HEALTH TIPS

ಮಂಕಿ ಪಾಕ್ಸ್ ಸಾವು ಅಪೂರ್ವ: ದೇಶದ ಮೊದಲ ಘಟನೆ ಕೇರಳದಲ್ಲಿ: ತೀವ್ರ ಕಟ್ಟೆಚ್ಚದತ್ತ ಆರೋಗ್ಯ ಇಲಾಖೆ


              ಕೊಚ್ಚಿ: ದೇಶದಲ್ಲೇ ಪ್ರಥಮ ಬಾರಿಗೆ ಕೇರಳದಲ್ಲಿ ಮಂಗನ ಕಾಯಿಲೆ ದೃಢಪಟ್ಟ ಬಳಿಕ ಕೇರಳದ ಇತರೆಡೆ ಮತ್ತು ದೆಹಲಿಯಲ್ಲಿ ಪ್ರಕರಣಗಳು ವರದಿಯಾಯಿತು.  ಆದರೆ ವಿಶ್ವ ಆರೋಗ್ಯ ಸಂಸ್ಥೆ ಮಂಗನ ಕಾಯಿಲೆಯ ವಿರುದ್ಧ ತೀವ್ರ ನಿಗಾ ವಹಿಸುತ್ತಿರುವಾಗಲೇ ದೇಶದಲ್ಲಿ ಮೊದಲ ಮಂಗನ ಕಾಯಿಲೆಯ ಸಾವು ಕೂಡಾ ಕೇರಳದಲ್ಲೂ ವರದಿಯಾಗಿದೆ. ಆರೋಗ್ಯ ಇಲಾಖೆಗೆ ಆರಂಭದಲ್ಲಿ ಗಮನಕ್ಕೆ ಬಾರದೆ ಕೇರಳಕ್ಕೆ ಬಂದಿದ್ದ ಮಂಗನ ಕಾಯಿಲೆಗೆ ತುತ್ತಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಗೆ ಮುಂದಾಗಿದೆ.
          ತ್ರಿಶೂರ್‍ನಲ್ಲಿ ಸಾವನ್ನಪ್ಪಿದ ಯುವಕನಿಗೆ ವಿದೇಶದಿಂದ ಮಂಗನ ಕಾಯಿಲೆ ಅಂಟಿರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ಹೇಳಿಕೆ ನೀಡಿದ್ದರು. ಆದರೆ ಪುಣೆ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಅವರ ಸಾವಿಗೆ ಮಂಗನ ಕಾಯಿಲೆಯೇ ಎಂದು ಖಚಿತಪಡಿಸಲು ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಫಲಿತಾಂಶವು ಸಕಾರಾತ್ಮಕವಾಗಿದೆ. ಪ್ರಪಂಚದಾದ್ಯಂತ ಸುಮಾರು 20,000 ಮಂಕಿ ಪಾಕ್ಸ್ ಪ್ರಕರಣಗಳು ವರದಿಯಾಗಿದ್ದರೂ, ಈ ಕಾಯಿಲೆಯಿಂದ ಸಾವು ಅಪೂರ್ವ.  ತ್ರಿಶೂರಿನಲ್ಲಿ ಸಾವನ್ನಪ್ಪಿದ ಯುವಕನಿಗೆ ಇತರ ಆರೋಗ್ಯ ಸಮಸ್ಯೆಗಳೂ ಇದ್ದವು ಎಂದು ಆರೋಗ್ಯ ಇಲಾಖೆ ಹೇಳುತ್ತದೆ.
