ನವದೆಹಲಿ: ವಿಡಿಯೋಲ್ಯಾನ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಅತ್ಯಂತ ಜನಪ್ರಿಯ ಮೀಡಿಯಾ ಪ್ಲೇಯರ್ ಸಾಫ್ಟ್‌ವೇರ್ ಮತ್ತು ಸ್ಟ್ರೀಮಿಂಗ್ ಮೀಡಿಯಾ ಸರ್ವರ್ VLC ಮೀಡಿಯಾ ಪ್ಲೇಯರ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
MediaNama ವರದಿಯ ಪ್ರಕಾರ, ವಿಎಲ್‌ಸಿ ಮೀಡಿಯಾ ಪ್ಲೇಯರ್ ಅನ್ನು ಭಾರತದಲ್ಲಿ ಸುಮಾರು ಎರಡು ತಿಂಗಳ ಹಿಂದೆಯೇ ನಿಷೇಧಿಸಲಾಗಿದೆ. ಆದರೆ, ಡೌನ್‌ಲೋಡ್ ಮಾಡಿಕೊಂಡಿರುವ ಸಾಧನಗಳಲ್ಲಿ ಈ ಸಾಫ್ಟ್‌ವೇರ್ ಕೆಲಸ ಮಾಡುತ್ತಿದೆ. ಈಮಧ್ಯೆ, ಈ ಬಗ್ಗೆ ಕಂಪನಿಯಾಗಲಿ ಅಥವಾ ಸರ್ಕಾರವಾಗಲಿ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಕೆಲವು ವರದಿಗಳ ಪ್ರಕಾರ, ವಿಎಲ್‌ಸಿ ಮೀಡಿಯಾ ಪ್ಲೇಯರ್ ಅನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕೆಲವು ತಿಂಗಳುಗಳ ಹಿಂದಷ್ಟೇ, ಚೀನಾ ಸರ್ಕಾರದ ಬೆಂಬಲಿತ ಸಿಕಾಡಾ ಹ್ಯಾಕರ್‍ಗಳು, ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಮಾಲ್‍ವೇರ್‍ಗಳನ್ನು ರವಾಸಿಸುತ್ತಿದ್ದಾರೆ. ಈ ಮಾಲ್‍ವೇರ್ ಸಿಸ್ಟಮ್‍ನಲ್ಲಿರುವ ಎಲ್ಲ ಮಾಹಿತಿಯನ್ನು ಕಲೆಹಾಕುತ್ತದೆ. ಅಲ್ಲದೇ ಚಾಲನೆಯಲ್ಲಿರುವ ಪ್ರಕ್ರಿಯೆಗಳು, ಡೌನ್ಲೋಡ್ ಮಾಡಿದ ಮಾಹಿತಿಗಳನ್ನು ಕದ್ದು, ಹ್ಯಾಕರ್‍ಗಳಿಗೆ ರವಾನಿಸುತ್ತಿವೆ ಎಂದು ತಜ್ಞರು ಮಾಹಿತಿಯನ್ನು ಕೊಟ್ಟಿದ್ದರು.
ಸದ್ಯ ದೇಶದಲ್ಲಿ ವಿಎಲ್‌ಸಿ ಮೀಡಿಯಾ ಪ್ಲೇಯರ್ ವೆಬ್‌ಸೈಟ್ ಮತ್ತು ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್ ಅನ್ನು ನಿಷೇಧಿಸಲಾಗಿದೆ. ಹೀಗಾಗಿ ದೇಶದಲ್ಲಿ ಯಾವುದೇ ಕೆಲಸಕ್ಕಾಗಿ ಇವುಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ACTFibernet, Jio, Vodafone-idea ಮತ್ತು ಇತರವುಗಳನ್ನು ಒಳಗೊಂಡಂತೆ ಎಲ್ಲಾ ಪ್ರಮುಖ ISP ಗಳಲ್ಲಿ VLC ಮೀಡಿಯಾ ಪ್ಲೇಯರ್ ಅನ್ನು ನಿಷೇಧಿಸಲಾಗಿದೆ.
2020 ರಲ್ಲಿ ಕೇಂದ್ರ ಸರ್ಕಾರವು PUBG ಮೊಬೈಲ್, ಟಿಕ್‌ಟಾಕ್, ಕ್ಯಾಮ್‌ಸ್ಕಾನರ್ ಮತ್ತು ಹೆಚ್ಚಿನವು ಸೇರಿದಂತೆ ನೂರಾರು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಅಲ್ಲದೆ, BGMI ಎಂದು ಕರೆಯಲ್ಪಡುವ PUBG ಮೊಬೈಲ್ ಇಂಡಿಯನ್ ಆವೃತ್ತಿಯನ್ನು ಕೂಡ ಇತ್ತೀಚೆಗೆ ಭಾರತದಲ್ಲಿ ನಿಷೇಧಿಸಲಾಗಿದೆ. ಇವುಗಳನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆಪ್ ಸ್ಟೋರ್‌ನಿಂದಲೂ ತೆಗೆದುಹಾಕಲಾಗಿದೆ. VLC ಮೀಡಿಯಾ ಪ್ಲೇಯರ್ ಅನ್ನು ಪ್ಯಾರಿಸ್ ಮೂಲದ VideoLAN ಸಂಸ್ಥೆಯಾದ ಇದನ್ನು ಅಭಿವೃದ್ಧಿಪಡಿಸಿದೆ.
Thread
Conversation

.jpg)

