ವಯನಾಡು: ಜಿಲ್ಲಾಧಿಕಾರಿಗಳ ಚಿತ್ರವನ್ನು ಡಿಪಿಯಾಗಿಟ್ಟುಕೊಂಡು ನಕಲಿ ವಾಟ್ಸಾಪ್ ಖಾತೆ ಮೂಲಕ ಹಣ ಕದಿಯಲು ಯತ್ನ ನಡೆದಿದೆ. ವಯನಾಡ್ ಜಿಲ್ಲಾಧಿಕಾರಿ ಎ.
ಗೀತಾ ಹೆಸರಿನಲ್ಲಿ ಹಣ ವಸೂಲಿ ಮಾಡುವ ಯತ್ನ ನಡೆಯುತ್ತಿದೆ. ಈ ಬಗ್ಗೆ ಸ್ವತಃ ಗೀತಾ ಅವರೇ ತಮ್ಮ ಫೇಸ್ ಬುಕ್ ಖಾತೆ ಮೂಲಕ ಮಾಹಿತಿ ನೀಡಿದ್ದಾರೆ.
ಸಂದೇಶದ ಜತೆಗೆ ಜಿಲ್ಲಾಧಿಕಾರಿ ಹಣ ಕೇಳುತ್ತಿದ್ದ ವಾಟ್ಸ್ ಆಪ್ ಚಾಟ್ ನ ಸ್ಕ್ರೀನ್ ಶಾಟ್ ಕೂಡ ಶೇರ್ ಮಾಡಲಾಗಿದೆ.
ಟಿಪ್ಪಣಿಯ ಪೂರ್ಣ ರೂಪ:
ನಕಲಿಗಳ ಬಗ್ಗೆ ಎಚ್ಚರದಿಂದಿರಿ!, ನನ್ನ ಪ್ರೊಫೈಲ್ ಫೆÇೀಟೋವನ್ನು ಡಿಪಿಯಾಗಿ ನಕಲಿ ವಾಟ್ಸಾಪ್ ಖಾತೆಯಿಂದ ಅನೇಕ ಜನರು ನನ್ನನ್ನು ಸಂಪರ್ಕಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಈ ವಂಚನೆಗಳಿಗೆ ಬೀಳಬೇಡಿ. ಅದರಲ್ಲಿ ಕಾಣುವ ನಂಬರ್ ಬಳಸುವ ವ್ಯಕ್ತಿಗೆ ವಾಟ್ಸಾಪ್ ಇಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸೈಬರ್ ಪೋಲೀಸರಿಗೆ ದೂರು ನೀಡಲಾಗಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ.
ಇಂತಹ ನಕಲಿ ಪ್ರೊಫೈಲ್‍ಗಳಿಂದ ಅನೇಕ ಜನರು ತೊಂದರೆಗೀಡಾಗಿದ್ದಾರೆ. ಇಂತಹ ವಂಚನೆಗೆ ಬಲಿಯಾದರೆ ಕೂಡಲೇ ಸೈಬರ್ ಪೋಲೀಸರಿಗೆ ಮಾಹಿತಿ ನೀಡಿ. ಇಂತಹ ಅವ್ಯವಹಾರಗಳನ್ನು ಕಾನೂನು ಕ್ರಮದಿಂದ ಮಾತ್ರ ಕೊನೆಗಾಣಿಸಲು ಸಾಧ್ಯ. ಸಾಮಾಜಿಕ ಮಾಧ್ಯಮದಲ್ಲಿ ಎಚ್ಚರಿಕೆಯಿಂದ ತೊಡಗಿಸಿಕೊಳ್ಳಿ ಮತ್ತು ಸುರಕ್ಷಿತವಾಗಿರಿ.
ವಂಚಿಸುವವರ ಬಗ್ಗೆ ಎಚ್ಚರದಿಂದಿರಿ: ಜಿಲ್ಲಾಧಿಕಾರಿಯ ಚಿತ್ರವಿರುವ ನಕಲಿ ವಾಟ್ಸಾಪ್ ಖಾತೆ ಡಿಪಿ: ಅಪರಿಚಿತ ವ್ಯಕ್ತಿಗಳು ಹಣ ಸುಲಿಗೆಗೆ ಯತ್ನಿಸಿರುವ ಬಗ್ಗೆ ಸ್ವತಃ ಡಿಸಿಯಿಂದ ಸೂಚನೆ
0
ಆಗಸ್ಟ್ 19, 2022
Tags




.webp)
