ಕುಂಬಳೆ : ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ವತಿಯಿಂದ ಮಾಜಿ ವಿತ್ತ, ಕಾನೂನು ಸಚಿವರು, ರಾಜ್ಯಸಭಾ ವಿಪಕ್ಷ ನಾಯಕ ಹಾಗೂ ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿ. ಅರುಣ್ ಜೇಟ್ಲಿ ಅವರ 3 ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ಕುಂಬಳೆ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.
ಕುಂಬಳೆ ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಆರಿಕ್ಕಾಡಿ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮವನ್ನು ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಂಡಲ ಉಪಾಧ್ಯಕ್ಷ ಕೆ. ರಮೇಶ್ ಭಟ್, ಮಂಡಲ ಕಾರ್ಯದರ್ಶಿ ಕೆ. ಸುಧಾಕರ ಕಾಮತ್, ಜನಪ್ರತಿನಿದಿಗಳಾದ ಮೋಹನ್ ಬಂಬ್ರಾಣ, ವಿದ್ಯಾ ಎನ್ ಪೈ, ಅಜಯ ನಾೈಕಾಪು, ಹಿರಿಯರಾದ ಶಶಿ ಕುಂಬಳೆ, ವರುಣ್ ಕುಮಾರ್, ಮಂಡಲ ಸಮಿತಿ ಸದಸ್ಯ ಸುಬ್ರಮಣ್ಯ ನಾಯಕ್ ಉಪಸ್ಥಿತರಿದ್ದರು. ಬಿಜೆಪಿ ಪಂಚಾಯತಿ ಸಮಿತಿ ಪ್ರಧಾನ ಕಾರ್ಯದರ್ಶಿ ಜಿತೇಶ್ ನಾೈಕಾಪು ಸ್ವಾಗತಿಸಿ, ಸದಸ್ಯೆ ಪ್ರೇಮಾವತಿ ವಂದಿಸಿದರು.
ಕುಂಬಳೆಯಲ್ಲಿ ಅರುಣ್ ಜೇಟ್ಲಿ ಸಂಸ್ಮರಣೆ
0
ಆಗಸ್ಟ್ 25, 2022




.jpg)
