HEALTH TIPS

ಕಾರ್ಗಿಲ್ ವಿಜಯ್ ದಿವಸ್: ಪಾಕಿಸ್ತಾನದ ಹುಟ್ಟಡಗಿಸಿದ ಭಾರತೀಯ ಯೋಧರ ರೋಚಕ ಕತೆ

 ಕಾರ್ಗಿಲ್ ಯುದ್ಧ ನಡೆದು ಇಂದಿಗೆ 23ನೇ ವರ್ಷ. ಪಾಕಿಸ್ತಾನ ಸೈನಿಕರ ಹುಟ್ಟಡಗಿಸಿ ಭಾರತೀಯ ಸೈನಿಕರು ವಿಜಯ ಪತಾಕೆ ಹಾರಿಸಿದ ದಿನ. ಈ ವಿಜಯೋತ್ಸವದ ನೆನಪಿಗಾಗಿ ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ್ ಅನ್ನು ಜುಲೈ 26ರಂದು ಆಚರಿಸಲಾಗುವುದು.

ಪಾಕಿಸ್ತಾನದ ವಂಚನೆ

ಚಳಿಗಾಲದಲ್ಲಿ ಕಾಶ್ಮೀರದ ಪರ್ವತ ಪ್ರದೇಶದಲ್ಲಿನ ಮೈಕೊರೆಯುವ ಚಳಿ ಹೇಗಿರುತ್ತೆ ಎಂಬುವುದನ್ನು ಊಹಿಸಿ ನೋಡಿ, ನಾವು 16 ಡಿಗ್ರಿ, 10 ಡಿಗ್ರಿ ತಾಪಮಾನಕ್ಕೆ ಚಳಿಯೆಂದು ಒದ್ದಾಡಿದರೆ ನಮ್ಮ ಸೈನಿಕರು ಇರುವ ಆ ಪ್ರದೇಶದಲ್ಲಿ ಮೈನಸ್ ಡಿಗ್ರಿ ಚಳಿಯಿರುತ್ತದೆ. ಈ ಮೈ ಕೊರೆಯುವ ಚಳಿಯಿರುವಾಗ ಗಡಿ ನಿಯಂತ್ರಣ ರೇಖೆಯ ಆಯ ಬದಿಗಳಲ್ಲಿ ಕೆಲವು ಮುಂಚೂಣಿ ಶಿಬಿರಗಳನ್ನು ತೊರೆಯುವುದು, ಅತಿಕ್ರಮೇಣಕ್ಕೆ ದಾರಿಯಾಗದಂತೆ ಗಸ್ತನ್ನು ಕುಂಠಿತಗೊಳೀಸುವುದು ಪಾಕಿಸ್ತಾನ, ಭಾರತ ಎರಡೂ ಸೇನೆಗಳ ವಾಡಿಕೆ.

ಆದರೆ 1999ರ ಫೆಬ್ರವರಿ ತಿಂಗಳಿನಲ್ಲಿ ಪಾಕಿಸ್ತಾನ ಸೇನೆಯು ತನ್ನ ಕುತಂತ್ರ ಬುದ್ಧಿ ತೋರಿಸಿತು. ಗಡಿ ನಿಯಂತ್ರಣ ರೇಖೆಯ ಭಾರತದ ಬದಿಯಲ್ಲಿರುವ ಶಿಭಿರಗಳ ಮೇಲೆ ಆಕ್ರಮಣಕ್ಕೆ ತನ್ನ ಪಡೆಗಳನ್ನು ಕಳಿಸಿತು. ಇದು ಭಾರತ-ಪಾಕ್ ಯುದ್ಧಕ್ಕೆ ನಾಂದಿಯಾಯಿತು.

3 ಹಂತದಲ್ಲಿ ನಡೆದ ಯುದ್ಧ

ಮೊದಲಿಗೆ ಪಾಕಿಸ್ತಾನವು ಭಾರತದ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಭಾರತ ನಿಯಂತ್ರಿತ ಕಾಶ್ಮೀರ ಭಾಗಕ್ಕೆ ನುಸುಳಿಕೋರರನ್ನು ಕಳುಹಿಸಿತು. ಭಾರತಕ್ಕೆ ಸೇರಿದ ಸ್ಥಳಗಳನ್ನು ಆಕ್ರಮಿಸಿಕೊಳ್ಳುತ್ತಾ ತನ್ನ ಫಿರಂಗಿಗಳನ್ನು ರಾಷ್ಟ್ರೀಯ ಹೆಚ್ಚಾರಿ 1ಗೆ ತರುವಂತೆ ಅನುಮಾಡಿ ಕೊಂಡಿತು.

ಕೆಳ ಮುಷೋಖ್‌ ಕಣಿವೆಯ ಶಿಖರಗಳು, ಡ್ರಾಸ್‌ನ ಮಾರ್ಪೋಲಾ ಪರ್ವತ ಶ್ರೇಣಿಗಳು, ಕಾರ್ಗಿಲ್ ಬಳಿಯ ಕಕ್ಸಾರ್‌, ಸಿಂಧು ನದಿಯ ಪೂರ್ವಕ್ಕಿರುವ ಬೆಟಾಲಿಕ್‌ ವಲಯ, ಗಡಿ ನಿಯಂತ್ರಣ ರೇಖೆಯ ಉತ್ತರಕ್ಕೆ ತಿರಗುವ ಚೋರ್‌ಬಾಟ್ಲಾ ವಲಯದ ಶಿಖರಗಳು ಮತ್ತು ಸಿಯಾಚಿನ್ ಪ್ರದೇಶದ ಟರ್ಟೊಕ್‌ವರೆಗೆ ಪಾಕಿಸ್ತಾನ ಸೇನೆ ಅತಿಕ್ರಮಣ ಮಾಡಿತು.


ಭಾರತಕ್ಕೆ ಪಾಕಿಸ್ತಾನ ಕಳ್ಳಾಟದ ಸುಳಿವು ಕೂಡ ಇರಲಿಲ್ಲ ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿ ತೋರಿದ್ದು ಭಾರತೀಯ ಸೇನೆಯ ಅರಿವಿಗೇ ಬಂದಿರಲಿಲ್ಲ. ಈ ಕುರಿತು ಸೇನೆಗೆ ಕಾಶ್ಮೀರದ ಸ್ಥಳೀಯರೊಬ್ಬರು ಮಾಹಿತಿ ನೀಡುತ್ತಾರೆ. ಆಗ ಎಚ್ಚೆತ್ತ ನಮ್ಮ ಸೇನೆ 5 ಯೋಧರನ್ನು ಗಸ್ತಿಗೆ ಕಳುಹಿಸುತ್ತದೆ. ಆದರೆ ಈ ಯೋಧರನ್ನು ಪಾಪಿಗಳು ಚಿತ್ರ ಹಿಂಸೆ ನೀಡಿ ಕೊಂದು ಹಾಕುತ್ತಾರೆ. ಆಗ ಭಾರತ ಸರಕಾರ ಇಪ್ಪತ್ತು ಸಾವಿರ ಸೈನಿಕರ ಪಡೆ ಸಜ್ಜುಗೊಳಿಸಿ ಆಪರೇಷನ್ ವಿಜಯ್ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸುತ್ತೆ. ಕಾರ್ಗಿಲ್ ದುರ್ಗಮ ಪ್ರದೇಶದ ಒಳಹೊಕ್ಕು ಪಾಕ್ ಬಗ್ಗು ಬಡೆಯಲು ಭೂ ಸೇನೆ ಜೊತೆಗೆ ವಾಯು ಸೇನೆಯೂ ಸೇರಿಕೊಂಡು 'ಆಪರೇಷನ್ ಸೇಫ್‌ ಸಾಗರ್' ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಾರೆ.

2ನೇ ವಿಶ್ವ ಯುದ್ಧದ ಬಳಿಕ ಅಪಾರ ಶಸ್ತ್ರಾಸ್ತ ಬಳಸಿದ ಯುದ್ಧ ಆರ್‌-77 ಕ್ಷಿಪಣಿ, ಮಿಗ್‌-21 ಮತ್ತು ಮೀರಜ್‌ 2000 ಯುದ್ಧ ವಿಮಾನಗಳನ್ನು ಬಳಸಲಾಗುವುದು. ಬೋಫೋರ್ಸ್ ಬಂದೂಕುಗಳನ್ನು ಬಳಸಲಾಗುತ್ತದೆ, 300 ಫಿರಂಗಿಗಳು, ರಾಕೆಟ್‌ಗಳನ್ನು ಬಳಸುತ್ತಾರೆ. 2ನೇ ವಿಶ್ವ ಯುದ್ಧದ ಬಳಿಕ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಬಳಕೆ ಮಾಡಿದ ಮೊದಲ ಯುದ್ಧ ಇದಾಗಿದೆ. ಈ ಹೋರಾಟದಲ್ಲಿ ಎರಡೂ ದೇಶಗಳಲ್ಲಿ ಸಾಕಷ್ಟು ಸೈನಿಕರು ಪ್ರಾಣ ಕಳೆದುಕೊಂಡರು. ಸತತ ಹೋರಾಟದ ಫಲವಾಗಿ ಟೋಲೊಲಿಂಗ್ ಭಾರತದ ವಶವಾಯಿತು.

ಭಾರತದ ವಿಜಯೋತ್ಸವ ಟೈಗರ್ ಹಿಲ್ ಭಾರತ ವಶಪಡಿಸಿಕೊಂಡಿತು. ಆಕ್ರಮಿತ ಪ್ರದೇಶದ ಅಂದಾಜು ಶೇ.80ರಷ್ಟು ಭಾಗ ಭಾರತ ವಶಪಡಿಸಕೊಂಡಿತು. ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಾಕಿಸ್ತಾನದ ಮೇಲೆ ಒತ್ತಡ ಬಿತ್ತು, ಅಷ್ಟರಲ್ಲಿಯೇ ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತು. ಯುದ್ಧದಲ್ಲಿ ಸತ್ತ ಪಾಕ್‌ ಸೈನಿಕರನ್ನು ಸ್ವೀಕರಿಸಲೂ ಪಾಕ್ ಹಿಂದೇಟು ಹಾಕಿತು. 1999 ಜುಲೈ 26 ರಂದು ಭಾರತ ಪಾಕಿಸ್ತಾನದ ವಿರುದ್ಧ ಸಾರಿದ ಸಮರದಲ್ಲಿ ಸಂಪೂರ್ಣ ಜಯಶಾಲಿಯಾಯಿತು. ಈ ಗೆಲುವನ್ನು ಸ್ಮರಣೆ ಮಾಡಲು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries