HEALTH TIPS

ಡಿಜಿಟಲ್ ಮಾಧ್ಯಮದ ನಿಯಂತ್ರಣಕ್ಕೆ ಮುಂದಾದ ಸರಕಾರ: ಕಾನೂನು ತಿದ್ದುಪಡಿಗೆ ನಿರ್ಧಾರ

                 ನವದೆಹಲಿ :ಇನ್ನು ಮುಂದೆ ಭಾರತದಲ್ಲಿ ಡಿಜಿಟಲ್ ಮಾಧ್ಯಮವನ್ನು ನಿಯಂತ್ರಣಕ್ಕೆ ಒಳಪಡಿಸಲಾಗುವುದು. ಈ ನಿಟ್ಟಿನಲ್ಲಿ, ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಸಂಬಂಧಿತ ಕಾನೂನೊಂದಕ್ಕೆ ತಿದ್ದುಪಡಿ ತರಲು ಸರಕಾರ ನಿರ್ಧರಿಸಿದೆ.

            ಮಾಧ್ಯಮಗಳ ನೋಂದಣಿಗೆ ಸಂಬಂಧಿಸಿದ ಕಾನೂನಿನಲ್ಲಿ, ಮೊದಲ ಬಾರಿಗೆ, ಡಿಜಿಟಲ್ ಮಾಧ್ಯಮವನ್ನು ಸೇರಿಸಲಾಗಿದೆ. ಈವರೆಗೆ, ಯಾವುದೇ ಕಾನೂನು ಅಥವಾ ಯಾವುದೇ ಸರಕಾರಿ ನಿಯಂತ್ರಣವು ಡಿಜಿಟಲ್ ಮಾಧ್ಯಮಕ್ಕೆ ಯಾವುದೇ ವ್ಯಾಖ್ಯೆಯನ್ನು ನೀಡಿಲ್ಲ.

              ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ನೋಂದಣಿ ಕಾಯ್ದೆಯ ವ್ಯಾಪ್ತಿಯಲ್ಲಿ ಡಿಜಿಟಲ್ ಮಾಧ್ಯಮದ ಸುದ್ದಿಗಳನ್ನು ತರುವುದಕ್ಕಾಗಿ, ಕಾನೂನಿಗೆ ತಿದ್ದುಪಡಿ ತರುವ ಪ್ರಕ್ರಿಯೆಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆರಂಭಿಸಿದೆ.

              ಡಿಜಿಟಲ್ ಸುದ್ದಿ ಪ್ರಸಾರಕರು ನೋಂದಣಿಗಾಗಿ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಅದನ್ನು ಕಾನೂನು ಜಾರಿಗೆ ಬಂದ 90 ದಿನಗಳಲ್ಲಿ ಮಾಡಬೇಕಾಗುತ್ತದೆ.

                 ಡಿಜಿಟಲ್ ಪ್ರಕಾಶಕರು ಮಹಾ ಪತ್ರಿಕಾ ನೋಂದಣಿದಾರರಲ್ಲಿ ತಮ್ಮ ಮಾಧ್ಯಮವನ್ನು ನೋಂದಾಯಿಸಬೇಕು. ಯಾವುದೇ ಉಲ್ಲಂಘನೆಗಾಗಿ ಸಂಬಂಧಿತ ಡಿಜಿಟಲ್ ಮಾಧ್ಯಮಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲು ಮಹಾ ಪತ್ರಿಕಾ ನೋಂದಣಿದಾರರಿಗೆ ಅಧಿಕಾರವಿದೆ. ಅವರು ಈ ಮಾಧ್ಯಮಗಳ ನೋಂದಣಿಯನ್ನು ಅಮಾನತಿನಲ್ಲಿಡಬಹುದು ಅಥವಾ ರದ್ದುಗೊಳಿಸಬಹುದು ಮತ್ತು ದಂಡಗಳನ್ನು ವಿಧಿಸಬಹುದಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries