ಬದಿಯಡ್ಕ: ನಿರಂತರ ಆಕ್ರಮಣದ ಹೊರತಾಗಿಯೂ ಹಿಂದೂ ಧರ್ಮ, ಸಂಸ್ಕøತಿ ಈವರೆಗೂ ಅವಿನಾಶಿಯಾಗಿ ಉಳಿದುಕೊಂಡಿದೆ. ಜಗತ್ತಿನಲ್ಲಿ 203 ದೇಶಗಳು ಒಂದಾದರೆ, ಭಾರತವೇ ಮತ್ತೊಂದು. ಇದಕ್ಕೆ ಸಮಾನವಾದ ರಾಷ್ಟ್ರ ಬೇರೊಂದಿಲ್ಲ. ಇದಕ್ಕೆ ಕಾರಣ ವೈವಿಧ್ಯತೆಯ ಭಾರತೀಯತೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.
ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀಶ್ರೀಗಳ ದ್ವಿತೀಯ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಶನಿವಾರ ಸಂಜೆ ನಡೆದ ಕಲೆ ಮತ್ತು ಭಾರತೀಯ ಸಂಸ್ಕøತಿ ಎಂಬ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ವಸ್ತು, ವಿಶಯಗಳಲ್ಲಿ ದೇವರನ್ನು ಕಾಣುವ, ಭಾವನಾತ್ಮಕತೆ ಇರುವ, ಎಲ್ಲವನ್ನೂ ಸ್ವೀಕರಿಸುವ ಧರ್ಮ, ಸಂಸ್ಕøತಿ, ಜೀವನ ಮೌಲ್ಯ ಭಾರತೀಯತೆಯಾಗಿದೆ. ವೈವಿಧ್ಯತೆಯ ನಡುವೆಯೂ ವಿಶಿಷ್ಟ ಕಲಾ ಪ್ರಕಾರಗಳು, ಸಂಗೀತ, ಚಿತ್ರ, ಶಿಲ್ಪಗಳು ಜಗತ್ತಿನಲ್ಲೇ ಏಕಮೇವಾದ್ವಿತೀಯವಾಗಿ ಭಾರತೀಯತೆಯನ್ನು ಬೆಳೆಸಿ ಮುನ್ನಡೆಸಿದೆ. ಇದರ ಹಿಂದಿರುವ ಏಕೈಕ ಶಕ್ತಿ ಬಹುತ್ವದಲ್ಲಿ ಏಕತೆ ಎನ್ನುವ ಸನಾತನ ಸಂಸ್ಕøತಿ ಎಂದು ಅವರು ತಿಳಿಸಿದರು. ಇಲ್ಲಿಯ ಕಲೆಗಳ ಚಿಂತನೆ ದೇವರಿಗೆ ಅರ್ಪಿತವಾದ್ದರಿಂದ ಅದು ಶ್ರೇಷ್ಠವಾಯಿತು. ಇಲ್ಲಿ ನೂರಾರು ಸಂಪ್ರದಾಯಗಳಷ್ಟೇ ಇದೆ. ಸಂಸ್ಕøತಿ ಅದು ಒಂದೇ ಎಂದು ಅವರು ತಿಳಿಸಿದರು. ಜಗತ್ತಿನಲ್ಲಿ ಹೆಣ್ಣನ್ನು ಪೂಜನೀಯವಾಗಿ ಕಾಣುವ ದೇಶ ಅದು ಭಾರತವೊಂದೆ. ಶಕ್ತಿ ಸ್ವರೂಪಿಣಿಯಾಗಿ ಹೆಣ್ಣಿಗೆ ಮಹತ್ತರ ಸ್ಥಾನ ಸ್ತ್ರೀಗೆ ಕಲ್ಪಿಸಲಾಗಿದೆ. ತಾಯಿಯಿಂದ ಮೊದಲ್ಗೊಂಡು ವಿವಿಧ ಹಂತಗಳಲ್ಲಿ ನಮ್ಮಮನ್ನು ಮುನ್ನಡೆಸುವ ಹಿಂದೂ ಸ್ತ್ರೀಯರ ಸಂರಕ್ಷಣೆಗೆ ನಮ್ಮಮನ್ನು ಜಾಗೃತಗೊಳಿಸಬೇಕು ಎಂದವರು ಈ ಸಂದರ್ಭ ಎಚ್ಚರಿಸಿದರು. ಮಾತೃಭೂಮಿಗೆ ಅರ್ಪಣೆಮಾಡಿದ ಧೀರ ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ಉಡಾಫೆಯ ವರ್ತನೆ ಸಲ್ಲದು. ಇದು ಆತ್ಮವಂಚನೆ ಎಮದ ಅವರು, ನಮ್ಮತನದ ಅರಿವು, ಹೆಮ್ಮೆ ಮತ್ತು ಜಾಗೃತ ಸ್ಥಿತಿ ನೆಲಗೊಳ್ಳಲಿ. ಧಾರ್ಮಿಕ, ಆಧ್ಯಾತ್ಮಿಕ ಶಕ್ತಿ ಕೇಂದ್ರಗಳನ್ನು ಉಳಿಸಿ ಬೆಳೆಸುವ ಎಂದವರು ತಿಳಿಸಿದರು.
ಖ್ಯಾತ ಭಾಗವತ, ಯಕ್ಷದ್ರುವ ಪಟ್ಲಪೌಂಡೇಶನ್ ಕೇಂದ್ರಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಅಭ್ಯಾಗತರಾಗಿ ಉಪಸ್ಥಿತರಿದ್ದು ಮಾತನಾಡಿ, ಬ್ರಹ್ಮಕ್ಯ ಕೇಶವಾನಂದ ಭಾರತೀ ಶ್ರೀಗಳು ಹಾಗೂ ಶ್ರೀಮಠ ಯಕ್ಷಗಾನ ಮಠ ಕಲೆ, ಸಂಸ್ಕøತಿಗೆ ಮಾಡಿರುವ ಕೊಡುಗೆಗಳನ್ನು ಕಲಾವಿದರು ಎಂದಿಗೂ ಮರೆಯುವಂತದ್ದಲ್ಲ. ಶ್ರೀಮಠ ನಿಜವಾಗಿಯೂ ಕಲೆ, ಕಲಾವಿದರಿಗೆ ರಾಜಾಶ್ರಯವಾಗಿದೆ. ಪ್ರತಿಯೊಬ್ಬ ಸಜ್ಜನನಿಗೆ ಶ್ರೀಮಠದ ಅನುಗ್ರಹ ಸದಾ ಇರಲಿ ಎಂದವರು ತಿಳಿಸಿದರು.
ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದು ಶುಭಾಶೀರ್ವಾದ ನೀಡಿ, ಧಾರ್ಮಿಕತೆ ಮತ್ತು ಕಲೆಗಳು ನಮ್ಮ ಜೀವನ ಪರಿವರ್ತನೆ, ಧಾರ್ಮಿಕ, ಆಧ್ಯಾತ್ಮಿಕ ಪ್ರಜ್ಞೆಯ ಉದ್ದೀಪನಕ್ಕೆ ಕಾರಣವಾಗುತ್ತದೆ. ಹೊಸ ತಲೆಮಾರು ಭಾರತೀಯ ಕಲೆ, ಸಂಸ್ಕøತಿಯತ್ತ ಒಲುವು ಬೆಳೆಸಬೇಕು ಎಂದು ತಿಳಿಸಿ ಶುಭಹಾರೈಸಿದರು.
ಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕಲ್ಲೂರಾಯ ಎಡನೀರು ಸ್ವಾಗತಿಇಸ, ಕಾರ್ಯಕ್ರಮ ನಿರೂಪಿಸಿರು. ವೇಣುಗೋಪಾಲ ಎಡನೀರು ವಂದಿಸಿದರು. ಬಳಿಕ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗ್ರವ್ರಜ ಕ್ಷೇತ್ರ ಪಾವಂಜೆ ಇವರಿಂದ ಸುದರ್ಶನ ವಿಜಯ ಯಕ್ಷಗಾನ ಬಯಲಾಟ ನಡೆಯಿತು.

.jpg)
.jpg)
