ಪೆರ್ಲ: ಯುವ ಕಾಂಗ್ರೆಸ್ ಎಣ್ಮಕಜೆ ಮಂಡಲ ಸಮಿತಿಯ ವತಿಯಿಂದ ನೇತಾಜಿ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ರೀತಿಯಲ್ಲಿ ಕೊಡುಗೆ ನೀಡಿದ ನೇತಾಜಿ ಸುಭಾμï ಚಂದ್ರ ಬೋಸರ ಅಧಮ್ಯ ಕೊಡುಗೆ, ಜೀವನ, ಬಲಿದಾನ ಮತ್ತು ಅವರ ಮಹಾತ್ಮ ಗಾಂಧಿ, ಕಾಂಗ್ರೆಸ್ಸಿನ ಜೊತೆ ಇದ್ದ ಸಂಬಂಧಗಳನ್ನು ಎಳೆಎಳೆಯಾಗಿ ವಿಶೇಷ ಅಹ್ವಾನಿತರಾಗಿ ಬಂದಿದ್ದಂತಹ ಬೆಟ್ಟಂಪಾಡಿ ಗ್ರಾಮ ಪಂಚಾಯತಿ ಸದಸ್ಯ ಕಾಂಗ್ರೆಸ್ ನೇತಾರ ನವೀನ್ ಕುಮಾರ್ ರೈ ಚೆಲ್ಲಡ್ಕ ಅವರು ವಿವರಿಸಿದರು.
ಯುವ ಕಾಂಗ್ರೆಸ್ ಎಣ್ಮಕಜೆ ಮಂಡಲ ಅಧ್ಯಕ್ಷ ನಿಸಾರ್ ಬಣ್ಪುತ್ತÀಡ್ಕ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ನೇತಾಜಿ ಬದುಕಿನ ಬಗ್ಗೆ ಕಾಂಗ್ರೆಸ್ ಪಕ್ಷದ ಜೊತೆಗಿದ್ದ ಅವರ ಸಂಬಂದಗಳ ಬಗ್ಗೆ ಬೆಳಕು ಚೆಲ್ಲಿದರು. ಯುವ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ದಯಾನಂದ ಬಾಡೂರು, ಕೆ ಎಸ್ ಯು ಜಿಲ್ಲಾ ಸಮಿತಿ ಸದಸ್ಯ ಮುವಾಸ್ ಮೊಗ್ರಾಲ್, ಎಣ್ಮಕಜೆ ಮಂಡಲ ಕಾಂಗ್ರೆಸ್ ಕಾರ್ಯದರ್ಶಿ ಶ್ರೀನಿವಾಸ್ ಶೆಣೈ ಪೆರ್ಲ ಮುಂತಾದವರು ನೇತಾಜಿಯವರ ಜೀವನದ ಸ್ವಾತಂತ್ರ ಹೋರಾಟದ ಬಗ್ಗೆ ಮಾತನಾಡಿದರು. ನಿಸಾರ್ ಬಣ್ಪುತ್ತಡ್ಕ ಸ್ವಾಗತಿಸಿ, ಹನೀಫ್ ಕಾರ್ಟುಕುಕ್ಕೆ ವಂದಿಸಿದರು. ಕೆ.ಎಸ್.ಯು ಯುವ ಕಾಂಗ್ರೆಸ್ ಕಾರ್ಯಕರ್ತರಾದ ಅಶ್ವಿನ್ ಕುಮಾರ್, ಕೆಸಿ ಅಶೋಕ್ ಶೆಟ್ಟಿ, ಅಬೂಬಕ್ಕರ್, ಮೋಯಿದು ಕುಂಞÂ್ಞ, ಪ್ರಶಾಂತ್ ಭಟ್ ಕಾಟುಕುಕ್ಕೆ, ವತ್ಸ ಪೆರ್ಲ, ಷರೀಫ್ ಪೆರ್ಲ,ಆಸಿಫ್, ಸಿದ್ದಿಕ್ ಕಾಟುಕುಕ್ಕೆ, ಅಬೂಬಕ್ಕರ್ ಕಾಟುಕುಕ್ಕೆ,ಮಂಜು ಸ್ವರ್ಗ,ಉದಯ ಬಾಡೂರು ಮುಂತಾದವರು ಸಂಸ್ಮರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

.jpg)
.jpg)
