ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಮತ್ತು ಕೃಷಿಭವನದ ಆಶ್ರಯದಲ್ಲಿ ಸಿಂಹ ಮಾಸ ಪ್ರಥಮ ದಿನವನ್ನು ಕೃಷಿಕರ ದಿನಾಚರಣೆಯನ್ನಾಗಿ ನಡೆಸಲಾಯಿತು.ಇದರಂಗವಾಗಿ ಪೆರ್ಲ ಪೇಟೆಯಲ್ಲಿ ಕೃಷಿಕರ ಮೆರವಣಿಗೆ ನಡೆಯಿತು.ಬಳಿಕ ಎಣ್ಮಕಜೆ ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪಂಚಾಯತು ಅಧ್ಯಕ್ಷ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಪಂಚಾಯತ್ ಅಭಿವೃದ್ಧಿ ಸ್ಟಾಂಡಿಂಗ್ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಸದಸ್ಯರಾದ ಜಯಶ್ರೀಕುಲಾಲ್, ಸೌದಾಭಿ ಹನೀಫ್,ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ವಿವಿಧ ವಾರ್ಡ್ ಸದಸ್ಯರು ,ಕುಟುಂಬಶ್ರೀ ಸದಸ್ಯರು, ,ರೈತರು ,ವಿವಿಧ ರಾಜಕೀಯ ಸಾಂಸ್ಕøತಿಕ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ಮಟ್ಟದ ಅತ್ಯುತ್ತಮ ಹಿರಿಯ ಕೃಷಿಕರಾಗಿ ಸೀತಾರಾಮ ಒಳಮುಗೇರು, ಯುವ ಕೃಷಿಕ ಪ್ರವೀಣ್ ಕುಕ್ಕಿಲ, ಸಾವಯವ ಕೃಷಿಕನಾಗಿ ಶ್ರೀಕೃಷ್ಣ ಭಟ್ ಬಟ್ಯ ಮೂಲೆ , ಮಹಿಳಾ ಕೃಷಿಕೆಯಾಗಿ ಆಯಿμÁ ಎ.ಎ.ಪೆರ್ಲ, ಪರಿಶಿಷ್ಟ ಕೃಷಿಕರಾಗಿ.ಶಾರದ, ವಿದ್ಯಾರ್ಥಿ ಕೃಷಿಕರಾಗಿಮಾಸ್ಟರ್.ಅನಿರುದ್ಧ್ ಎಂಬಿವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಜೈವ ರೋಗ ಕೀಟ ನಿಯಂತ್ರಣದ ಬಗ್ಗೆ ವಿಚಾರ ಸಂಕಿರಣ ನಡೆಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ತಿರುವಾರಿನ , ಜಾನಪದ ಹಾಡು, ಕರಕೌಶಲ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಯಿತು.
ಬಳಿಕ "ಕಾಪುಕೋಲ್" ಎಂಬ ಕೃಷಿ ಪ್ರಧಾನ ಭೂಮಿಕೆಯ ಕಿರು ಚಿತ್ರ ಪ್ರದರ್ಶನ ಜರಗಿತು.

.jpg)
.jpg)
