HEALTH TIPS

ಜನಪ್ರಿಯ ಸರ್ಕಾರವನ್ನು ಉರುಳಿಸಲು ಪ್ರಯತ್ನಗಳು; ರಾಜ್ಯಪಾಲರು ಬಿಜೆಪಿಯ ವಿಪ್; ರಾಜ್ಯಪಾಲರ ವಿರುದ್ಧ ಸಿಪಿಎಂ ಕಟು ಟೀಕೆ


            ತಿರುವನಂತಪುರ: ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
          ಕೇರಳವನ್ನು ಅಸ್ಥಿರಗೊಳಿಸಲು ಮೋದಿ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯಪಾಲರು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಅಣತಿಯಂತೆ ಮಾರ್ಪಟ್ಟಿದ್ದಾರೆ ಎಂದು ಕೊಡಿಯೇರಿ ಆರೋಪಿಸಿದರು. ಪಕ್ಷದ ಮುಖವಾಣಿ ದೇಶಾಭಿಮಾನಿಯಲ್ಲಿ ನಿನ್ನೆ ಬರೆದ ಲೇಖನದಲ್ಲಿ ಕೊಡಿಯೇರಿ ಟೀಕಿಸಿದ್ದಾರೆ.
          ಮೋದಿ ಸರಕಾರ ಜನಸಾಮಾನ್ಯರ ಸರಕಾರವನ್ನು ಉರುಳಿಸಲು ಯತ್ನಿಸುತ್ತಿದೆ. ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರವನ್ನು ಬಿಕ್ಕಟ್ಟಿಗೆ ಸಿಲುಕಿಸುತ್ತದೆ. ಕೇಂದ್ರೀಯ ಸಂಸ್ಥೆಗಳನ್ನೂ ಈ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ನಿಲವಾಡುಗಳಿಲ್ಲಾತ(ಧೋರಣೆಯಿಲ್ಲದೆ) ತನಿಯಾವರ್ತನಂ(ಈ ಹಿಂದಿನ ಕ್ರಮಗಳು) ಎಂಬ ಶೀರ್ಷಿಕೆಯಡಿ ಲೇಖನ ಪ್ರಕಟವಾಗಿದೆ.
           ರಾಜ್ಯಪಾಲರನ್ನೂ ಒಳಗೊಂಡಂತೆ ಜನರಿಂದ ಆಯ್ಕೆಯಾದ ಜನಪ್ರಿಯ ಸರಕಾರವನ್ನು ಕತ್ತು ಹಿಸುಕಿ, ಉಸಿರುಗಟ್ಟಿಸಿ ಉರುಳಿಸಲು ಕುಟಿಲ ಮಾರ್ಗದಲ್ಲಿ ಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಇದೆ. ಸಚಿವ ಸಂಪುಟದ ತೀರ್ಮಾನದಂತೆ ರಾಜ್ಯಪಾಲರು ನಡೆದುಕೊಳ್ಳಬೇಕು ಎನ್ನುತ್ತಾರೆ ಕೊಡಿಯೇರಿ ಬಾಲಕೃಷ್ಣನ್.
          ಕಣ್ಣೂರು ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಕೆ.ಕೆ.ರಾಗೇಶ್ ಅವರ ಪತ್ನಿ ಪ್ರಿಯಾ ವರ್ಗೀಸ್ ನೇಮಕಕ್ಕೆ ರಾಜ್ಯಪಾಲರು ತಡೆ ನೀಡಿದ್ದಾರೆ. ನೇಮಕಾತಿ ಪ್ರಕ್ರಿಯೆ ವಿರುದ್ಧದ ದೂರಿನ ಆಧಾರದ ಮೇಲೆ ಸಿಂಡಿಕೇಟ್‍ನ ಎಲ್ಲಾ ಪ್ರಕ್ರಿಯೆಗಳನ್ನು ತಡೆಹಿಡಿಯಲಾಗಿದೆ. ಇದು ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries