ನವದೆಹಲಿ: ಜವಳಿ ಸಚಿವಾಲಯ ಜಾರಿಗೊಳಿಸಿರುವ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಕೇರಳಕ್ಕೆ 493.25 ಲಕ್ಷ ರೂ.ಮಂಜೂರು ಮಾಡಲಾಗಿದೆ.
ಜವಳಿ ಖಾತೆ ರಾಜ್ಯ ಸಚಿವ ದರ್ಶನ ಜರ್ದೋಶ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಯೋಜನೆಯಡಿ ರಾಜ್ಯಕ್ಕೆ 16,854.84 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ರಾಜ್ಯದ ಕೈಮಗ್ಗ ಏಜೆನ್ಸಿಗಳು, ಕೈಮಗ್ಗ ಸಹಕಾರ ಸಂಘಗಳು/ನೇಕಾರರು ಸೇರಿದಂತೆ ಅರ್ಹ ಕೈಮಗ್ಗ ಏಜೆನ್ಸಿಗಳಿಗೆ ಹಣಕಾಸಿನ ನೆರವು ನೀಡಲಾಗುವುದು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿರುವ ಪ್ರಸ್ತಾವನೆಗಳ ಆಧಾರದ ಮೇಲೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯು ಮೂಲಸೌಕರ್ಯ ಅಭಿವೃದ್ಧಿ, ಹೊಸ ಮಗ್ಗಗಳು ಮತ್ತು ಪರಿಕರಗಳ ಖರೀದಿ, ಸೌರ ಬೆಳಕಿನ ಘಟಕಗಳು, ಕಾರ್ಯಾಗಾರಗಳ ನಿರ್ಮಾಣ, ನವೀನ ವಿನ್ಯಾಸ, ಉತ್ಪನ್ನ ಅಭಿವೃದ್ಧಿ ಮತ್ತು ವೈವಿಧ್ಯೀಕರಣ, ಸಾಮಥ್ರ್ಯ ವೃದ್ಧಿ, ಕೈಮಗ್ಗ ಉತ್ಪನ್ನಗಳ ಮಾರುಕಟ್ಟೆ, ಕಡಿಮೆ ಬೆಲೆಯ ಮುದ್ರಾ ಸಾಲಗಳಂತಹ ವಿವಿಧ ಸಹಾಯವನ್ನು ಒಳಗೊಂಡಿರುತ್ತದೆ.
ಕಳೆದ ಮೂರು ಆರ್ಥಿಕ ವರ್ಷಗಳು ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ 31,094 ನೇಕಾರರಿಗೆ ಮಗ್ಗ ಮತ್ತು ಪರಿಕರಗಳನ್ನು ಒದಗಿಸಲಾಗಿದೆ ಎಂದು ಸಚಿವರು ಹೇಳಿದರು.
ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕೇರಳ 493.25 ಲಕ್ಷ ರೂ. ಮಂಜೂರು ಮಾಡಲಾಗಿದೆ: ಅಂಕಿಅಂಶ ಬಿಡುಗಡೆಮಾಡಿದ ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ಜರ್ದೋಶ್
0
ಆಗಸ್ಟ್ 03, 2022
Tags




.webp)
