HEALTH TIPS

ವಿಚಿತ್ರ ಕಾಯಿಲೆಯಿಂದ ಸತ್ತಿದ್ದಾರೆ 61 ಮಂದಿ; ತನಿಖೆ ನಡೆಸಿ ಎಂದು ಕೋರಿಕೊಂಡ ಗ್ರಾಮಸ್ಥರು

 

            ಛತ್ತೀಸ್​ಗಢ: ನಮ್ಮ ಗ್ರಾಮದಲ್ಲಿ ಜನರು ವಿಚಿತ್ರ ಕಾಯಿಲೆಗೆ ತುತ್ತಾಗಿದ್ದು, ಇದುವರೆಗೆ 61 ಮಂದಿ ಅದಕ್ಕೆ ಬಲಿಯಾಗಿದ್ದಾರೆ. ಈ ಕುರಿತು ತನಿಖೆ ನಡೆಸಿ ಎಂಬುದಾಗಿ ಗ್ರಾಮಸ್ಥರು ಸಂಬಂಧಿತ ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

               ಛತ್ತೀಸ್​ಗಡದ ಸುಕ್ಮಾ ಜಿಲ್ಲೆಯ ರೆಗಡ್ಗಟ್ಟ ಗ್ರಾಮದಲ್ಲಿನ ಜನರು ಜಿಲ್ಲಾಡಳಿತಕ್ಕೆ ಈ ಕುರಿತಾಗಿ ಮನವಿ ಮಾಡಿಕೊಂಡಿದ್ದು, ಗ್ರಾಮಕ್ಕೆ ಕಳೆದ ವಾರ ತೆರಳಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ.

ಅಲ್ಲದೆ ಆ. 8ರಂದು ಗ್ರಾಮಕ್ಕೆ ಪರಿಣತರ ತಂಡವನ್ನು ಕಳಿಸಿಕೊಡಲಾಗುವುದು ಎಂಬ ಭರವಸೆಯನ್ನೂ ಅಧಿಕಾರಿಗಳು ನೀಡಿದ್ದಾರೆ.

                  130 ಕುಟುಂಬಗಳ ಸುಮಾರು 1 ಸಾವಿರ ಮಂದಿ ಈ ಗ್ರಾಮದಲ್ಲಿದ್ದು, ಜು. 27ರಂದು ಜಿಲ್ಲಾಡಳಿತಕ್ಕೆ ಈ ಸಂಬಂಧ ಮನವಿ ಮಾಡಿಕೊಂಡಿದ್ದರು. ಕೈ ಹಾಗೂ ಕಾಲುಗಳಲ್ಲಿ ಊತ ಕಾಣಿಸಿಕೊಂಡು ಜನರು ಸಾಯುತ್ತಿದ್ದಾರೆ. 2020ರಿಂದ ಹೀಗಾಗುತ್ತಿದ್ದು, ಇದುವರೆಗೆ ಈ ರೀತಿಯಲ್ಲಿ 61 ಜನರು ಸಾವಿಗೀಡಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

                    ಪ್ರಾಥಮಿಕ ವರದಿ ಪ್ರಕಾರ ಆ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಲ್ಲಿ 47 ಮಂದಿ ಸಾವಿಗೀಡಾಗಿದ್ದು, ಸ್ಥಳೀಯರು ಹೇಳಿರುವಂತೆ ಎಲ್ಲರೂ ಅದೇ ಕಾರಣಕ್ಕೆ ಸತ್ತಿಲ್ಲ. ಕೆಲವರ ದೇಹದಲ್ಲಿ ಊತ ಕಾಣಿಸಿಕೊಂಡಿದ್ದರೂ ಅದು ಬೇರೆ ಬೇರೆ ಕಾರಣಕ್ಕೆ ಇರಬಹುದು. ಇನ್ನು ಅಲ್ಲಿನ ಜಲಮೂಲಗಳಲ್ಲಿ ಫ್ಲೋರೈಡ್​ ಅಂಶ ಜಾಸ್ತಿ ಇರುವುದು, ಇನ್ನೊಂದು ಕಡೆ ಕಬ್ಬಿಣದ ಅಂಶ ಹೆಚ್ಚಾಗಿರುವುದು ಕಂಡುಬಂದಿದೆ. ಅದಾಗ್ಯೂ ಜನರು ಯಾಕೆ ಸತ್ತಿದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ, ಆ. 8ರಂದು ಪರಿಣತರ ತಂಡ ಬಂದು ಪರಿಶೀಲಿಸಿ ವರದಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries