ಬದಿಯಡ್ಕ: ಕುಂಬಳೆ ಫಿರ್ಕಾ ಬಂಟರ ಸಂಘದ ಸಭೆ ಬದಿಯಡ್ಕ ಕುಂಬಳೆ ಫಿರ್ಕ ಸರ್ವಿಸ್ ಸೊಸೈಟಿ ಕಚೇರಿಯಲ್ಲಿ ಭಾನುವಾರ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಕುಂಬಳೆ ಫಿರ್ಕಾ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ ವಹಿಸಿದರು. ಜಿಲ್ಲಾ ಬಂಟರ ಸಂಘದ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ, ಕವಿ ಕೈಯಾರ ಕಿಞ್ಞಣ್ಣ ರೈ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲು ತೀರ್ಮಾನಿಸಲಾಯಿತು. ಎಲ್ಲಾ ಪಂಚಾಯತಿ ಘಟಕದ ಅಧ್ಯಕ್ಷರನ್ನು ಕಾರ್ಯದರ್ಶಿಯನ್ನು ಭೇಟಿಯಾಗಿ ಅರ್ಜಿ ನಮೂನೆಯನ್ನು ಪಡೆದು ಆಗಸ್ಟ್ 31ರ ಒಳಗೆ ಪಂಚಾಯತಿ ಘಟಕಕ್ಕೆ ಸಮರ್ಪಿಸಲು ಸೂಚಿಸಲಾಯಿತು.
ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ ವಿದ್ಯಾರ್ಥಿ ವೇತನ ಬಗ್ಗೆ ವಿವರಣೆ ನೀಡಿದರು. ಜಿಲ್ಲಾ ಬಂಟರ ಸಂಘದ ಜೊತೆ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ ಕುತ್ತಿಕಾರ್, ವಿವಿಧ ಪಂಚಾಯತಿ ಘಟಕದ ಅಧ್ಯಕ್ಷÀ ಸುರೇಶ್ ಕುಮಾರ್ ಶೆಟ್ಟಿ, ಸಂಜೀವ ರೈ ಪುತ್ತಿಗೆ, ಮನಮೋಹನ್ ರೈ ಪಿಂಡಗ, ನಿರಂಜನ್ ರೈ ಪೆರಡಾಲ, ಸುದೀರ್ ಕುಮಾರ್ ರೈ ಮೊದಲಾದವರು ಮಾತನಾಡಿದರು. ಕಾರ್ಯದರ್ಶಿ ಅಶೋಕ್ ರೈ ಸ್ವಾಗತಿಸಿ, ವಂದಿಸಿದರು.
ಕುಂಬಳೆ ಫಿರ್ಕಾ ಬಂಟರ ಸಂಘದ ಸಭೆ
0
ಆಗಸ್ಟ್ 23, 2022
Tags

.jpg)
