ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 18ನೇ ಚಾತುರ್ಮಾಸದ ಹಿನ್ನೆಲೆಯಲ್ಲಿ ಭಾನುವಾರ ವಿದ್ವಾನ್ ಡಾ. ಸೋಂದಾ ಭಾಸ್ಕರ ಭಟ್ ರವರು “ಮಹಾಭಾರತದಲ್ಲಿ ವಿದುರ” ಪಾತ್ರದ ಬಗ್ಗೆ ವಿಶೇಷ ಉಪನ್ಯಾಸ ನಡೆಸಿಕೊಟ್ಟರು.
ಈ ಸಂದರ್ಭ ಪೂಜ್ಯ ಶ್ರೀಗಳು ಇತ್ತೀಚೆಗೆ ಹೊಸಂಗಡಿಯ ಅಯ್ಯಪ್ಪ ಮಂದಿರದಲ್ಲಿ ನಡೆದ ಕುಕೃತ್ಯವನ್ನು ಖಂಡಿಸಿ, ಷಡ್ಯಂತ್ರದ ಹಿಂದಿನ ಅಪರಾಧಿಗಳ ಬಂಧನವಾಗಿ ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಬೇಕು, ನಾವೆಲ್ಲ ಜಾಗೃತರಾಗಿ ಧರ್ಮರಕ್ಷಣೆಗೆ ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.
ಕೊಂಡೆವೂರಲ್ಲಿ ವಿಶೇಷೋಪನ್ಯಾಸ ಸಂಪನ್ನ
0
ಆಗಸ್ಟ್ 23, 2022


