ತಿರುವನಂತಪುರ: ಸಿಪಿಎಂ ನಾಯಕರ ದೇಶ ಮತ್ತು ಸಂವಿಧಾನದ ಬಗೆಗಿನ ಧೋರಣೆಯನ್ನು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಪಕ್ಷವಾಗಲಿ, ಮುಖ್ಯಮಂತ್ರಿಯಾಗಲಿ ರಾಜೀನಾಮೆ ನೀಡುವಂತೆ ಹೇಳದಿರುವುದು ಹೇಯಕರ ಎಂದು ತಿಳಿಸಿರುವರು. ಇದು ಅತ್ಯಂತ ಗಂಭೀರ ವಿಚಾರ ಎಂದು ಕೆ. ಸುರೇಂದ್ರನ್ ಹೇಳಿದರು.
ಸಂವಿಧಾನದ ವಿರುದ್ಧ ಇಂತಹ ದೊಡ್ಡ ಟೀಕೆ ಮಾಡಿದ್ದಕ್ಕೆ ಪಕ್ಷ ಅವರಿಗೆ ಛೀಮಾರಿ ಹಾಕಿಲ್ಲ, ರಾಜೀನಾಮೆ ನೀಡುವಂತೆ ಹೇಳಿಲ್ಲ ಎಂದು ಕೆ.ಸುರೇಂದ್ರನ್ ಬೊಟ್ಟುಮಾಡಿದ್ದಾರೆ. ಅವರು ಭಾರತೀಯ ಸಂವಿಧಾನ ಅಥವಾ ಈ ದೇಶಕ್ಕಿಂತ ಹೆಚ್ಚಾಗಿ ಚೀನಾ ಮತ್ತು ಇತರ ವಿದೇಶಗಳಿಗೆ ನಿಷ್ಠರಾಗಿದ್ದಾರೆ. ಅದು ಈಗ ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಸಾಜಿ ಚೆರಿಯನ್ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದರೆ, ಮುಖ್ಯಮಂತ್ರಿ ಸೇರಿದಂತೆ ಜನರಿಗೆ ಈ ದೇಶದ ಸಂವಿಧಾನದ ಮೇಲೆ ನಂಬಿಕೆಯಿಲ್ಲ ಎಂದು ಅವರು ಸಾಬೀತಾದಂತಾಗಿದೆ. ಅವರು ಭಾರತೀಯ ಸೆಕ್ಯುಲರ್ ರಿಪಬ್ಲಿಕ್ ದೃಷ್ಟಿಕೋನಕ್ಕೆ ವಿರುದ್ಧವಾಗಿದ್ದಾರೆ. ಅವರು ಯಾವಾಗಲೂ ಸಂವಿಧಾನದ ವಿರುದ್ಧ ನಿಲುವು ತೆಗೆದುಕೊಳ್ಳುತ್ತಾರೆ ಎಂದು ಕೆ ಸುರೇಂದ್ರನ್ ತಿಳಿಸಿದರು.
ಸಜಿ ಚೆರಿಯನ್ ಸಚಿವ ಸ್ಥಾನಕ್ಕೆ ಮಾತ್ರವಲ್ಲದೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಕೆ.ಸುರೇಂದ್ರನ್ ಈ ಹಿಂದೆ ಮನವಿ ಮಾಡಿದ್ದರು. ರಾಜೀನಾಮೆ ಘೋಷಿಸಿದಾಗ ಸ್ವತಃ ಸಾಜಿ ಚೆರಿಯನ್ ಅವರೇ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು. ಮುಖ್ಯಮಂತ್ರಿಯಾಗಲಿ, ಪಕ್ಷವಾಗಲಿ ರಾಜೀನಾಮೆ ನೀಡುವಂತೆ ಹೇಳಿಲ್ಲ ಎಂದೂ ಅವರು ಹೇಳಿದ್ದರು.


