ನವದೆಹಲಿ:ಇತರ ಸೇವಾ ಕ್ಷೇತ್ರಗಳಲ್ಲಿರುವಂತೆಯೇ ಅಗ್ನಿಪಥ್ ಯೋಜನೆಯಡಿ ನೇಮಕಾತಿ ವೇಳೆಯೂ ಕೇಂದ್ರ ಸರಕಾರ ಮೀಸಲಾತಿ ಸೌಲಭ್ಯವನ್ನು ಒದಗಿಸಲಿದೆ ಎಂದು ಸಂಸತ್ತಿಗೆ ಬುಧವಾರ ನೀಡಿದ ಲಿಖಿತ ಉತ್ತದಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.
0
samarasasudhi
ಜುಲೈ 21, 2022
ನವದೆಹಲಿ:ಇತರ ಸೇವಾ ಕ್ಷೇತ್ರಗಳಲ್ಲಿರುವಂತೆಯೇ ಅಗ್ನಿಪಥ್ ಯೋಜನೆಯಡಿ ನೇಮಕಾತಿ ವೇಳೆಯೂ ಕೇಂದ್ರ ಸರಕಾರ ಮೀಸಲಾತಿ ಸೌಲಭ್ಯವನ್ನು ಒದಗಿಸಲಿದೆ ಎಂದು ಸಂಸತ್ತಿಗೆ ಬುಧವಾರ ನೀಡಿದ ಲಿಖಿತ ಉತ್ತದಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.
ಅಗ್ನಿಪಥ್ ಯೋಜನೆಯಡಿ ಶೇ 15ರಷ್ಟು ಸ್ಥಾನಗಳು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ, ಶೇ 7.5 ಸ್ಥಾನಗಳು ಪರಿಶಿಷ್ಟ ಪಂಗಡಗಳಿಗೆ ಹಾಗೂ ಶೇ 27ರಷ್ಟು ಸ್ಥಾನಗಳು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾಗಿದೆ ಎಂದು ಸಚಿವರು ಹೇಳಿದರು.
ಮಾಜಿ ಅಗ್ನಿವೀರರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ ಹಾಗೂ ಅಸ್ಸಾಂ ರೈಫಲ್ಸ್ ನಲ್ಲಿ ಕಾನ್‍ಸ್ಟೇಬಲ್ (ಸಾಮಾನ್ಯ ಕರ್ತವ್ಯ)/ರೈಫಲ್‍ಮ್ಯಾನ್ ವಿಭಾಗಗಳು ಶೇ 10ರಷ್ಟು ಹುದ್ದೆಗಳು ಮೀಸಲಿರಿಸಲಾಗಿದೆ ಎಂಬ ಮಾಹಿತಿಯನ್ನೂ ಸಚಿವರು ನೀಡಿದ್ದಾರೆ.