ಕಾಸರಗೋಡು: ಸಮುದ್ರ ಮತ್ತು ಸರೋವರಗಳ ಗಡಿಯಲ್ಲಿರುವ ಭೂದೃಶ ಎಂತಹ ಹೃದಯಿಯನ್ನೂ ಸೆಳೆಯುವ, ಒಮ್ಮೆಯಾದರೂ ಭೇಟಿ ನೀಡಬೇಕೆನ್ನುವ ಗ್ರಾಮೀಣ ಸೊಬಗು. ಈ ನಿಟ್ಟಿನಲ್ಲಿ ಬೀದಿ ಪ್ರವಾಸೋದ್ಯಮ ಅಥವಾ ಸ್ಟ್ರೀಟ್ ಟೂರಿಸಂ ಎಂಬ ಯೋಜನೆಯು ವಲಿಯಪರಂಬ ಪಂಚಾಯತಿಯ ಪ್ರವಾಸೋದ್ಯಮ ಅಭಿವೃದ್ಧಿಯ ಮೊದಲ ಹೆಜ್ಜೆಯಾಗಿದೆ. ಜವಾಬ್ದಾರಿಯುತ ಪ್ರವಾಸೋದ್ಯಮ ಮಿಷನ್‍ನ ಬೀದಿ ಪ್ರವಾಸೋದ್ಯಮ ಯೋಜನೆಯ ಮೂಲಕ ವಲಿಯಪರಂಬ ಗ್ರಾಮ ಪಂಚಾಯಿತಿ ಪ್ರವಾಸೋದ್ಯಮ ನಕ್ಷೆಯಲ್ಲಿಯೂ ಸ್ಥಾನ ಪಡೆಯುತ್ತಿದೆ. ಕೇರಳದ 941 ಪಂಚಾಯಿತಿಗಳ ಪೈಕಿ 10 ಪಂಚಾಯಿತಿಗಳನ್ನು ಬೀದಿ ಪ್ರವಾಸೋದ್ಯಮ ಯೋಜನೆಗೆ ಆಯ್ಕೆ ಮಾಡಲಾಗಿದೆ. ವಲಿಯಪರಂಬ ಕಾಸರಗೋಡು ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಪಂಚಾಯಿತಿಯೂ ಆಗಿದೆ.
ರಾಜ್ಯ ಜವಾಬ್ದಾರಿಯುತ ಪ್ರವಾಸೋದ್ಯಮ ಮಿಷನ್ ವಿಶ್ವಸಂಸ್ಥೆಯ ಹೊಸ ಪ್ರವಾಸೋದ್ಯಮ ಸ್ಲೋಗನ್ ಟೂರಿಸಂ ಫಾರ್ ಇನ್ಕ್ಲೂಸಿವ್ ಗ್ರೋತ್ ಅನ್ನು ಆಧರಿಸಿ ಬೀದಿ ಪ್ರವಾಸೋದ್ಯಮ ಯೋಜನೆಯನ್ನು ರೂಪಿಸಿದೆ. ಸ್ಟ್ರೀಟ್ ಎಂದರೆ ಸಸ್ಟೈನಬಲ್, ಟ್ಯಾಂಜಿಬಲ್, ರೆಸ್ಪಾನ್ಸಿಬಲ್, ಎಕ್ಸ್‍ಪೀರಿಯೆನ್ಷಿಯಲ್ ಮತ್ತು ಎಥ್ನಿಕ್ ಟೂರಿಸಂ ಹಬ್ಸ್. ಬೀದಿ ಪ್ರವಾಸೋದ್ಯಮ ಯೋಜನೆಯು ಪ್ರತಿ ಪ್ರದೇಶದ ಸಾಮಥ್ರ್ಯವನ್ನು ಗಣನೆಗೆ ತೆಗೆದುಕೊಂಡು ವೀಕ್ಷಣೆ ಮತ್ತು ನೆಮ್ಮದಿಯ ಸಂಚಾರಕ್ಕೆ ಯೋಗ್ಯವಾದ ಬೀದಿಗಳನ್ನು ಸ್ಥಾಪಿಸುವುದು. ಬೀದಿಗಳನ್ನು ಗ್ರೀನ್ ಸ್ಟ್ರೀಟ್, ಕಲ್ಚರಲ್ ಸ್ಟ್ರೀಟ್, ಎಥ್ನಿಕ್ ಕ್ಯುಸಿನ್/ಫುಡ್ ಸ್ಟ್ರೀಟ್, ವಿಲೇಜ್ ಲೈಫ್ ಎಕ್ಸ್‍ಪೀರಿಯನ್ಸ್/ಅನುಭವಿ ಪ್ರವಾಸೋದ್ಯಮ ಬೀದಿ, ಅಗ್ರಿ ಟೂರಿಸಂ ಸ್ಟ್ರೀಟ್, ವಾಟರ್ ಸ್ಟ್ರೀಟ್ ಮತ್ತು ಆರ್ಟ್ ಸ್ಟ್ರೀಟ್ ಎಂದು ಯೋಜಿಸಲಾಗಿದೆ. ಯೋಜನೆಯ ಭಾಗವಾಗಿ ಪ್ರತಿ ಪಂಚಾಯಿತಿಯಲ್ಲಿ ಈ ಪೈಕಿ ಕನಿಷ್ಠ ಮೂರು ಬೀದಿಗಳನ್ನು ಅನುμÁ್ಠನಗೊಳಿಸಲಾಗುವುದು.
ಪ್ರವಾಸೋದ್ಯಮ ಚಟುವಟಿಕೆಗಳನ್ನು ಇನ್ನೂ ಪ್ರಾರಂಭಿಸದ ಆದರೆ ಭವಿಷ್ಯದಲ್ಲಿ ಪ್ರಚಾರ ಮಾಡಬಹುದಾದ ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು, ಅಂತರರಾಷ್ಟ್ರೀಯ ಪ್ರವಾಸೋದ್ಯಮ ಕೇಂದ್ರಗಳಿಗೆ ಸಮೀಪವಿರುವ ಆದರೆ ಪ್ರವಾಸಿಗರಿಗೆ ಹೊಸ ಅನುಭವಗಳನ್ನು ನೀಡುವ ಮತ್ತು ಅವರ ವಾಸ್ತವ್ಯದ ಅವಧಿಯನ್ನು ಹೆಚ್ಚಿಸುವ ಯೋಜನೆಯಾಗಿದೆ. ಯೋಜನೆಯ ಅವಧಿ ನಾಲ್ಕು ವರ್ಷಗಳು. ಯೋಜನೆಯ ಭಾಗವಾಗಿ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಲಿಂಕ್ ಮಾಡಬಹುದಾದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಎಲ್ಲಾ ಉದ್ಯೋಗ ಕ್ಷೇತ್ರಗಳು ಸೃಷ್ಟಿಯಾಗುತ್ತದೆ. ಇದರೊಂದಿಗೆ ಪ್ರವಾಸೋದ್ಯಮದಿಂದ ಬರುವ ಆದಾಯದಲ್ಲಿ ಪಂಚಾಯಿತಿಯ ಸಾಮಾನ್ಯ ಕೂಲಿಕಾರರಿಗೆ ಪಾಲು ಸಿಗಲಿದೆ.
ಯೋಜನೆಯ ಮೂಲಕ ಸಮುದ್ರ, ಕೆರೆ, ಕೃಷಿ, ಜೀವ ವೈವಿಧ್ಯದಿಂದ ಕೂಡಿರುವ ವಲಿಯಪರಂಬ ಗ್ರಾಮ ಪಂಚಾಯಿತಿಯ ಸಾಧ್ಯತೆಗಳನ್ನು ಇಡೀ ಜಗತ್ತಿಗೆ ಸಾರಬಹುದಾಗಿದೆ. ಈ ಯೋಜನೆಯು ಪ್ರವಾಸೋದ್ಯಮಕ್ಕೆ ಹೆಚ್ಚಿನ ಸಾಮಥ್ರ್ಯವನ್ನು ಹೊಂದಿರುವ ಈವರೆಗೆ ಎಲ್ಲೂ ಗುರುತಿಸಿಕೊಳ್ಳದ ಸ್ಥಳೀಯ ಕೇಂದ್ರಗಳನ್ನು ಮುಖ್ಯವಾಹಿನಿಗೆ ತರುತ್ತದೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಯೋಜನೆಯ ಅನುμÁ್ಠನದ ಮೊದಲ ಹಂತವಾಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಬೀದಿ ಪ್ರವಾಸೋದ್ಯಮ ಜಾಗೃತಿ ಕಾರ್ಯಾಗಾರ ಇತ್ಯಾದಿ ಕಾರ್ಯಕ್ರಮಗಳನ್ನು ವಲಿಯಪರಂಬ ಪಂಚಾಯತ್ ಪ್ರಾರಂಭಿಸುತ್ತಿದೆ. ಮುಂದಿನ ತಿಂಗಳೊಳಗೆ ಪಂಚಾಯಿತಿಯ ಎಲ್ಲ ಜನರ ಸಭೆಯನ್ನು ಆಯೋಜಿಸಿ ಅನುಷ್ಠಾನ ಕ್ರಿಯಾ ಸಮಿತಿ ರಚಿಸಲು ಆಡಳಿತ ಸಮಿತಿ ನಿರ್ಧರಿಸಿತು. ಯೋಜನೆಯ ಅಂಗವಾಗಿ ಕೊಟ್ಟಾಯಂ ಕುಮಾರಕಂನಲ್ಲಿ ನಡೆದ ತರಬೇತಿ ತರಗತಿಯಲ್ಲಿ ಅಧ್ಯಕ್ಷ ವಿ.