          ಪುನ್ನಯೂರು ಮೂಲದ 21 ವರ್ಷದ ಯುವಕ ಕಳೆದ ಜುಲೈ 21 ರಂದು ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದನು. ಅವರು ಸಣ್ಣ ರೋಗಲಕ್ಷಣಗಳನ್ನು ಹೊಂದಿದ್ದು, ಎರ್ನಾಕುಳಂನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಂತರ ಮನೆಗೆ ಮರಳಿದರು. ಇದಾದ ಬಳಿಕ 27ರಂದು ತ್ರಿಶೂರ್‍ನ ಖಾಸಗಿ ಆಸ್ಪತ್ರೆಗೂ ಬಂದಿದ್ದರು. ಆದರೆ ಅವರ ಸ್ಥಿತಿ ಹದಗೆಟ್ಟಿದ್ದು ಶುಕ್ರವಾರ ಸಾವಿಗೆ ಶರಣಾಗಿದ್ದಾರೆ.
         ಮೃತನ ಸಂಪರ್ಕ ಪಟ್ಟಿಯಲ್ಲಿರುವ 15 ಜನರನ್ನು ಸಹ ವೀಕ್ಷಣೆಯಲ್ಲಿ ದಾಖಲಿಸಲಾಗಿದೆ. ವಿಮಾನ ನಿಲ್ದಾಣದಿಂದ ಬಂದವರು, ಸ್ನೇಹಿತರು ಮತ್ತು ಸಂಬಂಧಿಕರು ಪಟ್ಟಿಯಲ್ಲಿದ್ದಾರೆ. ಅಲ್ಲದೆ ಆತನೊಂದಿಗೆ ಚೆಂಡಾಟ ಆಡಿದವರ ಮೇಲೂ ನಿಗಾ ಇಡಲಾಗಿದೆ.
         ಆಫ್ರಿಕಾ ಮತ್ತು ಯುರೋಪ್‍ನಲ್ಲಿ ಈ ಹಿಂದೆ ಮಂಗನ ಕಾಯಿಲೆಯಿಂದ ಸಾವುಗಳು ದೃಢಪಟ್ಟಿದ್ದರೂ, ಇದು ಭಾರತದಲ್ಲಿ ಮೊದಲನೆಯದು. ಕೋವಿಡ್‍ಗೆ ಹೋಲಿಸಿದರೆ ಮಂಕಿ ಪಾಕ್ಸ್ ತುಂಬಾ ಕಡಿಮೆ ರೋಗ ಮತ್ತು ಮರಣ ಪ್ರಮಾಣವನ್ನು ಹೊಂದಿದೆ. ಹಿಂದಿನ ವರ್ಷಗಳಲ್ಲಿ ಆಫ್ರಿಕನ್ ದೇಶಗಳಲ್ಲಿ ಇದು ದೃಢಪಟ್ಟಿದ್ದರೂ, ಈ ರೋಗವು ಜಾಗತಿಕವಾಗಿ ಹರಡಿರುವುದು ಇದೇ ಮೊದಲು. ಈ ಪರಿಸ್ಥಿತಿಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಅನ್ನು ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿದೆ.
               ಸಾವಿನ ನಂತರ ದೃಢಪಟ್ಟ ರೋಗ:
       ವಿದೇಶದಲ್ಲಿ ಪರೀಕ್ಷೆ ನಡೆಸಿದ್ದರೂ ಯುವಕನಿಗೆ ಮಂಗನ ಕಾಯಿಲೆ ತಗುಲಿರುವುದು ಸಾವಿನ ನಂತರವೇ ಗೊತ್ತಾಗಿದೆ. ಫುಟ್ಬಾಲ್ ಪಂದ್ಯದ ವೇಳೆ ಯುವಕ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಪ್ರೊಟೋಕಾಲ್ ಪ್ರಕಾರ ಯುವಕನ ಅಂತ್ಯಸಂಸ್ಕಾರವನ್ನು ಮಾಡಲಾಯಿತು. ಇದೇ ವೇಳೆ, ಮಂಗನ ಕಾಯಿಲೆಯು ದೊಡ್ಡ ಪ್ರಮಾಣದಲ್ಲಿ ಹರಡುವ ಸಾಮಥ್ರ್ಯವನ್ನು ಹೊಂದಿಲ್ಲದ ಕಾರಣ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವರು ಭಾನುವಾರ ಹೇಳಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries