HEALTH TIPS

ರೂಂ ಕ್ಲೀನ್‌ ಆಗಿರಬೇಕು ಎಂಬುವುದರ ಹಿಂದಿದೆ ಈ ಫ್ಯಾಕ್ಟ್ಸ್‌

 ಸಂತೋಷ, ನೆಮ್ಮದಿ ಯಾರಿಗೆ ಬೇಡ ಹೇಳಿ? ಎಷ್ಟೇ ಹಣ, ಸಂಪತ್ತು ಇದ್ದರೂ, ಜೀವನದಲ್ಲಿ ಸಂತೋಷವೇ ಇಲ್ಲದಿದ್ದರೆ, ಏನೂ ಪ್ರಯೋಜನವಿಲ್ಲ. ಆದ್ದರಿಂದ ಈ ಸಂತೋಷವನ್ನ ಹುಡುಕಿಕೊಂಡು ಹೋಗುವವರೇ ಹೆಚ್ಚು. ಕೆಲವರಿಗೆ ವ್ಯಾಯಾಮ ಮಾಡೋದು ಖುಷಿ ಕೊಟ್ಟರೆ, ಇನ್ನೂ ಕೆಲವರಿಗೆ ತಿನ್ನೋದು ಸಂತೋಷ ಕೊಡುತ್ತೆ. ಆದ್ರೆ ನಿಮ್ಮ ಒತ್ತಡವನ್ನೆಲ್ಲಾ ನಿವಾರಿಸಿ, ಸಂತೋಷ ನೀಡುವ ಕೆಲಸವನ್ನು ನಿಮ್ಮ ಅಚ್ಚುಕಟ್ಟಾದ ಕೋಣೆ ಮಾಡುತ್ತೆ ಅಂದ್ರೆ ನಂಬ್ತಿರಾ?


ಹೌದು, ಸೈಕಾಲಜಿಸ್ಟ್ ಪ್ರಕಾರ, ಒಳ್ಳೆಯ, ಸ್ವಚ್ಛ ಮತ್ತು ಸುಂದರವಾದ ವಸ್ತುಗಳನ್ನು ನೋಡುವುದು ನಮಗೆ ಸಂತೋಷವನ್ನು ನೀಡುತ್ತದೆ. ಸ್ವಚ್ಛ ಪರಿಸರದಲ್ಲಿ ಕೆಲಸ ಮಾಡುವುದರಿಂದ, ನಿಮ್ಮ ಮನಸ್ಥಿತಿ ಸುಧಾರಣೆಯಾಗಲು ಪ್ರಮುಖ ಕಾರಣ ಎನ್ನುತ್ತಾರೆ. ಅದಕ್ಕೆ ಹೇಳೋದು ನಾವು ಕೆಲಸ ಮಾಡುವ ಟೇಬಲ್ ಅಚ್ಚುಕಟ್ಟಾಗಿ ಇಡಬೇಕೆಂದು. ಇದು ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುವುದು. ಹಾಗಾದ್ರೆ, ನಮ್ಮ ಮನೆಯಲ್ಲೇ ಇದ್ದುಕೊಂಡು, ನಮ್ಮ ಸಂತೋಷ ಹೆಚ್ಚಿಸುವಂತಹ ಇತರ ಕೆಲಸಗಳು ಯಾವುವು ಎಂಬುದನ್ನು ನೋಡೋಣ.

1. ಕಳೆಯಲು ಹಿತವಾದ ಸ್ಥಳವನ್ನು ಹುಡುಕಿ ನೋಡಲು ಸುಂದರವಾಗಿ ಕಾಣುವ ಮತ್ತು ಸ್ವಲ್ಪ ಸಮಯವನ್ನು ಕಳೆಯಬಹುದಾದ ಸ್ಥಳವನ್ನು ಹುಡುಕಿ. ಅದು ಹೂವುಗಳು, ಪಕ್ಷಿ, ಕೊಳಗಳು ಇತ್ಯಾದಿಗಳಿಂದ ತುಂಬಿದ ಉದ್ಯಾನವನವಾಗಿರಬಹುದು ಅಥವಾ ನಿಮ್ಮ ಸ್ವಂತ ಆಯ್ಕೆಯ ಕುರ್ಚಿ, ಫ್ಲವರ್ ಪಾಟ್ ಮತ್ತು ದೀಪಗಳಿಂದ ನೀವೇ ಅಲಂಕರಿಸಿದ ಬಾಲ್ಕನಿಯಾಗಿರಬಹುದು. ಅಲ್ಲಿ ಪ್ರತಿದಿನ ಸ್ವಲ್ಪ ಸಮಯವನ್ನು ಕಳೆಯಿರಿ. ಇದು ನಿಮ್ಮ ಮನಸ್ಸಿಗೆ ನೆಮ್ಮದಿ ಹಾಗೂ ಒತ್ತಡದಿಂದ ನಿವಾರಣೆ ನೀಡುವುದು.



2. ನಿಮ್ಮ ಕೋಣೆಯನ್ನು ಅಲಂಕರಿಸಿ ನಿಮ್ಮ ಕೋಣೆಯನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಡಿ. ಕಸದ ಬುಟ್ಟಿಯಲ್ಲಿ ಕಸ ತುಂಬಿಕೊಂಡು, ಅಸ್ತವ್ಯಸ್ತವಾಗಿರುವ ಬೆಡ್‌ಶೀಟ್ ಹಾಗೂ ದಿಂಬುಗಳಿಂದ ನಿಮ್ಮ ರೂಮ್ ತುಂಬಿದ್ದರೆ, ಅದು ಮನಸ್ಸಿಗೆ ಯಾವುದೇ ಸಂತಸವನ್ನು ನೀಡಲಾಗದು. ಆದ್ದರಿಂದ ನೀವು ಮಲಗುವ ಸ್ಥಳವು ಸ್ವಚ್ಛವಾಗಿರಬೇಕು ಮತ್ತು ನಿಮ್ಮ ಇಷ್ಟಕ್ಕೆ ತಕ್ಕಂತೆ ಅದನ್ನು ಅಲಂಕರಿಸಿ. ಇದು ಮನಸ್ಸಿಗೆ ಮುದ ನೀಡುವುದು.

3. ವರ್ಣಚಿತ್ರ ಅಥವಾ ಪೇಟಿಂಗ್ಸ್ ನೇತುಹಾಕಿ ನಿಮ್ಮ ಮಲಗುವ ಕೋಣೆಯ ಗೋಡೆಯ ಮೇಲೆ ಕೆಲವು ವರ್ಣಚಿತ್ರಗಳನ್ನು ನೇತುಹಾಕಬಹುದು. ಇದು ನಿಮ್ಮ ಮನಸ್ಸಿಗೆ ಸಂತೋಷನವನ್ನು ನೀಡುತ್ತದೆ. ಆ ಪೇಟಿಂಗ್ಸ್ ನೀವೇ ತಯಾರಿಸಿದರೆ ಇನ್ನೂ ಉತ್ತಮ.. ನಿಮ್ಮ ಸ್ವಂತ ಪೇಂಟಿಂಗ್‌ಗಳನ್ನು ನಿಮ್ಮ ಮನೆಗೆ ಹಾಕಿದಾಗ, ಅದಕ್ಕೆ ಹಾಕಿದ ಶ್ರಮ ನೆನಪಾಗಿ ಅದು ನಿಮಗೆ ಇನ್ನಷ್ಟು ಸುರಕ್ಷಿತ ಮತ್ತು ಸಂತೋಷವನ್ನು ನೀಡುತ್ತದೆ.

4. ಫೋಟೋಗಳನ್ನು ತೆಗೆದುಕೊಳ್ಳಿ ನಿಮ್ಮ ಫೋನ್‌ನಲ್ಲಿ ನೀವು ಇಷ್ಟಪಡುವ ಸ್ಥಳಗಳು ಅಥವಾ ಜನರ ಫೋಟೋಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಆ ಖುಷಿಯ ನೆನಪುಗಳು ಮತ್ತು ಕ್ಷಣಗಳನ್ನು ಮರಳಿ ತರುವುದು. ಆ ಫೋಟೋಗಳನ್ನು ಫ್ರೆಮ್ ಮಾಡಿ, ನಿಮ್ಮ ಮನೆಯಲ್ಲಿ ನೇತು ಹಾಕಬಹುದು.

5. ಸ್ವಆರೈಕೆ ಮಾಡಿ ಹೌದು, ನೀವು ಸಂತೋಷವಾಗಿರಲು, ನಿಮ್ಮ ಬಗ್ಗೆ ನಿಮಗೆ ಕಾಳಜಿ ವಹಿಸುವುದು ಮುಖ್ಯ. ನಿಮ್ಮನ್ನು ನೀವು ಆರೈಕೆ ಮಾಡಿಕೊಳ್ಳಬೇಕು. ಅದಕ್ಕಾಗಿ ನಿಮ್ಮನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿಮ್ಮನ್ನು ವಿಶೇಷವಾಗಿಸುವ ಸ್ಟೈಲ್ ಅಳವಡಿಸಿಕೊಳ್ಳಿ. ಅಂದ್ರೆ ನಿಮ್ಮನ್ನು ಸುಂದರವಾಗಿಸುವ ಹೇರ್ ಕಟ್ ಮಾಡಿಸುವುದು, ಡ್ರೆಸ್ ಖರೀದಿಸುವುದು ಹೀಗೆ ಇವೆಲ್ಲಾ ನಿಮ್ಮನ್ನು ನಿಮ್ಮ ಬಗ್ಗೆ ಒಳ್ಳೆಯದನ್ನು ಅನುಭವಿಸಲು ಸಹಾಯ ಮಾಡುವುದಲ್ಲದೇ, ನಿಮಗೆ ಸಂತೋಷವನ್ನು ನೀಡುತ್ತದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries