ಕುಂಬಳೆ: ಕೃಷಿಭವನ ವ್ಯಾಪ್ತಿಯಲ್ಲಿ ಕೃಷಿಗಾಗಿ ಉಚಿತ ವಿದ್ಯುತ್ ಸಂಪರ್ಕ ಪಡೆದಿರುವ ಕೃಷಿಕರು ತಮ್ಮ ಅರ್ಜಿಯನ್ನು ಜು. 30ರ ಮುಂಚಿತವಾಗಿ ನವೀಕರಿಸಬೇಕು. ಅರ್ಜಿಯೊಂದಿಗೆ ಜಮೀನು ಸ್ವಾಧೀನವಿರುವ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಪುಸ್ತಕರ ನಕಲು, ಆಧಾರ್ ಕಾರ್ಡು ನಕಲು ಪ್ರತಿ ಹಾಗೂ ಇತ್ತೀಚಿನ ವಿದ್ಯುತ್ ಬಿಲ್ ಜತೆಗಿರಿಸಬೇಕು. ಅರ್ಜಿ ನವೀಕರಿಸದ ಗ್ರಾಹಕರ ಉಚಿತ ವಿದ್ಯುತ್ ಸಂಪರ್ಕದ ಪ್ರಯೋಜನ ಕಳೆದುಕೊಳ್ಳಲಿರುವುದಾಗಿ ಪ್ರಕಟಣೆ ತಿಳಿಸಿದೆ.





