ಸಮರಸ ಚಿತ್ರಸುದ್ದಿ: ಬದಿಯಡ್ಕ: ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದ್ವಿತೀಯ ಚಾತುರ್ಮಾಸ್ಯದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮೀಯಪದವಿನ ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ ‘ಶ್ರೀರಾಮ ದರ್ಶನ’ ಎಂಬ ಕಥಾಭಾಗದ ತಾಳಮದ್ದಳೆ ಜರಗಿತು. ಪಾತ್ರವರ್ಗದಲ್ಲಿ ಶಾರ್ವರಿ ಯನ್ ನಾವಡ, ತನ್ವಿ, ಕೀರ್ತಿ ಪಿ.ಆಳ್ವ ಮತ್ತು ನಿರೀಕ್ಷ ಭಾಗವಹಿಸಿದರು. ಹಿಮ್ಮೇಳಋದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮೃದಂಗದಲ್ಲಿ ಮುರಳಿ ಮಾಧವ ಮಧೂರು ಸಹಕರಿಸಿದರು. ಅಧ್ಯಾಪಕ ನಾರಾಯಣ ನಾವಡ ಬಾಲಿಕೆಯರ ತಂಡಕ್ಕೆ ತರಬೇತಿಯನ್ನು ನೀಡಿದ್ದರು.
ಎಡನೀರು ಮಠದಲ್ಲಿ ಬಾಲಿಕೆಯರ ತಂಡದ ತಾಳಮದ್ದಳೆ
0
ಆಗಸ್ಟ್ 19, 2022

.jpg)
