬಗ್ಗೆ ನಡೆದ ಸಭೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪಿ.ರಾಜೀವನ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್, ಎಸ್ ಎಂಸಿ ಅಧ್ಯಕ್ಷ ಬಾನಂ ಕೃಷ್ಣನ್, ಮುಖ್ಯಶಿಕ್ಷಕಿ ಕೆ.ಎಂ.ರಮಾದೇವಿ, ಜಿಲ್ಲಾ ಹಗ್ಗಜಗ್ಗಾಟ ಸಂಘದ ಕಾರ್ಯದರ್ಶಿ ಹಿಟ್ಲರ್ ಜಾರ್ಜ್, ವಿಜಯನ್ ಮುಂಡಾತ್, ಮನೋಜ್ ಕುಮಾರ್ ಬಾನಂ, ಟಿ.ವಿ.ಪವಿತ್ರನ್ ಮಾತನಾಡಿದರು.

           ಪದಾಧಿಕಾರಿಗಳು: ಕೆ.ಭೂಪೇಶ್, ಪಿ.ಗೋಪಾಲಕೃಷ್ಣನ್, ಬಾನಂ ಕೃಷ್ಣನ್ (ಪೋಷಕರು), ವಿಜಯನ್ ಮುಂಡತ್ (ಅಧ್ಯಕ್ಷರು), ಪಿ.ರಾಜೀವನ್ (ಉಪಾಧ್ಯಕ್ಷರು), ಮನೋಜ್ ಕುಮಾರ್ ಬಾನಂ (ಸಂಚಾಲಕರು), ಶೈಜು ಬಾನಂ (ಸಹ ಸಂಚಾಲಕರು).


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries