ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಸಹಿತ ಕರಾವಳಿ ನಾಡಿನ ಅನೇಕ ದೇವಾಲಯಗಳಲ್ಲಿ ಬ್ರಹ್ಮವಾಹಕರಾಗಿ ಪ್ರಸಿದ್ದರಾಗಿದ್ದರು. ಮಿತಭಾಷಿಗಳಾಗಿದ್ದ ಅಡಿಗರು, ವೇದ ಪಾರಾಂಗತರೂ ಆಗಿದ್ದರು. ಶ್ರೀಕಣಿಪುರ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದರು. ಶ್ರೀಯುತರ ನಿಧನದಿಂದ ಹಿರಿಯ ವೈದಿಕಕೊಂಡಿ ಕಳಚಿದ್ದು ಭಜಕರ ಸಂತಾಪಕ್ಕೆ ಕಾರಣವಾಗಿದೆ.
ಕಣಿಪುರ ಸನ್ನಿಧಿಯ ಹಿರಿಯ ಅರ್ಚಕ, ಬ್ರಹ್ಮವಾಹಕ ವಾಸುದೇವ ಅಡಿಗ ಅಸ್ತಂಗತ
0
ಆಗಸ್ಟ್ 23, 2022
ಕುಂಬಳೆ : ಹಿರಿಯ ಪುರೋಹಿತ, ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದ್ದ , ಹಿರಿಯ ಬ್ರಹ್ಮವಾಹಕರೂ ಆದ ಕುಂಬಳೆ ಗೋಪಾಲಕೃಷ್ಣ ದೇವಸ್ಥಾನದ ಬಳಿ ನಿವಾಸಿ ಕೆ. ವಾಸುದೇವ ಅಡಿಗ (79 ವರ್ಷ )ನಿನ್ನೆ ರಾತ್ರಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು, ಇವರು ಪತ್ನಿ ಶ್ರೀದೇವಿ, ಮಕ್ಕಳಾದ ವಿದ್ಯಾಲಕ್ಷ್ಮಿ,ಪದ್ಮಪಲ್ಲವಿ, ಶಂಕರನಾರಾಯಣ ಅಡಿಗ ಹಾಗೂ ಅಳಿಯಂದಿರಾದ ರಘುನಾಥ ಹೊಳ್ಳ, ಶೈಲೇಶ್ ರಾವ್, ಸೊಸೆ ಪ್ರತಿಮಾ, ಮೊಮ್ಮಕ್ಕಳಾದ ಪರ್ಣಿಕ,ಪ್ರಣವಿ, ಸಾನ್ವಿ, ಸಾದ್ವಿ, ಶೌರ್ಯ ಕೃಷ್ಣ ಅಡಿಗ,ಸಹೋದರರಾದ ಬಾಲಕೃಷ್ಣ ಅಡಿಗ, ಮಾಧವ ಅಡಿಗ, ಗೋಪಾಲಕೃಷ್ಣ ಅಡಿಗ ತಂಗಿ ಪಾರ್ವತಿ ಹಾಗೂ ಅಪಾರ ಪ್ರಮಾಣದ ಬಂದು ಮಿತ್ರರನ್ನು ಅಗಲಿದ್ದಾರೆ.
Tags

-adiga.jpg)
