HEALTH TIPS

ದೇಲಂಪಾಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ

             
              ಮುಳ್ಳೇರಿಯ: ದೇಲಂಪಾಡಿ ಬನಾರಿಯ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯ ನುರಿತ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ಶನಿವಾರ ನಡೆಯಿತು. ಅಸ್ತಿತ್ವಂ ಪ್ರತಿμÁ್ಠನ ಕುಂಟಾರು, ಹಿಂದು ಐಕ್ಯವೇದಿ ದೇಲಂಪಾಡಿ ಘಟಕ ಹಾಗೂ ಕೆ.ಎಂಸಿ ಆಸ್ಪತ್ರೆ, ಅತ್ತಾವರ – ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಸಂಯೋಜಿಸಲ್ಪಟ್ಟ ಈ ಶಿಬಿರವನ್ನು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು.


            ವಿನಯ ಕಲ್ಲಡ್ಕ  ಅಧ್ಯಕ್ಷತೆ ವಹಿಸಿದ್ದರು. ಅಕ್ಷಯ ರಜಪೂತ್, ಕೆ. ಶಿವರಾಮ ಕಲ್ಲೂರಾಯ, ವಿಶ್ವವಿನೋದ ಬನಾರಿ ಶುಭ ಹಾರೈಸಿದರು. ಬೆಳ್ಳಿಪ್ಪಾಡಿ ಸದಾಶಿವ ರೈ, ಡಾ. ಸುಬ್ಬಣ್ಣಯ್ಯ ಕೋಟಿಗದ್ದೆ, ಡಿ. ವೆಂಕಪ್ಪಯ್ಯ ದೇಲಂಪಾಡಿ, ಸೀತಾರಾಮ ರೈ ಕಲ್ಲಡ್ಕ ಗುತ್ತು, ಡಿ. ರಾಮಣ್ಣ ಮಾಸ್ತರ್ ದೇಲಂಪಾಡಿ, ಕೆ.ರಾಮಯ್ಯ ರೈ ಅವರು ಉಪಸ್ಥಿತರಿದ್ದರು. ಅಸ್ತಿತ್ವಂ ಪ್ರತಿμÁ್ಠನದ ಮಂಜುನಾಥ ಉಡುಪ ಕುಂಟಾರು ಶಿಬಿರಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ತಿಳಿಯಪಡಿಸಿದರು. ದಯಾನಂದ ಕಲ್ಲಡ್ಕ  ಪ್ರಾರ್ಥನೆಗೈದರು.  ಸತೀಶ್ ದೇಲಂಪಾಡಿ ಸ್ವಾಗತಿಸಿ, ಸುನೀತ್ ವಾಲ್ತಾಜೆ ವಂದಿಸಿದರು. ನುರಿತ ವೈದ್ಯ ಸಮೂಹದಿಂದ ತಪಾಸಣೆ, ಸಲಹೆ, ಸೂಚನೆ, ಕನ್ನಡಕ ವಿತರಣೆಯೇ ಮುಂತಾದ ಉಪಯುಕ್ತ ಸೇವಾ ಕಾರ್ಯಗಳೊಂದಿಗೆ ರೂಪುಗೊಂಡ ಈ ಶಿಬಿರವು ಯಶಸ್ವಿಯಾಗಿ ಮೂಡಿಬಂತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries