ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ಕಾಸರಗೋಡು ಜಿಲ್ಲಾ 7ನೇ ಥ್ರೋ ಬಾಲ್ ಜೂನಿಯರ್ ವಿಭಾಗದ ಚಾಂಪಿಯನ್ಶಿಪ್ ಪಂದ್ಯಾಟವು ಸಂಪನ್ನಗೊಂಡಿತು.
ಸಭೆಯ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಥ್ರೋ ಬಾಲ್ ಸಂಘದ ಅಧ್ಯಕ್ಷ ಸೂರ್ಯನಾರಾಯಣ ಭಟ್ ವಹಿಸಿದ್ದರು. ಥ್ರೋಬಾಲ್ ಆಟವನ್ನು ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ಚೆಂಡನ್ನು ಎಸೆಯುವ ಮೂಲಕ ಔಪಚಾರಿಕವಾಗಿ ಉದ್ಘಾಟಿಸಿದರು. ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಎನ್ ರಾಮಚಂದ್ರ ಭಟ್ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ನಿರಂತರ ಅಭ್ಯಾಸದಿಂದ ಆಟದಲ್ಲಿ ಉನ್ನತ ಸಾಧನೆಗಳಿಸಲು ಸಾಧ್ಯ ಎಂದು ಹೇಳಿದರು.
ಅಧ್ಯಾಪಕ ಅಗಲ್ಪಾಡಿ ಶಾಲಾ ದೈಹಿಕ ಶಿಕ್ಷಕ ಶಶಿಕಾಂತ್ ಜಿ ಆರ್, ಪೀಸ್ ಪಬ್ಲಿಕ್ ಎಂ ಪಿ ಕ್ಯಾಂಪಸ್ ಕಾಸರಗೋಡು ಶಾಲಾ ದೈಹಿಕ ಶಿಕ್ಷಕ ಜುಬೈರ್, ಕೇರಳ ರಾಜ್ಯ ಥ್ರೋಬಾಲ್ ಅಸೋಸಿಯೇಷನ್ ನಿರೀಕ್ಷಕ ಆದಿನಮ್ ಎಂ ಎನ್, ಮಂಜೇಶ್ವರ ಸಬ್ ಜಿಲ್ಲಾ ಸ್ಪೋಟ್ರ್ಸ್ ಆಂಡ್ ಗೇಮ್ಸ್ ಕಾರ್ಯದರ್ಶಿ ಉದಯ ಶೆಟ್ಟಿ, ಸಂತೋμï ಕುಮಾರ್ ಪಿ ಎಚ್ ಕಾರ್ಯದರ್ಶಿ ಕಾಸರಗೋಡು ಜಿಲ್ಲಾ ಥ್ರೋಬಾಲ್ ಸಂಘ ಹಾಗೂ ದೈಹಿಕ ಶಿಕ್ಷಣ ಅಧ್ಯಾಪಕ ಮಹಾಜನ ಸಂಸ್ಕøತ ಕಾಲೇಜು ನೀರ್ಚಾಲು, ಮೊಹಮದ್ ಫಹದ್ ದೈಹಿಕ ಶಿಕ್ಷಣ ಅಧ್ಯಾಪಕ ಟಿ ಐ ಎಚ್ ಎಸ್ ಎಸ್ ನಾಯಮಾರಮೂಲೆ, ಸಂತೋμï ಕುಮಾರ್ ಎಂ ದೈಹಿಕ ಶಿಕ್ಷಣ ಅಧ್ಯಾಪಕ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ. ಮುಂತಾದವರು ಸಹಕರಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಇ ಎಚ್ ಗೋವಿಂದ ಭಟ್ ಸ್ವಾಗತಿಸಿದರು.
ಬಳಿಕ ಜರಗಿದ ಜೂನಿಯರ್ ಹುಡುಗರ ಪಂದ್ಯಾವಳಿಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಪ್ರೌಢಶಾಲೆ ಅಗಲ್ಪಾಡಿ ಪ್ರಥಮ ಸ್ಥಾನ, ಮಹಾಜನ ಸಂಸ್ಕೃತ ಕಾಲೇಜು ನೀರ್ಚಾಲು ದ್ವಿತೀಯ ಸ್ಥಾನ ಹಾಗೂ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ ತೃತೀಯ ಸ್ಥಾನವನ್ನು ಗಳಿಸಿತು.
ಜೂನಿಯರ್ ಹುಡುಗಿಯರ ಪಂದ್ಯದಲ್ಲಿ ಅನ್ನಪೂರ್ಣೇಶ್ವರಿ ಪ್ರೌಢಶಾಲೆ ಅಗಲ್ಪಾಡಿ ಪ್ರಥಮ ಸ್ಥಾನ, ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ ದ್ವಿತೀಯ ಸ್ಥಾನ ಹಾಗೂ ಪೀಸ್ ಪಬ್ಲಿಕ್ ಎಂ ಪಿ ಕ್ಯಾಂಪಸ್ ಕಾಸರಗೋಡು ತೃತೀಯ ಸ್ಥಾನ ಗಳಿಸಿತು.
ಸಮಾರೋಪ ಸಮಾರಂಭ ಸಭೆಯ ಅಧ್ಯಕ್ಷತೆಯನ್ನು ಎನ್ ರಾಮಚಂದ್ರ ಭಟ್ ವಹಿಸಿದ್ದರು. ಕೇರಳ ಥ್ರೋ ಬಾಲ್ ಸಂಘದ ಅಧ್ಯಕ್ಷ ಕೆ ಎಂ ಬಲ್ಲಾಳ್ ಉಪಸ್ಥಿತರಿದ್ದು "ಕ್ರೀಡೆಯಲ್ಲಿ ಉನ್ನತ ಜಯಗಳಿಸುವ ಮೂಲಕ ಉನ್ನತ ಹುದ್ದೆಯನ್ನೇರಲು ಸಾಧ್ಯ" ಎಂದು ನುಡಿದರು.
ಬಹುಮಾನ ವಿತರಣೆಯನ್ನು ಎನ್ ಶಂಕರನಾರಾಯಣ ಭಟ್, ಶ್ರೀ ಎನ್ ಮಹಾಲಿಂಗ ಭಟ್ ,ಯು ಪಿ ಶಾಲೆಯ ಮುಖ್ಯೋಪಾಧ್ಯಾಯರು ನಿರ್ವಹಿಸಿದರು.
ಇ ಎಚ್ ಗೋವಿಂದ ಭಟ್, ಬಶೀರ್ ನಿವೃತ್ತ ದೈಹಿಕ ಶಿಕ್ಷಣ ಅಧ್ಯಾಪಕ, ಶಶಿಕಾಂತ ಜಿ ಆರ್ ಉಪಸ್ಥಿತರಿದ್ದರು. ಸಂತೋμï ಕುಮಾರ್ ಎಂ ಸ್ವಾಗತಿಸಿ, ಸಂತೋμï ಪಿ ಎಚ್ ವಂದಿಸಿದರು.




.jpg)
