HEALTH TIPS

ತಮಿಳುನಾಡಿನ ಪುರಾತನ ಕಾಲದ ವಿಗ್ರಹ ಅಮೆರಿಕದಲ್ಲಿ ಪತ್ತೆ

 

               ಚೆನ್ನೈ: ತಮಿಳುನಾಡಿನ ತಾಂಜಾವೂರು ಜಿಲ್ಲೆಯ ನದನಪುರೇಶ್ವರರ್‌ ಶಿವನ್‌ ದೇಗುಲದಿಂದ ನಾಪತ್ತೆಯಾಗಿದ್ದ 13ನೇ ಶತಮಾನದ ಚೋಳರ ಕಾಲದ ನೃತ್ಯ ಮಾಡುತ್ತಿರುವ ಸಂಬಂದರ್‌ ಅವರ ಕಂಚಿನ ಪ್ರತಿಮೆಯು ಅಮೆರಿಕದ ಕ್ರಿಸ್ಟೀಸ್‌ ಆಕ್ಷನ್‌ ಹೌಸ್‌ನಲ್ಲಿ ಪತ್ತೆಯಾಗಿದೆ ಎಂದು ರಾಜ್ಯದ ‍ಪುರಾತನ ಕಾಲದ ಮೂರ್ತಿಗಳನ್ನು ಪತ್ತೆ ಮಾಡುವ ಸಿಐಡಿ ದಳ ಶನಿವಾರ ತಿಳಿಸಿದೆ.

              ಅಲ್ಲದೆ ವಿಗ್ರಹವನ್ನು ವಾಪಸ್‌ ನೀಡುವಂತೆ ಕ್ರಿಸ್ಟೀಸ್‌ ಆಕ್ಷನ್‌ ಹೌಸ್‌ಗೆ ಪತ್ರ ಬರೆದಿದೆ. 1971 ಮೇನಲ್ಲಿ ಶಿವನ್‌ ದೇಗುಲದ ಸಂಬಂದರ್‌, ಕೃಷ್ಣ ಕಾಳಿಂಗ ನರ್ತನಾ, ಅಯ್ಯನಾರ್‌, ಅಗಸ್ತ್ಯ ಮತ್ತು ಪಾರ್ವತಿ ವಿಗ್ರಹಗಳು ಕಾಣೆಯಾಗಿದ್ದವು. ಸಿಐಡಿಯು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿತ್ತು. ಇತ್ತೀಚೆಗೆ ದೇಗುಲದ ಪಾರ್ವತಿ ವಿಗ್ರಹವೂ ಅಮೆರಿಕದಲ್ಲಿ ಪತ್ತೆಯಾಗಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries