HEALTH TIPS

ಕೇರಳಕ್ಕಿಂತ ತೆರಿಗೆ ಕಡಿಮೆ ಇರುವ ಮಾಹಿಯಿಂದ ಅಕ್ರಮ ಡೀಸೆಲ್ ಸಾಗಾಟ; ಕೊಡಿಯೇರಿಯಲ್ಲಿ ಮೂವರ ಬಂಧನ: ಕಣ್ಣೂರಿನಲ್ಲಿ ಡೀಸೆಲ್ ಸ್ಮಗ್ಲಿಂಗ್ ದಂಧೆ

    

                   ಕಣ್ಣೂರು: ಕೇರಳಕ್ಕಿಂತ ಇಂಧನ ತೆರಿಗೆ ಕಡಿಮೆ ಇರುವ ಮಾಹಿಯಿಂದ ಅಕ್ರಮವಾಗಿ ಡೀಸೆಲ್ ಸಾಗಿಸಲು ಯತ್ನಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ತಲಶ್ಶೇರಿ ಎಸ್ಪಿ ನೇತೃತ್ವದ ಪೋಲೀಸ್ ತಂಡ ಕೊಡಿಯೇರಿಯಿಂದ ಆರೋಪಿಯನ್ನು ಬಂಧಿಸಿದ್ದಾರೆ. ಇವರಿಂದ ಹನ್ನೆರಡು ಸಾವಿರ ಲೀಟರ್ ಡೀಸೆಲ್ ವಶಪಡಿಸಿಕೊಳ್ಳಲಾಗಿದೆ.

                 ತಿರುವನಂತಪುರಂ ಅಟ್ಟಿಂಗಲ್ ನಿವಾಸಿ ವಿಷ್ಣು ಲಾಲ್, ಪಯ್ಯವೂರು ನಿವಾಸಿ ಅಲ್ವಿನ್ ಮತ್ತು ಎರ್ನಾಕುಳಂ ಮುನಂಬಂ ನಿವಾಸಿ ಫ್ರೌಲಿನ್ ಜೋಸೆಫ್ ಬಂಧಿತ ಆರೋಪಿಗಳು. ಆರೋಪಿಗಳು ಮಾಹಿಯ ಪಳ್ಳೂರು ಮತ್ತು ಪಂತಕ್ಕಲ್ ನಿಂದ ಅಕ್ರಮವಾಗಿ ಡೀಸೆಲ್ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ.

            ಕೇರಳಕ್ಕಿಂತ ಕಡಿಮೆ ಬೆಲೆ ಇರುವ ಕೇಂದ್ರಾಡಳಿತ ಪ್ರಧೇಶ ಮಾಹಿಯಿಂದ ಎರ್ನಾಕುಳಂಗೆ ಮಾರಾಟ ಮಾಡಲು ತರಲಾಗಿತ್ತು ಎಂಬ ಮಾಹಿತಿ ಪೋಲೀಸರಿಗೆ ಲಭಿಸಿತ್ತು. ಕಳೆದ ಮಂಗಳವಾರವೂ ಚೋಕ್ಲಿಯಲ್ಲಿ ಇದೇ ರೀತಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ 12 ಸಾವಿರ ಲೀಟರ್ ಡೀಸೆಲ್ ವಶಪಡಿಸಿಕೊಳ್ಳಲಾಗಿತ್ತು. ಅಂದು ಕೊಯಮತ್ತೂರಿಗೆ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಡೀಸೆಲ್ ವಶಪಡಿಸಲಾಗಿತ್ತು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries