HEALTH TIPS

ಪ್ರಸಕ್ತ ಓಮಿಕ್ರಾನ್ ತಳಿಗಳು ಶೇ.20-30 ರಷ್ಟು ಹೆಚ್ಚು ಸೋಂಕು ಹರಡಿಸಲು ಸಮರ್ಥ: ಎನ್ ಟಿಎಜಿಐ ವೈದ್ಯ ಎನ್ ಕೆ ಅರೋರ

 

           ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಸಂಖ್ಯೆ ಹೆಚ್ಚಳದ ನಡುವೆ ಐಎನ್‌ಎಸ್‌ಎಸಿಒಜಿ (ಇಂಡಿಯಾ ಸಾರ್ಸ್‌ ಕೋವ್‌ -2 ಜೆನೋಮಿಕ್‌ ಕನ್ಸೋರ್ಟಿಯಂ) ಕೋವಿಡ್-19 ರೂಪಾಂತರಗಳ ವಂಶವಾಹಿ ಸಂರಚನೆ ವಿಶ್ಲೇಷಣೆ (ಜಿನೋಮ್‌ ಸೀಕ್ವೆನ್ಸಿಂಗ್) ಯನ್ನು ಆಗಸ್ಟ್ 8 ರಂದು ನಡೆಸಲಿದೆ.

                 ದೇಶಾದ್ಯಂತ ಓಮಿಕ್ರಾನ್ ನ ವಿವಿಧ ತಳಿಗಳ ಸೋಂಕು ಹರಡುತ್ತಿದ್ದು, ಇವು ಮೂಲ ಓಮಿಕ್ರಾನ್ ಗಿಂತಲೂ ಶೇ.20-30 ರಷ್ಟು ಹೆಚ್ಚು ಸೋಂಕು ಹರಡಿಸಲು ಸಮರ್ಥವಾಗಿದೆ.

                 ಮೂಲ ಓಮಿಕ್ರಾನ್ ಗಿಂತಲೂ ಶೇ.20-30 ರಷ್ಟು ಹೆಚ್ಚು ಸೋಂಕು ಹರಡಿಸಲು ಸಮರ್ಥವಾಗಿರುವ ಹೊಸ ತಳಿಗಳು (ರೂಪಾಂತರಿಗಳು) ಹೆಚ್ಚಾಗಿ ಹರಡುತ್ತಿದೆಯಾದರೂ ಆಸ್ಪತ್ರೆ ಸೇರುವುದು ಹಾಗೂ ಸಾವಿನ ಪ್ರಮಾಣ ಈವರೆಗೂ ಕಡಿಮೆ ಇದೆ ಎನ್ನುತ್ತಾರೆ ಎನ್ ಟಿಎಜಿಐ ನ ಮುಖ್ಯಸ್ಥರಾಗಿರುವ ಡಾ. ಎನ್ ಕೆ ಅರೋರಾ.

               ಬಿಎ.4, ಬಿಎ.5, ಬಿಎ.2.7.5, ಬಿಎ.2.38 ಓಮಿಕ್ರಾನ್ ನ ಉಪತಳಿಗಳಾಗಿವೆ ರೋಗದ ತೀವ್ರತೆ ಹಾಗೂ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಹೆಚ್ಚಾಗಿಲ್ಲ ಎಂದು ಅರೋರ ತಿಳಿಸಿದ್ದಾರೆ.

               ಈ ಹೊಸ ಉಪ-ತಳಿಯು ಈಗಾಗಲೇ ಲಸಿಕೆಯನ್ನು ತೆಗೆದುಕೊಂಡು ಪ್ರತಿಕಾಯಗಳನ್ನು ಹೊಂದಿರುವ ಜನರ ಮೇಲೆ ಕೂಡ ದಾಳಿ ಮಾಡುತ್ತದೆ'

              ದೆಹಲಿಯಲ್ಲಿ ಗುರುವಾರದಂದು 2,726 ಹೊಸ ಪ್ರಕರಣಗಳು ಕಂಡುಬಂದಿದ್ದು, 6 ಮಂದು ಸಾವನ್ನಪ್ಪಿದ್ದರು. ಪಾಸಿಟಿವಿಟಿ ದರ ಶೇ.14.38 ರಷ್ಟಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries