HEALTH TIPS

ಚಹಾ ಎಲೆ ಕೀಳಿ ಮಕ್ಕಳನ್ನು ಪೋಷಿಸಿದ ತಾಯಿಯ ಮೂವರು ಮಕ್ಕಳಿಗೆ ಡಾಕ್ಟರೇಟ್

 

               ವಯನಾಡು: ಚಹಾ ತೋಪಿನಲ್ಲಿ ಚಹಾ ಎಲೆ ಕೀಳಿ ಮಕ್ಕಳನ್ನು ಪೋಷಿಸಿದ ಅಮ್ಮನಿಗೆ ಮೂವರು ಮಕ್ಕಳು ಮೂರು 'ಡಾಕ್ಟರೇಟು' ನ ಉಡುಗೊರೆಯನ್ನು ನೀಡಿದ್ದಾರೆ. ವಯನಾಡಿನ ಖದೀಜಾ ಕುಟ್ಟಿ ಅವರ ಮೂರು ಮಕ್ಕಳಾದ ನಜ್ಮುದ್ದೀನ್, ಸಿರಾಜುದ್ದೀನ್, ಶಿಹಾಬುದ್ದೀನ್ ವಿವಿಧ ವಿಷಯದಲ್ಲಿ ಡಾಕ್ಟರೇಟ್‌ ಪದವಿಯನ್ನು ಪಡೆದು ತಾಯಿಯನ್ನು ಧನ್ಯರನ್ನಾಗಿಸಿದ್ದಾರೆ.

                  ಖದೀಜಾ  ಕುಟ್ಟಿಯ ಪತಿ ಮುಹಮ್ಮದ್ ಮುಸ್ಲಿಯಾರ್ ನಿಧನರಾದಾಗ ಖದೀಜಾ ಅವರಿಗೆ 28 ವರ್ಷ. 6 ಮಕ್ಕಳೊಂದಿಗೆ ಸೋರುವ 3 ಕೋಣೆಗಳ ಎಸ್ಟೇಟ್‌ನಲ್ಲಿ ಜೀವನ. ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂಬ ಗಂಡನ ಆಸೆಯನ್ನು ಪೂರೈಸಲು ಚಹಾ ಎಲೆ ಕೀಳುವ ಕೆಲಸಕ್ಕೆ ಹೋಗಲು ಶುರು ಮಾಡಿಕೊಂಡರು. ಅದರ ಮೂಲಕ ಅಲ್ಪ ಪ್ರಮಾಣದ ಆದಾಯವನ್ನಷ್ಟೇ ಅವರಿಗೆ ಗಳಿಸಲು ಸಾಧ್ಯವಾಗುತ್ತಿತ್ತು. ವಯನಾಡ್ ಮುಸ್ಲಿಂ ಅನಾಥಾಲಯವೊಂದು ಮಕ್ಕಳ ಶಿಕ್ಷಣವನ್ನು ವಹಿಸಿಕೊಂಡಿತು. ಕುಟುಂಬದ ಇತರ ಸದಸ್ಯರೂ ಸಹಾಯಕ್ಕೆ ಬಂದರು. 4 ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಲಾಯಿತು. ಹಿರಿಯ ಮಗ ಅಬೂಬಕರ್ ಸಿದ್ದೀಕ್ ತಾಯಿಯ ಕಷ್ಟ ನೋಡಿ ಪದವಿಪೂರ್ವದಲ್ಲೇ ತಮ್ಮ ಅಧ್ಯಯನವನ್ನು ಮುಗಿಸಿದರು. ಉಮ್ಮಾ ಮತ್ತು ಅವರ ಒಡಹುಟ್ಟಿದವರನ್ನು ಪೋಷಿಸಲು ವಿದೇಶದಲ್ಲಿ ಕೆಲಸಕ್ಕೆ ಹೋದರು.

              ಎರಡನೇ ಮಗ ನಜ್ಮುದ್ದೀನ್ ಕುಟುಂಬದಲ್ಲಿ ಮೊದಲ ಡಾಕ್ಟರೇಟ್ ಪಡೆದ ವ್ಯಕ್ತಿ. ಅರೇಬಿಕ್‌ನಲ್ಲಿ ಪಿಎಚ್‌ಡಿ ಪಡೆದಿರುವ ನಜ್ಮುದ್ದೀನ್ ಪ್ರಸ್ತುತ ಡಬ್ಲ್ಯುಎಂಒ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅರೇಬಿಕ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಎರಡನೇ ಡಾಕ್ಟರೇಟ್ ಹೊಂದಿರುವ ಶಿಹಾಬುದ್ದೀನ್ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ದಿಂಡಿಗಲ್‌ನ ಗಾಂಧಿಗ್ರಾಮ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಸಿರಾಜುದ್ದೀನ್ ಪಿಹೆಚ್‌ಡಿ ಪದವಿ ಪಡೆದ ಖದೀಜಾ ಕುಟ್ಟಿಯ ಮಕ್ಕಳಲ್ಲಿ ಮೂರನೆಯವರ


ು. ಪ್ರಸ್ತುತ ಅವರು ತಿರುರಂಗಡಿಯ ಪಿಎಸ್‌ಎಂಒ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಇನ್ನೊಬ್ಬ ಪುತ್ರರನಾದ ಅಬ್ದುಲ್ ಮನಾಫ್ ಎಸ್ಟೇಟ್ ಗಳಲ್ಲಿ ಕೆಲಸ ಮಾಡುತ್ತಿದ್ದರೆ, ರಿಯಾಸುದ್ದೀನ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries