ಕಾಸರಗೋಡು: ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕ ಅಂಗವಾಗಿ ಮೀನುಗಾರಿಕಾ ಇಲಾಖೆ ಹಾಗೂ ಕಾಞಂಗಾಡು ನಗರಸಭೆ ವತಿಯಿಂದ ಶನಿವಾರ ಕರಾವಳಿ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು. 'ಶುಚಿತ್ವ ಸಾಗರ ಸುಂದರ ಕರಾವಳಿ' ಯೋಜನೆಯ ಅಂಗವಾಗಿ ಹೊಸದುರ್ಗ ಕಡಾಪುರದಿಂದ ಮೀನಾಪೀಸ್‍ವರೆಗೆ ಕರಾವಳಿ ಪಾದಯಾತ್ರೆ ಜಾಗೃತಿ ಯಾತ್ರೆ ನಡೆಸಲಾಯಿತು. ಪುರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಮೀನುಗಾರಿಕೆ ವಿಸ್ತರಣಾಧಿಕಾರಿ ಅಲ್ಲಾವುದ್ದೀನ್ ಪ್ರಮಾಣ ವಚನ ಬೋಧಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಕೆ.ಲತಾ, ಪಿ.ಅಹಮದಾಲಿ, ಕೆ.ಅನೀಶನ್, ಕೆ.ವಿ.ಮಾಯಾಕುಮಾರಿ, ನಗರಸಭಾ ಸದಸ್ಯರಾದ ಕೆ.ಕೆ.ಜಾಫರ್, ಸಿ.ಎಚ್.ಸುಬೈದಾ, ಕೆ.ಕೆ.ಬಾಬು, ಅಸ್ಮಾ ಮಂಕೂಲ್, ಅನೀಸಾ ಹಮ್ಜಾ, ರಜಿಯಾ, ಆಯೇಷಾ, ಟಿ.ಮುಹಮ್ಮದ್‍ಕುಞÂ, ಅಬ್ದುಲ್ ರಹಿಮಾನ್, ಕ್ರಿಯಾ ಸಮಿತಿ ಸದಸ್ಯ ಎನ್.ವಿ.ಬಾಲನ್, ಶ್ರೀಜನ್, ರಾಜಾಶ್ ಹಾಗೂ ನಗರಸಭೆ ಆರೋಗ್ಯ ಮೇಲ್ವಿಚಾರಕಿ ಶೈನ್.ಕೆ.ಪಿ. ಮೀನುಗಾರಿಕಾ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಹಸಿರು ಕ್ರಿಯಾ ಸೇನೆ ಜನಪ್ರತಿನಿಧಿಗಳು, ಯುವ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.
'ಶುಚಿತ್ವ ಸಾಗರ ಸುಂದರ ಕರಾವಳಿ': ಮೀನುಗಾರಿಕಾ ಇಲಾಖೆಯಿಂದ ಕರಾವಳಿ ಪಾದಯಾತ್ರೆ
0
ಆಗಸ್ಟ್ 14, 2022
Tags





