ಕಾಸರಗೋಡು: ಕಾಸರಗೋಡು ನಗರಸಭೆಯಿಂದ ಡೋರ್ ಸ್ಟೆಪ್ ಸೇವೆ ಆರಂಭಿಸಿ ನಗರಸಭೆ ಸೇವೆಗಳನ್ನು ಮನೆಗಳಿಗೆ ತಲುಪಿಸಲು ಮುಂದಾಗಿದೆ. ನಗರಸಭೆ ಅಧ್ಯಕ್ಷೆ ಅಡ್ವ. ವಿ.ಎಂ.ಮುನೀರ್ ಜೀವರಕ್ಷಕ ಔಷಧಗಳನ್ನು ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಡೋರ್‍ಸ್ಟೆಪ್ ಸೇವಾ ಯೋಜನೆಯು ಸರ್ಕಾರಿ ಸೇವೆಗಳಿಗೆ ನಿಯಮಿತ ಪ್ರವೇಶವನ್ನು ಪಡೆಯದ ಜನರಿಗೆ ಸೇವೆಗಳನ್ನು ಹೆಚ್ಚು ಸುಲಭವಾಗಿ, ಪರಿಣಾಮಕಾರಿಯಾಗಿ ಮತ್ತು ಸಮಯೋಚಿತವಾಗಿಸಲು ಗುರಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ನಗರಸಭೆಯ ಎಲ್ಲ ವಾರ್ಡ್ ಗಳಿಗೂ ಮನೆ-ಮನೆ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು, ನಗರಸಭೆಯ ಆರೋಗ್ಯ ಇಲಾಖೆ ಅಧಿಕಾರಿಗಳು, ವಯೋಮಿತ್ರಂ ವೈದ್ಯರು, ಉಪಶಾಮಕ ಶುಶ್ರೂಷಕರು, ಜನಮೈತ್ರಿ ಪೆÇಲೀಸ್ ಅಧಿಕಾರಿಗಳು, ಸ್ವಯಂ ಸೇವಕರು, ಆಶಾ ಕಾರ್ಯಕರ್ತೆ, ಪರಿಶಿಷ್ಟ ಜಾತಿ ಸಮನ್ವಯಾಧಿಕಾರಿ ಮೊದಲಾದವರು ಭಾಗವಹಿಸಿದ್ದರು.
ಮನೆ ಬಾಗಿಲಿಗೆ ಸೇವೆ: ಕಾಸರಗೋಡು ನಗರಸಭೆಯಲ್ಲಿ ಆರಂಭ
0
ಆಗಸ್ಟ್ 23, 2022


