ಮುಳ್ಳೇರಿಯ: ಶ್ರೀಮಂತ ಹಿನ್ನೆಲೆಯಿರುವ, ಫ್ರೌಢ ನೆಲೆಯ ವ್ಯಾಕರಣ, ಸಾಹಿತ್ಯ ಪರಂಪರೆಯ ಸಂಸ್ಕøತ ಭಾರತಕ್ಕಷ್ಟೇ ಅಲ್ಲದೆ ಜಗತ್ತಿಗೆ ಹಲವು ಜ್ಞಾನದ ಬೆಳಕನ್ನು ನೀಡಿದ ಭಾಷೆಯಾಗಿದೆ. ಹಲವು ಶತಮಾನಗಳ ದಾಸ್ಯದ ಸಂಕೋಲೆಗಳ ಹೊರತಾಗಿಯೂ ಸಂಸ್ಕøತ ಈ ನೆಲದಲ್ಲಿ ಇನ್ನೂ ನೆಲೆಗೊಂಡಿರುವುದು ಅದರ ಮಹತ್ವದ ಸಂಕೇತ ಎಂದು ಬೆಳ್ಳೂರು ಶಾಲಾ ಶಿಕ್ಷಕ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಮೋಹನ್ ಮಾಸ್ತರ್ ತಿಳಿಸಿದರು.
ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಂಸ್ಕøತ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶಾಲಾ ಹಿರಿಯ ಶಿಕ್ಷಕ ಕುಂಞÂ್ಞ ರಾಮ ಮಾಸ್ತರ್ ಮಾತನಾಡಿ, ಭಾರತದ ಪ್ರತಿಯೊಂದು ಭಾಷೆಯ ಮೇಲೂ ಸಂಸ್ಕøತ ಪ್ರಭಾವ ಗಾಢವಾಗಿರುವುದರಿಂದಲೇ ಅದನ್ನು ಪ್ರಾಚೀನ ಭಾಷೆ ಎನ್ನಲಾಗುತ್ತದೆ. ಗಣಿತ, ವ್ಯಾಕರಣ, ಜ್ಯೋತಿಷ್ಯ, ಆಯುರ್ವೇದ, ಯೋಗ, ವಿಜ್ಞಾನವೇ ಮೊದಲಾದ ಸರ್ವ ಕ್ಷೇತ್ರಗಳಲ್ಲೂ ಆಧಿಕಾರಿಕವಾಗಿ ಉಲ್ಲೇಖಗಳನ್ನು ನೀಡಿರುವ ಸಂಸ್ಕøತದ ಹಿರಿಮೆಯನ್ನು ಎಲ್ಲೆಡೆ ಪಸರಿಸುವ ಯತ್ನಗಳು ಆಗಬೇಕು. ವಿದ್ಯಾರ್ಥಿಗಳಲ್ಲಿ ಸಂಸ್ಕøತ ಅಧ್ಯಯನ ಕೈಗೊಳ್ಳಲು ಸಾಕಷ್ಟು ಆಕರಗಳು, ನಿರ್ದೇಶನಗಳು ಲಭಿಸುವಂತಾಗಬೇಕು ಎಂದು ಕರೆನೀಡಿದರು.
ಶಿಕ್ಷಕರಾದ ದಾಸಪ್ಪ ಮಾಸ್ತರ್ ಹಾಗೂ ನವೀನ್ ಉಪಸ್ಥಿತರಿದ್ದು ಶುಭಹಾರೈಸಿದರು. ಬಳಿಕ ಮೂರನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ವಿವಿಧ ತರಗತಿಗಲಲ್ಲಿ ಸಂಸ್ಕøತ ವ್ಯಾಸಂಗಮಾಡುವ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಗಣ್ಯರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಶಾಲಾ ಸಸ್ಕøತ ಶಿಕ್ಷಕಿ ಅಕ್ಷತಾ ಭಟ್ ಸಂಯೋಜಿಸಿದರು. ವಿದ್ಯಾರ್ಥಿಗಳಾದ ಅಭಿಷೇಕ್ ಸ್ವಾಗತಿಇಸ, ಶ್ರೀಹರಿ(ಎಂಟನೇ ತರಗತಿ ವಿದ್ಯಾರ್ಥಿಗಳು) ವಂದಿಸಿದರು. 10ನೇ ತರಗತಿ ವಿದ್ಯಾರ್ಥಿ ದೀಕ್ಷಿತ್ ನಿರೂಪಿಸಿದರು.




.jpg)
.jpg)
.jpg)
.jpg)