ವಿ.ಸಜೀವನ್, ಕಾರ್ಯದರ್ಶಿ ವಿನೋದ್ ಕುಮಾರ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಖಾದರ್ ಪಾಂಡ್ಯಾಲ, ಯೋಜನಾ ಸಮಿತಿ ಉಪಾಧ್ಯಕ್ಷ ವಿ.ಕೆ.ಕರುಣಾಕರನ್ ಅವರನ್ನೊಳಗೊಂಡ ತಂಡ ಭಾಗವಹಿಸಿತ್ತು.
ಅಭಿಮತ:
ಈ ಯೋಜನೆಯು ವಲಿಯಪರಂನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳಿಗೆ ಮತ್ತು ಏರಿಳಿತಗಳಿಗೆ ನಾಂದಿ ಹಾಡಲಿದೆ. ಈ ಯೋಜನೆಯು ಪ್ರವಾಸಿಗರಿಗೆ ದೇಶದ ಅನನ್ಯತೆಯನ್ನು ತಿಳಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಪ್ರವಾಸೋದ್ಯಮ ಅಭಿವೃದ್ಧಿಯನ್ನು ಜನರ ದೈನಂದಿನ ಜೀವನದೊಂದಿಗೆ ಜೋಡಿಸಲು ಸಹಾಯ ಮಾಡುತ್ತದೆ. ಹೊಸ ಪ್ರವಾಸೋದ್ಯಮ ಸಂಸ್ಕøತಿಗೆ ದೇಶವನ್ನು ಬೆಳೆಸುವುದು ಗುರಿಯಾಗಿದೆ.
_ ವಿ.ವಿ.ಸಜೀವನ್
ಅಧ್ಯಕ್ಷ. ವಲಿಯಪರಂಬ ಗ್ರಾ.ಪಂ.
………………………………………………………………………………………………………………………………………………
ಯೋಜನೆ ಅನುμÁ್ಠನಗೊಳ್ಳುತ್ತಿರುವ ಪಂಚಾಯಿತಿ ವ್ಯಾಪ್ತಿಯ ಜನರನ್ನು ತಲುಪುವ ಉದ್ದೇಶದಿಂದ ಬೀದಿ ಪ್ರವಾಸೋದ್ಯಮ ಯೋಜನೆ ಜಾರಿಗೊಳಿಸಲಾಗುತ್ತಿದೆ. ಸಂಪೂರ್ಣ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅನುμÁ್ಠನಗೊಳಿಸಲು ಉದ್ದೇಶಿಸಿರುವ ಈ ಯೋಜನೆಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪಂಚಾಯತ್ ಮತ್ತು ಪಂಚಾಯತ್‍ನ ಸ್ಥಳೀಯ ನಿವಾಸಿಗಳು ಪ್ರಮುಖ ಪಾತ್ರ ವಹಿಸುವ ರೀತಿಯಲ್ಲಿ ಅನುμÁ್ಠನಗೊಳಿಸಲು ಉದ್ದೇಶಿಸಲಾಗಿದೆ.
- ಟಿ.ಧನ್ಯ.
ಪ್ರವಾಸೋದ್ಯಮ ಮಿಷನ್ ಜಿಲ್ಲಾ ಸಂಯೋಜಕಿ







