HEALTH TIPS

ನಾವು ಭಾರತದೊಂದಿಗೆ ಶಾಶ್ವತ ಶಾಂತಿಯನ್ನು ಬಯಸುತ್ತೇವೆ: ಪಾಕ್​ ಪ್ರಧಾನಿ ಶೆಹಬಾಜ್​ ಷರೀಫ್​

 

           ಇಸ್ಲಮಾಬಾದ್: ಉಭಯ ದೇಶಗಳ ನಡುವಿನ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥ ಪಡಸಿಕೊಳ್ಳಲು ಯುದ್ಧವು ಒಂದು ಆಯ್ಕೆಯಲ್ಲ, ಬದಲಾಗಿ ಮಾತುಕತೆಯ ಮೂಲಕ ಭಾರತದೊಂದಿಗೆ ಶಾಶ್ವತ ಶಾಂತಿಯನ್ನು ಬಯಸುತ್ತೇವೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್​ ಷರೀಫ್​​ ಶಾಂತಿ ಮಂತ್ರವನ್ನು ಜಪಿಸಿದ್ದಾರೆ.

            ಹಾರ್ವರ್ಡ್​ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಷರೀಫ್​ ಈ ಮೇಲಿನ ಮಾತುಗಳನ್ನಾಡಿದರು. ಈ ಪ್ರದೇಶ (ಕಾಶ್ಮೀರ)ದಲ್ಲಿ ಶಾಂತಿ ಕಾಪಾಡಲು ಪಾಕಿಸ್ತಾನ ನಿರ್ಧರಿಸಿದೆ ಮತ್ತು ಈ ವಲಯದಲ್ಲಿನ ಸುಸ್ಥಿರ ಶಾಂತಿಯು ವಿಶ್ವಸಂಸ್ಥೆಯ ನಿರ್ಣಯದ ಪ್ರಕಾರ ಕಾಶ್ಮೀರ ಸಮಸ್ಯೆಗಳ ಪರಿಹಾರದ ಕೊಂಡಿಯಾಗಿದೆ ಎಂದು ಷರೀಫ್​ ಹೇಳಿದ್ದಾರೆ.

                ನಾವು ಭಾರತದ ಜೊತೆ ಶಾಶ್ವತ ಶಾಂತಿಯನ್ನು ಮಾತುಕತೆಯ ಮೂಲಕ ಬಯಸಿದ್ದೇನೆ ಉಭಯ ದೇಶಗಳ ನಡುವಿನ ಸಮಸ್ಯೆಗಳ ಪರಿಹಾರಕ್ಕೆ ಯುದ್ಧವೊಂದೇ ದಾರಿಯಲ್ಲ ಎಂದು ಷರೀಫ್ ಭಾರತದ ಮುಂದೆ ಶಾಂತಿ ಮಂತ್ರ ಜಪಿಸುವ ಮೂಲಕ ಸ್ನೇಹದ ಹಸ್ತ ಚಾಚಿದೆ.

                 ಕಾಶ್ಮೀರ ವಿವಾದ ಮತ್ತು ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹಳಸಿದೆ. ಜಮ್ಮು ಮತ್ತು ಕಾಶ್ಮೀರವು ನಮ್ಮ ಅವಿಭಾಜ್ಯ ಅಂಗ ಎಂದು ಭಾರತ ಯಾವಗಲೂ ಪಾಕಿಸ್ತಾನಕ್ಕೆ ಹೇಳಿಕೊಂಡು ಬರುತ್ತಿದೆ. ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ಸಂಬಂಧವನ್ನು ಬಯಸುವುದಾಗಿ ಭಾರತವು ಸಹ ಹೇಳಿದೆ.

             ವಿದ್ಯಾರ್ಥಿಗಳ ಜೊತೆಗಿನ ಸಂವಾದದ ಸಮಯದಲ್ಲಿ, ಷರೀಫ್ ಭಾರತ ಮತ್ತು ಪಾಕ್​ ವ್ಯಾಪಾರ, ಆರ್ಥಿಕತೆ ಮತ್ತು ತಮ್ಮ ಜನರ ಪರಿಸ್ಥಿತಿಗಳನ್ನು ಸುಧಾರಿಸುವಲ್ಲಿ ಸ್ಪರ್ಧೆಯನ್ನು ಹೊಂದಿರಬೇಕು ಎಂದು ಸೂಚಿಸಿದರು. ಪಾಕಿಸ್ತಾನ ಆಕ್ರಮಣಕಾರಿಯಲ್ಲ. ಆದರೆ, ಅದರ ಪರಮಾಣು ಆಸ್ತಿಗಳು ಮತ್ತು ತರಬೇತಿ ಪಡೆದ ಸೈನ್ಯವು ಯಾವುದಕ್ಕೂ ಎದೆಗುಂದುವುದಿಲ್ಲ. ಪಾಕಿಸ್ತಾನವು ತನ್ನ ಮಿಲಿಟರಿಗೆ ತಮ್ಮ ಗಡಿಗಳನ್ನು ರಕ್ಷಿಸಲು ಖರ್ಚು ಮಾಡುತ್ತದೆ ಹೊರತು ಆಕ್ರಮಣಕ್ಕಾಗಿ ಅಲ್ಲ ಎಂದು ಷರೀಫ್​ ತಿಳಿಸಿದರು.

          ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಆರ್ಥಿಕತೆ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಕಾರ್ಯಕ್ರಮದ ಕುರಿತ ಪ್ರಶ್ನೆಗೆ ಉತ್ತರಿಸಿದ ಷರೀಫ್​, ದೇಶದ ಆರ್ಥಿಕ ಬಿಕ್ಕಟ್ಟು ಇತ್ತೀಚಿನ ದಶಕಗಳಲ್ಲಿ ರಾಜಕೀಯ ಅಸ್ಥಿರತೆಯ ಜೊತೆಗೆ ರಚನಾತ್ಮಕ ಸಮಸ್ಯೆಗಳಿಂದ ಉದ್ಭವಿಸಿದೆ ಎಂದು ಹೇಳಿದರು. ಆದರೆ, ಈಗ ಸುಧಾರಣೆಯ ಹಂತದಲ್ಲಿದೆ. ಎಲ್ಲವನ್ನು ದಾಟಿ ಸಹಜ ಸ್ಥಿತಿಗೆ ಬರಲಿದ್ದೇವೆ ಎಂದು ಷರೀಫ್ ಭರವಸೆ ವ್ಯಕ್ತಪಡಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries