HEALTH TIPS

ವಿಡಿಯೊ ನೋಡಿ: ಇದು 295 ವ್ಯಾಗನ್‌ಗಳ, 3.5 ಕಿ.ಮೀ ಉದ್ದದ 'ಸೂಪರ್‌' ವಾಸುಕಿ ರೈಲು

 

        ನವದೆಹಲಿ: ಸುಮಾರು 3.5 ಕಿ.ಮೀ.ನಷ್ಟು ಉದ್ದನೆಯ ಸರಕುಸಾಗಣೆ ರೈಲು 'ಸೂಪರ್‌ ವಾಸುಕಿ'ಯ ಪ್ರಾಯೋಗಿಕ ಸಂಚಾರವನ್ನು ರೈಲ್ವೆ ಇಲಾಖೆಯು ಸ್ವಾತಂತ್ರ್ಯ ದಿನದಂದು ಅಮೃತ ಸ್ವಾತಂತ್ರ್ಯೋತ್ಸವದ ಭಾಗವಾಗಿ ಯಶಸ್ವಿಯಾಗಿ ನಡೆಸಿದೆ.

ಈ ರೈಲು ಕೋಠಾರಿ ರೋಡ್ ರೈಲು ನಿಲ್ದಾಣವನ್ನು ಹಾಯ್ದು ಹೋಗುವಾಗಿನ ವಿಡಿಯೊ ವೈರಲ್ ಆಗಿದೆ. ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ವಿಡಿಯೊ ಹಂಚಿಕೊಂಡಿದ್ದಾರೆ.

            ಈ ರೈಲಿನಲ್ಲಿ ಸರಕು ಭರ್ತಿಯಾದ 295 ವ್ಯಾಗನ್‌ಗಳು ಇದ್ದು, ಒಟ್ಟಾರೆ 27,000 ಟನ್‌ ಕಲ್ಲಿದ್ದಲು ಸಾಗಣೆ ಮಾಡಿತು. ಈ ಲೈಲಿಗೆ ಐದು ಲೊಕೊಗಳ ಎಂಜಿನ್ ಸಾಮರ್ಥ್ಯ ಹೊಂದಿದೆ. ರೈಲು ಛತ್ತೀಸಗಡದಲ್ಲಿ ಭಿಲಾಯಿಯಿಂದ ಕೊರ್ಬಾಗೆ ಸಂಚರಿಸಿದ್ದು, ನಿಲ್ದಾಣದಿಂದ ನಿರ್ಗಮಿಸಲು ಬರೋಬ್ಬರಿ 4 ನಿಮಿಷ ತೆಗೆದುಕೊಂಡಿತು.


              ಬಿಲಾಸ್‌ಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಆಗ್ನೇಯ ಕೇಂದ್ರ ರೈಲ್ವೆಯು ಇದರ ನಿರ್ವಹಣೆ ಮಾಡಲಿದೆ. ರೈಲ್ವೆ ಇಲಾಖೆಯು ಹೀಗೇ ಒಂದೇ ರೈಲಿನಲ್ಲಿ ಅತ್ಯಧಿಕ ಪ್ರಮಾಣ, ತೂಕದ ಇಂಧನ ಸಾಗಣೆ ಮಾಡಿರುವುದು ದಾಖಲೆಯಾಗಿದೆ ಎಂದು ರೈಲ್ವೆ ಇಲಾಖೆಯ ಹೇಳಿಕೆಯಲ್ಲಿ ತಿಳಿಸಿದೆ.

                ರೈಲ್ವೆ ಇಲಾಖೆಯು ಕಳೆದ ವರ್ಷವೂ ವಾಸುಕಿ ಮತ್ತು ತ್ರಿಶೂಲ್ ಹೆಸರಿನಲ್ಲಿ ಉದ್ದನೆಯ ರೈಲು ಸಂಚಾರ ನಡೆಸಿತ್ತು. ಇವುಗಳ ಒಟ್ಟು ಉದ್ದ 2.8 ಕಿ.ಮೀ ಆಗಿತ್ತು.

Koo App Indian Railways' longest & heaviest freight train ever - Super Vasuki (3.5km, loaded train, with 6 Locos & 295 wagons & of 25,962 tonnes gross weight) was operated on August 15 as part of the government's Azadi ka Amrit Mahotsav celebration. @ashwinivaishnaw @RailMinIndia

View attached media content

- Prasar Bharati News Services & Digital Platform (@pbns_india) 16 Aug 2022

Super Vasuki - India's longest (3.5km) loaded train run with 6 Locos & 295 wagons and of 25,962 tonnes gross weight. #AmritMahotsav
34.5K
Reply
Copy link

 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries