ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ಅವರ ಹಣಕಾಸು ವಹಿವಾಟಿನ ಕುರಿತು ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ಸಿದ್ಧತೆ ನಡೆಸಿದೆ. ಸ್ವಪ್ನಾ ಸುರೇಶ್ ನೀಡಿರುವ ಸಾಕ್ಷ್ಯ ಆಧರಿಸಿ ಇಡಿ ತನಿಖೆ ನಡೆಸಲು ಸಿದ್ಧತೆ ನಡೆಸಿದೆ. ವೀಣಾ ವಿಜಯನ್ ಅವರ ಐಟಿ ಕಂಪನಿಯ ಹಣಕಾಸು ವ್ಯವಹಾರಗಳ ಬಗ್ಗೆಯೂ ಇಡಿ ತನಿಖೆ ನಡೆಸಲಿದೆ. ಈ ಸಂಬಂಧ ಇಡಿ ಮುಖ್ಯಮಂತ್ರಿ ಪತ್ನಿ ಕಮಲಾ ವಿಜಯನ್ ಅವರಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದು ಸೂಚಿಸಲಾಗಿದೆ.
ಇದೇ ವೇಳೆ ಸ್ವಪ್ನಾ ಸುರೇಶ್ ಮುಖ್ಯಮಂತ್ರಿ ಹಾಗೂ ಅಪರಾಧ ವಿಭಾಗದ ವಿರುದ್ಧ ಗಂಭೀರ ಆರೋಪ ಮಾಡಿರುವರು. ಕ್ರೈಂ ಬ್ರಾಂಚ್ ತನ್ನನ್ನು ವಿಚಾರಣೆಗಾಗಿ ಬೇಟೆಯಾಡುತ್ತಿದೆ ಮತ್ತು ಮಾನಸಿಕವಾಗಿ ಹಿಂಸಿಸುತ್ತಿದೆ ಎಂದು ಸ್ವಪ್ನಾ ಹೇಳಿದ್ದಾರೆ. ತನ್ನನ್ನು ಗಲಭೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಸ್ವಪ್ನಾ ತಿಳಿಸಿದ್ದಾರೆ.
ಮುಖ್ಯಮಂತ್ರಿ ಪುತ್ರಿ ವೀಣಾ ವಿಜಯನ್ ಅವರ ಹಣಕಾಸು ವ್ಯವಹಾರದ ದಾಖಲೆಗಳನ್ನು ಕ್ರೈಂ ಬ್ರಾಂಚ್ ಕೇಳಿದೆ ಎಂದೂ ಸ್ವಪ್ನಾ ಹೇಳಿದ್ದಾರೆ. ಕ್ರೈಂ ಬ್ರಾಂಚ್ ತಾನು ಕಾರ್ಯನಿರ್ವಹಿಸುವ ಎಚ್ ಆರ್ ಡಿ ಸಿ ಸಂಸ್ಥೆ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ಕೇಳಿಕೊಂಡಿದೆ. ಅಡ್ವ.ಕೃಷ್ಣರಾಜ್ ಅವರೊಂದಿಗಿನ ಭೇಟಿಯನ್ನು ತಪ್ಪಿಸುವಂತೆ ಕೇಳಿಕೊಂಡಿದ್ದನ್ನು ಸ್ವಪ್ನಾ ಬಹಿರಂಗಪಡಿಸಿದ್ದಾರೆ.





