HEALTH TIPS

ಸ್ವಂತ ಇಂಟರ್​ನೆಟ್​ ಹೊಂದುವ ಮೂಲಕ ದಾಖಲೆ ಬರೆದ ಕೇರಳ: ಮುಖ್ಯಮಂತ್ರಿ ಘೋಷಣೆ: ಕೆ.ಪೋನ್ ಗೆ ಇಂಟರ್ನೆಟ್ ಸೇವಾ ಪೂರೈಕೆದಾರರ ಪರವಾನಗಿ ; ಭಾರತದಲ್ಲೇ ಸ್ವಂತ ಇಂಟರ್ನೆಟ್ ಪಡೆಯಲಿರುವ ಏಕೈಕ ರಾಜ್ಯವಾಗಲಿರುವ ಕೇರಳ!

           ತಿರುವನಂತಪುರ: ಸುಶಿಕ್ಷಿತರ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಕೇರಳ ಇದೀಗ ಮತ್ತೊಂದು ದಾಖಲೆ ಬರೆದಿದೆ. ತನ್ನದೇ ಆದ ಸ್ವಂತ ಇಂಟರ್​ನೆಟ್ ಹೊಂದಿದೆ. ಈ ಮೂಲಕ ಸ್ವಂತ ಇಂಟರ್​ನೆಟ್​ ಹೊಂದಿರುವ ದೇಶದ ಮೊದಲ ಮತ್ತು ಏಕೈಕ ರಾಜ್ಯ ಎಂಬ ಖ್ಯಾತಿಯನ್ನು ಗಳಿಸಿದೆ.

              ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ. ನಮ್ಮ ರಾಜ್ಯದ ಪ್ರತಿಯೊಬ್ಬರಿಗೂ ಇಂಟರ್​ನೆಟ್​ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಈ ಹಿನ್ನೆಲೆಯಲ್ಲಿ ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್‌ನ ಐಟಿ ಮೂಲಸೌಕರ್ಯ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಗೆ ದೂರಸಂಪರ್ಕ ಇಲಾಖೆಯು ಇಂಟರ್​ನೆಟ್​ ಸೇವಾ ಪೂರೈಕೆದಾರ (ಐಎಸ್​ಪಿ) ಪರವಾನಗಿಯನ್ನು ನೀಡಿದೆ ಎಂದಿದ್ದಾರೆ.

             ಕೇರಳದ ಹಿಂದಿನ ಸರ್ಕಾರವು 2019 ರಲ್ಲಿ ಇಂಟರ್ನೆಟ್ ಸಂಪರ್ಕವನ್ನು ಮೂಲಭೂತ ಹಕ್ಕು ಎಂದು ಘೋಷಣೆ ಮಾಡಿತ್ತು. ಜೊತೆಗೆ ಕೇರಳ ರಾಜ್ಯದಾದ್ಯಂತ ಇಂಟರ್​ನೆಟ್​ ಸಂಪರ್ಕವನ್ನು ಸರಿಯಾಗಿ ಕಲ್ಪಿಸಲು 1,548 ಕೋಟಿ ರೂಪಾಯಿ ಮೊತ್ತದ ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ (KFON) ಎಂಬ ಯೋಜನೆಯನ್ನು ಪ್ರಾರಂಭ ಮಾಡಿತ್ತು. ಈಗ ಆ ಯೋಜನೆಗೆ ಚಾಲನೆ ಸಿಕ್ಕಿದೆ.

               ಕೆ-ಫೋನ್ ಅಥವಾ ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ ಡಿಜಿಟಲ್ ಕೇರಳ ಸರ್ಕಾರದ ಹೊಸ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸರ್ಕಾರದ ಪ್ರಕಾರ ಈ ಯೋಜನೆಯಿಂದ ರಚಿಸಲಾದ ಮೂಲಸೌಕರ್ಯವು ಕೇರಳ ರಾಜ್ಯದ ಪ್ರಸ್ತುತ ಟೆಲಿಕಾಂ ಪರಿಸರ ವ್ಯವಸ್ಥೆಗೆ ಪೂರಕವಾಗಿದೆ ಎಂದು ನಿರೀಕ್ಷಿಸಲಾಗಿದೆ.

              ಎಲ್ಲಾ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮಾತ್ರವಲ್ಲದೇ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉಚಿತ ಇಂಟರ್​ನೆಟ್​ ಸೌಲಭ್ಯ ಒದಗಿಸುವ ಗುರಿ ಸರ್ಕಾರಕ್ಕೆ ಇದೆ.

                  ಕೆ ಪೋನ್‍ಗೆ ಇಂಟರ್‍ನೆಟ್ ಸೇವಾ ಪೂರೈಕೆದಾರ ವರ್ಗ ಬಿ ಏಕೀಕೃತ ಪರವಾನಗಿ ನೀಡಿ ಕೇಂದ್ರ ದೂರಸಂಪರ್ಕ ಇಲಾಖೆ ಈ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಇಂಟರ್‍ನೆಟ್ ಸೇವಾ ಸೌಲಭ್ಯ ಕಲ್ಪಿಸಲು ಅನುಮತಿ ನೀಡಲಾಗಿದೆ. ಇದರೊಂದಿಗೆ ಕೇರಳ ತನ್ನದೇ ಆದ ಐ.ಎಸ್.ಪಿ ಪರವಾನಗಿ ಮತ್ತು ಇಂಟರ್ನೆಟ್ ಯೋಜನೆಯನ್ನು ಹೊಂದಿರುವ ಮೊದಲ ರಾಜ್ಯವಾದ ಹೆಮ್ಮೆಪಡೆದಿದೆ. 

            ಐ.ಎಸ್.ಪಿ ವರ್ಗ ಬಿ ಪರವಾನಗಿಯು ಸೇವಾ ಪ್ರದೇಶದೊಳಗೆ ಇಂಟರ್ನೆಟ್ ಸೌಲಭ್ಯಗಳ ಕಾರ್ಯಾಚರಣೆಯನ್ನು ಅನುಮತಿಸುವ ಉದ್ದೇಶವನ್ನು ಹೊಂದಿದೆ. ಇದರ ಪ್ರಕಾರ, ಕೆ ಪೋೀನ್ ಈಗ ಕೇರಳ ಸೇವಾ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಮೊದಲ ಹಂತವಾಗಿ, ಮೂಲಸೌಕರ್ಯ ಸೇವೆಗಳನ್ನು ಒದಗಿಸಲು ಕೇಂದ್ರವು ಕಳೆದ ವಾರ ಕೆ.ಪೋನ್ ಗೆ  ಮೂಲಸೌಕರ್ಯ ಒದಗಿಸುವವರ ವರ್ಗ 1 ಪರವಾನಗಿಯನ್ನು ನೀಡಿದೆ.

                 ಕೇರಳದ ಸ್ವಂತ ಇಂಟರ್ನೆಟ್ ಯೋಜನೆ ಕೆ ಪೋನ್ ಅನ್ನು ಅಧಿಕೃತ ಇಂಟರ್ನೆಟ್ ಸೇವಾ ಪೂರೈಕೆದಾರ ಎಂದು ಕೇಂದ್ರ ಸರ್ಕಾರ ಗುರುತಿಸಿರುವುದು ಹೆಮ್ಮೆಯ ಸಾಧನೆಯಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸುಮಾರು 30,000 ಸರ್ಕಾರಿ ಕಚೇರಿಗಳು ಕೆ ಫೆÇೀನ್ ಮೂಲಕ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ. ಅಂತಿಮ ಸಿದ್ಧತೆಗಳ ನಂತರ, ಈ ಎಲ್ಲಾ ಸ್ಥಳಗಳಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವುದು ಇಂಟರ್ನೆಟ್ ಒದಗಿಸುವುದರೊಂದಿಗೆ ಕಾಗದರಹಿತ ಪ್ರಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದ ಸರಕಾರಿ ಕಚೇರಿಗಳಲ್ಲಿ ಜನಸ್ನೇಹಿ ವಾತಾವರಣ ನಿರ್ಮಾಣವಾಗಲಿದ್ದು, ಶೀಘ್ರವಾಗಿ ಸೇವೆಗಳನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿ ಹೇಳಿರುವರು.

                  ಕೆ-ಫೋನ್ ಎನ್ನುವುದು ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಕಡಿಮೆ ವೆಚ್ಚದ ಮತ್ತು ಉತ್ತಮ ಗುಣಮಟ್ಟದ ಹೈಸ್ಪೀಡ್ ಇಂಟರ್ನೆಟ್ ಒದಗಿಸಲು ಪ್ರಾರಂಭಿಸಿರುವ ಯೋಜನೆಯಾಗಿದೆ. ಇಂಟರ್‍ನೆಟ್ ಜನರ ಹಕ್ಕು ಎಂದು ಘೋಷಿಸಿದ ಕೇರಳಕ್ಕೆ ಈ ಯೋಜನೆ ದೊಡ್ಡ ಗ್ಯಾರಂಟಿಯಾಗಿದೆ. ಬಡವರಿಗೆ ಹಾಗೂ ಇತರರಿಗೆ ಮಿತ ವೆಚ್ಚದಲ್ಲಿ ಉಚಿತ ಇಂಟರ್ ನೆಟ್ ಸೌಲಭ್ಯ ಕಲ್ಪಿಸುವ ಕೆ ಪೋನ್ ಯೋಜನೆ ಟೆಲಿಕಾಂ ಕ್ಷೇತ್ರದ ಕಾಪೆರ್Çರೇಟಿಸಂ ವಿರುದ್ಧ ಜನರಿಗೆ  ಪರ್ಯಾಯವೂ ಆಗಿದೆ,’’ ಎಂದು ಮುಖ್ಯಮಂತ್ರಿ ಹೇಳಿರುವರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries